ರೈತರಗೆ ಮಣ್ಣು ಮತ್ತು ನೀರಿನ ಪರೀಕ್ಷೆಯ ವಿಶೇಷ ಶಿಬಿರ
ವಿಜಯಪುರ 25 : ನಗರದ ಬಿ.ಎಲ್.ಡಿ.ಇ ಸಂಸ್ಥೆಯಎಸ್.ಬಿ ಕಲಾ ಮತ್ತು ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದ ರಾಸಾಯನಶಾಸ್ತ್ರ ವಿಭಾಗ ಐಕ್ಯೂಎಸಿ ಸಹಯೋಗದಲ್ಲಿ ದಿ. 24 ಇಟ್ಟಂಗಿಹಾಳ ಗ್ರಾಮದಲ್ಲಿ ರೈತರ ಗೋಸ್ಕರಒಂದು ದಿನದ ಮಣ್ಣು ಮತ್ತು ನೀರಿನ ಪರೀಕ್ಷೆಯ ಬಗ್ಗೆ ವಿಶೇಷ ಶಿಬಿರವನ್ನು ಅಯೋಜಿಸಲಾಯಿತು.ವಿದ್ಯಾರ್ಥಿಗಳಿಗೆ ವಿಶೇಷ ಶಿಬಿರದಲ್ಲಿ ಮಣ್ಣು ಮತ್ತು ನೀರಿನ ಪರೀಕ್ಷೆಯ ಬಗ್ಗೆ ವಿಭಾಗದ ಪ್ರಾಧ್ಯಾಪಕರಾದ ಡಾ.ಎಸ್ ಡಿ ಲಮಾಣಿ ಮಹೇಶ್‌ಕುಮಾರ್ ಕೆ ಡಾಎಸ್‌ಎನ್ ಉಂಕಿ ಪ್ರೊ.ಮಾಲತಿಚನಗೊಂಡ ಪ್ರೊ.ಅನಿಲ್ ಪಾಟೀಲ್ ಇತರ ಬೋಧಕ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಮಣ್ಣು ಮತ್ತು ನಿರಿನ ವಿಶ್ಲೇಷಣೆ ಮಾಡಲು ಮಾರ್ಗದರ್ಶನ ನೀಡಿದರು.ಗ್ರಾಮದ ರೈತರಿ ಗೋಸ್ಕರ ಉಚಿತವಾಗಿ ಮಣ್ಣು ಮತ್ತು ನೀರಿನ ಪರೀಕ್ಷೆಯನ್ನು ಮಾಡಿಕೊಟ್ಟಿದ್ದಕ್ಕೆ ಗ್ರಾಮದ ರೈತ ಮುಖಂಡರಾದ ವಾಸು ತಂಗಡಿ ಬಿ ಆರ್‌ಕುಲಕರ್ಣಿ ವಿಠ್ಠಲ್ ಮುಚ್ಚಂಡಿ ಕಲ್ಲಪ್ಪಕಕಮರಿ, ಬಾಬು ಗುಲಗಂಚಿ ಸಿದ್ದು ಗುಲಗಂಚಿ ಇವರು ಬಿ.ಎಲ್.ಡಿ.ಇ ಸಂಸ್ಥೆಯ ಅಧ್ಯಕ್ಷರು ಹಾಗೂ ಸಚಿವರಾದಡಾ ಎಂ ಬಿ ಪಾಟೀಲರಿಗೆ,ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ.ಆರ್.ಎಂ.ಮಿರ್ದೆ ಹಾಗೂ ರಾಸಾಯನಶಾಸ್ತ್ರವಿಭಾಗದ ಸಿಬ್ಬಂದಿ ಮತ್ತು ವಿದ್ಯಾರ್ಥಿನಿಯರಿಗೆ ಗ್ರಾಮದ ರೈತರೆಲ್ಲರೂ ಧನ್ಯವಾದಗಳು ಸಮರ್ಿಸಿದರು.ಈ ಶಿಬಿರಕ್ಕೆ ತಮ್ಮ ಗ್ರಾಮವನ್ನು ಆಯ್ಕೆ ಮಾಡಿ ರೈತರನ್ನು ಆಹ್ವಾನಿಸಿ ಸಮಾವೇಶ ಮಾಡಿಶಿಬಿರದ ಉದ್ದೇಶರೈತರಿಗೆ ತಿಳಿಸಿ ಶಿಬಿರವನ್ನು ಯಶಸ್ವಿ ಗೋಳಿಸಿದ ಬಿಎಲ್‌ಡಿಇ ಸಂಸ್ಥೆಯ ಕಾನೂನು ಕೋಶದ ಸಹ ನಿರ್ದೇಶಕರಾದ ಸೂರ್ಯಕಾಂತ ಬಿರಾದಾರ್ ಅಭಿನಂದನೆಗಳು ಸಲ್ಲಿಸಿದರು.ಈ ಸಂದರ್ಭದಲ್ಲಿ ರಾಸಾಯನಶಾಸ್ತ್ರ ವಿಭಾಗ ಪ್ರಾಧ್ಯಾಪಕರಾದ ಡಾ. ಎಸ್ ಡಿ ಲಮಾಣಿ ಡಾ.ಮಹೇಶ್‌ಕುಮಾರ್‌ಕೆ ಡಾಎಸ್‌ಎನ್ ಉಂಕಿ ಪ್ರೊ.ಮಾಲತಿಚನಗೊಂಡ ಪ್ರೊ.ಅನಿಲ್ ಪಾಟೀಲ್ ಪ್ರೊ.ಶಿವರಾಜ ಪಾಟೀಲ ಪ್ರೊ.ವಿನೋದ ಪ್ರೊ.ವಿದ್ಯಾ ಪ್ರೊ.ಲಕ್ಷ್ಮೀಬೋಧಕೇತರ ಸಿಬ್ಬಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.