ಕೃಷಿಮೇಳದ ನಾಲ್ಕನೇ ದಿನ ಏರಿ್ಡಸಿದ ವಿಶೇಷ ಕಾರ್ಯಕ್ರಮಗಳು
Special programs held on the fourth day of the Krishi Mela
ಕೃಷಿಮೇಳದ ನಾಲ್ಕನೇ ದಿನ ಏರಿ್ಡಸಿದ ವಿಶೇಷ ಕಾರ್ಯಕ್ರಮಗಳು
ಧಾರವಾಡ 16: ಕೃಷಿ ಮೇಳದ ನಾಲ್ಕನೇ ದಿನ, ವಿಶೇಷ ತರಬೇತಿಗಳ ಸರಣಿಯಡಿ ಬೆಳಿಗ್ಗೆ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಜಾನುವಾರು ನಿರ್ವಹಣೆಯಲ್ಲಿ ನವೀನ ತಂತ್ರಜ್ಞಾನಗಳು ಎಂಬ ತರಬೇತಿಯನ್ನು ಆಯೋಜಿಸಲಾಗಿತ್ತು. ಅನೀಲಕುಮಾರ ಜಿ.ಕೆ., ರಸಮೇವು ಮತ್ತು ಒಣ ಹಸಿರು ಮೇವಿನ ಉತ್ಪಾದನೆಯ ನಾವಿನ್ಯತೆಗಳು, ಡಾ. ಜಯಶ್ರೀ ಪತ್ತಾರ, ಎತ್ತರಿಸಿದ ಅಟ್ಟಣಿಗೆಯ ಕೊಟ್ಟಿಗೆ ಪದ್ಧತಿಯಲ್ಲಿ ಸಮಗ್ರ ಕುರಿ / ಮೇಕೆ ಮತ್ತು ಕೋಳಿ ಸಾಕಾಣಿಕೆ, ಡಾ. ವೆಂಕಣ್ಣ ಬಳಗಾನೂರರವರು ಪಶು ಸಂಗೋಪನೆಯಲ್ಲಿ ಸರ್ಕಾರದ ಸವಲತ್ತುಗಳು ಮತ್ತು ಡಾ. ಮಹೇಶ ಕಡಗಿ ಮೇವಿನ ಬೆಳೆಗಳು ಮತ್ತು ಜಾನುವಾರುಗಳಿಗೆ ಪೂರಕ ಆಹಾರವಾಗಿ ಅಝೇಲ್ಲಾ ಎಂಬ ವಿಷಯದ ಕುರಿತು ಮಾತನಾಡಿದರು. ಮಧ್ಯಾಹ್ನ ನಡೆದ ಇನ್ನೊಂದು ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಹೈ-ಟೆಕ್ ತೋಟಗಾರಿಕಾ ತಂತ್ರಜ್ಞಾನಗಳು ಎಂಬ ವಿಷಯದ ಮೇಲೆ ಡಾ. ಎಮ್. ಎಸ್. ಬಿರಾದಾರ, ಪ್ರಾಧ್ಯಾಪಕರು(ತೋ.) ರೈತರಿಗೆ ಮಾಹಿತಿ ನೀಡಿದರು. ಜಾಗತೀಕರಣ, ಆರ್ಥಿಕ ಉದಾರೀಕರಣ ಮತ್ತು ಖಾಸಗೀಕರಣದ ಪ್ರಭಾವದಿಂದ ತೋಟಗಾರಿಕೆಗೆ ವಿಫುಲ ಅವಕಾಶಗಳಿದ್ದು, ಆಧುನಿಕ ತೋಟಗಾರಿಕೆಗೆ ಹೆಚ್ಚಿನ ಬೇಡಿಕೆಯಿದೆ. ತೋಟಗಾರಿಕೆಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆಯ ವಿಧಾನಗಳಾದ ಹನಿ ನೀರಾವರಿ, ಮಲ್ಚಿಂಗ್, ಏರುಮಡಿ, ಹಂದರ (ಪೆಂಡಾಲ್) ಬೇಸಾಯ, ಸಸಿ ಕಟ್ಟುವಿಕೆ, ಅಧಿಕ ಸಾಂದ್ರತೆ, ಸಮಗ್ರ ಬೆಳೆ ನಿರ್ವಹಣೆ, ಕೊಯ್ಲೋತ್ತರ ತಂತ್ರಜ್ಞಾನ, ಯಾಂತ್ರೀಕರಣ, ಹೈಡ್ರೋಫೋನಿಕ್ಸ್ ಮತ್ತು ಏರೋಫೋನಿಕ್ಸ್ ತಂತ್ರಜ್ಞಾನಗಳ ಬಗ್ಗೆ ವಿಶೇಷ ಮಾಹಿತಿ ನೀಡಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 