ಹಿಂದೂ-ಮುಸ್ಲಿಂ ಬಾಂಧವರಿಂದ ಗಜಾನನಿಗೆ ವಿಶೇಷ ಪೂಜೆ

ಲೋಕದರ್ಶನವರದಿ

ಶಿಗ್ಗಾವಿ : ಶಿಗ್ಗಾವಿ ಪಟ್ಟಣದ ಪಾದಗಟ್ಟಿ ಹತ್ತಿರವಿರುವ ಸಾಲಗೇರಿ ಓಣಿಯಲ್ಲಿರುವ ಪಾದಗಟ್ಟಿ ಗಣೇಶ ಎಂದೇ ಖ್ಯಾತಿವೆತ್ತ ಪಾದಗಟ್ಟಿ ಗಣೇಶನಿಗೆ ಮೊಹರಂ ಹಾಗೂ ಗಣೇಶ ಚತುಥರ್ಿ ಪ್ರಯುಕ್ತ ಪಟ್ಟಣದ ಹಿಂದೂ-ಮುಸ್ಲಿಂ ಬಾಂಧವರು ಒಟ್ಟುಗೂಡಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಶುಕ್ರವಾರ ಭಾವೈಕ್ಯತೆ ಮೆರೆದರು.

ಪೂಜಾ ನಂತರದ ಕಾರ್ಯಕ್ರಮದಲ್ಲಿ ಸಾನಿದ್ಯ ವಹಿಸಿದ್ದ ವಿರಕ್ತಮಠದ ಸಂಗನಬಸವ ಮಹಾಸ್ವಾಮಿಗಳು ಮಾತನಾಡಿ, ಈ ಮೊದಲು ಸ್ವಾತಂತ್ರಾ ಪೂರ್ವದಲ್ಲಿ ಜಾತಿ ಬೇಧ ಮರೆತು ಹೋರಾಡಿದ ಫಲವಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ, ಅದನ್ನ ಮನದಲ್ಲಿಟ್ಟುಕೊಂಡು ನಾವೆಲ್ಲ ಒಂದು ಎಂಬ ಭಾವನೆಯಿಂದ ಬಾಳ ಬೇಕಿದೆ ಇದಕ್ಕೆ ಪುಷ್ಟಿ ತುಂಬುವ ರೀತಿಯಲ್ಲಿ ಶಿಗ್ಗಾವಿ ಪಟ್ಟಣದ ಹಿಂದೂ - ಮುಸ್ಲಿಂ ಬಾಂಧವರು ಒಗ್ಗೂಡಿ ಗಜಾನನಿಗೆ ವಿಶೇಷ ಪೂಜೆ ಸಲ್ಲಿರುವುದು ಒಳ್ಳೆಯ ಬೆಳವಣಿಗೆಯಾಗಿದ್ದು ಇದು ಸೌಹಾರ್ಧತೆಯ ನಾಡು ಶಿಗ್ಗಾವಿ ಎಂಬುದಕ್ಕೆ ಇಂದು ಅರ್ಥ ಬಂದಂತಾಗಿದೆ ಎಂದು ಮಾಮರ್ಿಕವಾಗಿ ನುಡಿದರು.

ಇದೇ ಸಂದರ್ಭದಲ್ಲಿ ವಿಶೇಷ ಪೂಜೆಯ ನಂತರ ಮುಸ್ಲಿಂ ಬಾಂಧವರಿಂದ ಎಲ್ಲ ತರಹದ ಹಣ್ಣಿನ ಶರಬತ್ ಸೇವೆ ಮಾಡಲಾಯಿತು.

ಮುಸ್ಲಿಂ ಹಿರಿಯರಾದ ಅಬ್ದುಲ್ವಾಹಿದ್ ಮುಲ್ಲಾ, ಜಿಲಾನಿ ಜಂಗ್ಲಿ, ಇಮಾಮ್ಹುಸೇನ ಅದಂಬಾಯಿ, ಮಕ್ಬುಲ್ಅಹ್ಮದ್ ಗುಜ್ಜರ, ಪ್ರಶಾಂತ ಬಡ್ಡಿ, ಮುಕ್ತಿಯಾರಖಾನ್ ತಿಮ್ಮಾಪೂರ, ಮುನ್ವರ್ ಬೇಗ್ ಮಿಜರ್ಾ, ಅಬ್ದುಲ್ಲಾ ಗೊಟಗೋಡಿ, ವೆಂಕಟೇಶ ಬಂಡಿವಡ್ಡರ, ಹಜರೇಸಾಬ್ ಲಕ್ಷ್ಮೇಶ್ವರ, ಶಿವರಾಜ ಕ್ಷೌರದ, ಅಬ್ದುಲ್ ಗಫರ್ ಗುಜ್ಜರ, ಆಸೀಫ್ ನೆತರ್ಿ, ಮಲಿಕ್ಜಾನ್ ಸವಣೂರ, ಶಾಹನು ಹಲಗಿಬಡಿ, ಮೌಲಾಲಿ ಟಪಾಲ, ರಹೀಮ್ಖಾನ್ ಸೂರಣಗಿ, ಗುಲಾಂಅಹ್ಮದ್ ನಾಶಿಪುಡಿ ಸೇರಿದಂತೆ ಗಣೇಶ ಮಂಡಳಿಯ ಸದಸ್ಯರು ಹಾಗೂ ಹಿಂದೂ ಮುಸ್ಲಿಂ ಬಾಂಧವರು ಇದ್ದರು.