ಲೋಕದರ್ಶನ ವರದಿ
ಉಗರಗೋಳ(ತಾ.ಸವದತ್ತಿ) 13: ನೇರೆ ನೂವಿನ ಮಧ್ಯಯೂ ಬಾನುವಾರ ಅದ್ದೂರಿ ಜಾತೆಗೆ ಎಳುಕೋಳ್ಳದ ನಾಡು ಯಲ್ಲಮ್ಮನಗುಡ್ಡ ಸಾಕ್ಷೀಯಾಯಿತು, ಶೀಗಿ ಹುಣ್ಣಿಮೆ ಅಂಗವಾಗಿ ದೇಶದ ನಾನಾ ಬಾಗಗಳಿಂದ ಬಂದಿದ್ದ ಲಕ್ಷಾಂತರ ಭಕ್ತರು ಆಧಿಶಕ್ತಿ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಪುಣಿತರಾದರು
ಏಳುಕೊಳ್ಳದ ನಾಡು ಯಲ್ಲಮ್ಮಗುಡ್ಡದಲ್ಲಿ ಬಾನುವಾರ ಶೀಗಿ ಹುಣ್ಣಿಗೆ ಅಂಗವಾಗಿ ಬೃಹತ್ ಜಾತ್ರೆ ಜರುಗಿತು. ಬೆಳಗ್ಗೆಯಿಂದ ಗುಡ್ಡದತ್ತ ಹರಿದು ಬಂದ ಲಕ್ಷಾಂತರ ಭಕ್ತರು, ಆದಿಶಕ್ತಿ ಶ್ರೀ ರೇಣುಕೆಗೆ ತಮ್ಮ ಶಕ್ತ್ಯಾನುಸಾರ ಪೂಜೆ ಸಲ್ಲಿಸಿ, ವಿಶೇಷ ದರ್ಶನ ಪಡೆದು ಪುನೀತರಾದರು.
ಉತ್ತರ ಕರ್ನಾಟಕದ ಎಲ್ಲ ಜಿಲ್ಲೆಗಳಿಂದಲೂ ಭಕ್ತರ ದಂಡು ಯಲ್ಲಮ್ಮನ ಸಾನ್ನಿಧ್ಯದತ್ತ ಮುಖಮಾಡಿತ್ತು. ಎತ್ತ ನೋಡಿದರೂ ಜನಜಾತ್ರೆಯೇ ಕಣ್ಣಿಗೆ ರಾಚುತ್ತಿತ್ತು. ಶೀಗಿ ಹುಣ್ಣಿಮೆಯಾದ್ದರಿಂದ ಅಲ್ಲೊಂದು ಗ್ರಾಮೀಣ ಹಳ್ಳಿ ಸೊಗಡಿನ ಜಾತ್ರೆಯೇ ನಡೆದಂತ ಅನುಭವ ಎಲ್ಲರಿಗೂ ಭಾಸವಾಗುತ್ತಿತ್ತು.
ಯಲ್ಲಮ್ಮಗುಡ್ಡದ ಬೆಟ್ಟದ ಪ್ರದೇಶಗಳಲ್ಲಿ ಠಿಕಾಣಿ ಹೂಡಿದ್ದ ಭಕ್ತರು ಮಲಪ್ರಭೆ ಮಡಿಲಲ್ಲಿನ ಜೋಗುಳಬಾವಿ, ಎಣ್ಣೆಹೊಂಡ ಹಾಗೂ ಗುಡ್ಡದ ಸುತ್ತಲಿನ ಬೊರ್ವೆಲ್ಗಳಲ್ಲಿ ಪವಿತ್ರಸ್ನಾನ ಮಾಡಿ ವಿಶೇಷ ನೈವೇದ್ಯ ತಯಾರಿಸಿ ಪರಡಿ ತುಂಬಿ ಅಮ್ಮನ ಕೃಪೆಗೆ ಪಾತ್ರರಾದರು. ಭಕ್ತರು ಹೋಳಿಗೆ, ಕಡಬು, ವಡೆ, ಭಜಿ ಮೊದಲಾದ ಖಾದ್ಯಗಳನ್ನು ತಯಾರಿಸಿದ್ದರು. ಧಾರ್ಮಿಕ ವಿಧಿವಿಧಾನಗಳ ನಂತರ ಎಲ್ಲರೂ ಒಗ್ಗೂಡಿ ಕುಳಿತು, ದೇವಿಯ ದರ್ಶನ ಪಡೆದು ಶೀಗಿ ಹುಣ್ಣಿಮೆ ಅರ್ಥಪೂರ್ಣವಾಗಿ ಆಚರಿಸಿದರು. ಯಲ್ಲಮ್ಮ ದೇವಸ್ಥಾನದ ಪ್ರಾಂಗಣದಲ್ಲಿ ಜನಜಾತ್ರೆಯೇ ನೆರೆದಿತ್ತು. ನಸುಕಿನ ಜಾವದಲ್ಲೇ ಸರದಿ ಸಾಲಲ್ಲಿ ನಿಂತಿದ್ದ ಲಕ್ಷಾಂತರ ಭಕ್ತವೃಂದ, ಭಯ-ಭಕ್ತಿಯಿಂದ ಆದಿಶಕ್ತಿ ರೇಣುಕೆ ದರ್ಶನ ಪಡೆದುಕೊಂಡಿತು. ಬೆಳಗ್ಗೆ ಮತ್ತು ಸಂಜೆ ವೇಳೆಗೆ, ವಿಶೇಷ ಪೂಜೆ-ಪುನಸ್ಕಾರಗಳು ಜರುಗಿದವು.
ಶೀಗಿ ಹುಣ್ಣಿಮೆಯ ಜಾತ್ರೆಯಲ್ಲಿ ಯಲ್ಲಮ್ಮನಗುಡ್ಡದ ವ್ಯಾಪಾರಸ್ಥರಿಗೆ ರೈತರೇ ಜೀವಾಳ. ನೇರೆ ಬಂದು ರೈತರ ಬದುಕನ್ನೇ ಕಸಿದ ವರುಣದೇವ. ಜಾತ್ರೆಯಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಾರೆಯೋ ಅಥವಾ ಇಲ್ಲವೋ ಎಂಬ ಆತಂಕ ಅವರನ್ನು ಕಾಡುತ್ತಿತ್ತು. ಆದರೆ, ರೈತರು ನಿರೀಕ್ಷೆಗೂ ಮೀರಿ ಜಾತ್ರೆಯಲ್ಲಿ ಪಾಲ್ಗೊಂಡು ಅಚ್ಚರಿ ಮೂಡಿಸಿದರು. 10 ಲಕ್ಷಕ್ಕೂ ಹೆಚ್ಚು ಜನರು ಸೇರಿದ್ದರಿಂದ ವ್ಯಾಪಾರಸ್ಥರ ಮೊಗದಲ್ಲಿ ಸಹಜವಾಗಿ ಮಂದಹಾಸ ಮನೆಮಾಡಿತ್ತು. ಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಯಲ್ಲಮ್ಮಗುಡ್ಡ, ಉಗರಗೋಳ ಹಾಗೂ ಜೋಗುಳಬಾವಿ ಮಾರ್ಗದ ರಸ್ತೆಗಳು ಜನದಟ್ಟಣೆ ಮತ್ತು ವಾಹನದಟ್ಟಣೆಯಿಂದ ಕೂಡಿದ್ದವು. ಯಲ್ಲಮ್ಮನ ಗುಡ್ಡದಿಂದ ಉಗರಗೋಳ, ಹಿರೆಕುಂಬಿ ಚುಳಕಿ, ಚಿಕ್ಕಂಬಿ, ಆಚಮಟ್ಟಿ, ಚಿಕ್ಕನರಗುಂದವರೆಗೆ ವಾಹನಗಳ ಸಾಲು ಕಂಡುಬಂದಿತು ಸಂಜೆಯಾಗುತ್ತಾ ಬಂದರು ವಾಹಣಗಳ ಸಾಲು ಇನ್ನೂ ಹೇಚ್ಚಾಗುತ್ತಲೇ ಸಾಗಿತ್ತು. ಸಿಪಿಆಯ್ ಎಮ್ ಆಯ್ ನಡುವಿನಮನಿ ಪಿಎಸ್ಆಯ್ ಸಂಗನೌಡ್ರ, ಎಎಸ್ಆಯ್ ಕೆ ಎಮ್ ಕೂಣ್ಣೂರ,ಹಾಗೂ ಸಿಬ್ಬಂದಿ ಯಾವುದೆ ಅಹಿತಕರ ಘಟನೆಗಳು ಜರುಗದಂತೆ ರಸ್ತೆ ಉದ್ದಕ್ಕೂ ಸೂಕ್ತ ಪೊಲೀಸ್ ಬಂದುಬಸ್ತ್ ಎರ್ಪಡಿಸಿದ್ದರು.