ಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನದ ಪ್ರಯುಕ್ತ ವಿಶೇಷ ಕಾರ್ಯಕ್ರಮ

ಹಣಕಾಸು ಸೇರ್ಪಡೆ ಪರಿಪೂರ್ಣತೆ ಅಭಿಯಾನದ ಪ್ರಯುಕ್ತ ವಿಶೇಷ ಕಾರ್ಯಕ್ರಮ Special program on the occasion of the Financial Inclusion Perfection Campaign

ಯಮಕನಮರಡಿ, 19 :-ಬ್ಯಾಂಕಿನ ವ್ಯವಹಾರವನ್ನು ಇಂದಿನ ಮಹಿಳಾ ಸ್ತೀಯರಿಗೆ ಹೇಳುವ ಅವಶ್ಯಕತೆ ಇಲ್ಲಾ ಏಕೆಂದರೆ ಅವರು ಪ್ರತಿ ಮನೆಯಲ್ಲಿ ಮನೆಯ ಎಲ್ಲ ವ್ಯವಹಾರವನ್ನು ಅವರೆ ನಡೆಸುತ್ತಾರೆ ಅಂತಹ ಕುಟುಂಬಗಳು ಇಂದು ಆರ್ಥಿಕವಾಗಿ ಬೆಳೆಯುತ್ತಿವೆ ಎಂದು ಬೆಳಗಾವಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ ಹೇಳಿದರು.   

ಅವರು ಶುಕ್ರವಾರ ಯಮಕನಮರಡಿ ಗ್ರಾಮದ ಹುಣಸಿಕೊಳ್ಳಮಠದ ಸಮುದಾಯ ಭವನದಲ್ಲಿ ಕೇನರಾ ಬ್ಯಾಂಕಿನ ಮುಖ್ಯ ಕಛೇರಿ, ಜಿಪಂ, ಬೆಳಗಾವಿ ಹಾಗೂ ಕೇನರಾ ಬ್ಯಾಂಕ್ ಯಮಕನಮರಡಿ ಶಾಖೆಯ ಸಹಯೋಗಢದಲ್ಲಿ ಹಣಕಾಸು ಸೇರೆ​‍್ಡ ಪರಿಪೂರ್ಣತೆ ಅಭಿಯಾನದ ಪ್ರಯುಕ್ತ ವಿಶೇಷ ಕಾರ್ಯಕ್ರಮದಲ್ಲಿ  ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು ಇಂದು ಕೇನರಾ ಬ್ಯಾಂಕ್ವು ಪ್ರತಿ ವ್ಯಕ್ತಿಗೆ ವಿಮಾ ಸೌಲಭ್ಯವನ್ನು ಮಾಡಿಕೊಳ್ಳುಲು ಅವಕಾಶವನ್ನು ನೀಡಿದೆ ಇದರ ಸದ್ಬಳಿಕೆ ಗ್ರಾಹಕರು ಪಡೆಯಬೇಕು ಮತ್ತು ಈ ಬ್ಯಾಂಕಿನಿಂದ ರೈತರಿಗೆ, ಮಹಿಳಾ ಸ್ವಹಾಯ ಸಂಘಗಳಿಗೆ, ವಿದ್ಯಾರ್ಥಿಗಳಿಗೆ ಅನೇಕ ರೀತಿಯಲ್ಲಿ ಸಾಲ ಸೌಲಭ್ಯವನ್ನು ನೀಡುತ್ತಾ ಇದೆ ಅದನ್ನು ಪಡೆದು ಆರ್ಥಿಕವಾಗಿ ಬೆಳೆಯಬೇಕು ಎಂದರು.      ಕಾರ್ಯಕ್ರಮದಲ್ಲಿ ಬೆಂಗಳೂರಿನ ಎಸ್‌ಎಲ್ಬಿಸಿ ಜನರ್ ಮಾನ್ಯೇಜರ್ ಬಾಸ್ಕರ ಚಕ್ರವರ್ತಿ, ಚಿಕ್ಕೋಡಿ ಮುಖ್ಯ ಕಛೇರಿಯ ಮಾನ್ಯಜರ ಎಂ. ಪಣಿಶಾಯನ್ ಮಾತನಾಡಿ ಅವರು ವಿಮಾ ಸೌಲಭ್ಯ ಇಲ್ಲದೆ ಹೋದರೆ ಬಹಳಷ್ಟು ಕುಟುಂಬಗಳ ಆರ್ಥಿಕ ಮಟ್ಟ ಕುಸಿಯಲು ಆರಂಭವಾಗುವದು ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಕೇನರಾ ಬ್ಯಾಂಕನಲ್ಲಿ ವಿಮಾ ಸೌಲಭ್ಯ ಪಡೆಯಲು ಗ್ರಾಹಕರಿಗೆ ಕರೆ ನೀಡಿದರು.   

ಈ ಸಂದರ್ಭದಲ್ಲಿ ನಾಗನೂರ ಕೆ.ಎಂ ಗ್ರಾಮದ ಹೊಳೆಮ್ಮಾ ದೇವಿ ಸ್ವಸಹಾಯ ಸಂಘ ಮತ್ತು ಕಾವೇರಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸಾಲ ವಿತರಣಾ ಪತ್ರವನ್ನು ಬೆಳಗಾವಿ ಸಿಇಒ ರಾಹುಲ ಶಿಂಧೆ ನೀಡಿದರು. ಈ ವೇದಿಕೆಯಲ್ಲಿ ಯಮಕನಮರಡಿ ಗ್ರಾಪಂ ಅಧ್ಯಕ್ಷೆ ಆಸ್ಮಾ ಫಣಿಬಂಧ, ಬೆಳಗಾವಿಯ ಕೇನರಾ ಬ್ಯಾಂಕಿನ ಪ್ರಶಾಂತ ಘೋಡಕೆ, ಪಿಡಿಒ ಎಸ್‌.ಎಸ್‌.ಢಂಗ, ಆನಂದ ಹೊಳೆನ್ನವರ, ಚಿಕ್ಕೋಡಿ ಆರ್‌ಒ ಜುಗಳ ಚೌವ್ಹಾಣ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು. ಯಮಕನಮರಡಿ ಕೆನರಾ ಬ್ಯಾಂಕ್ ಮಾನೇಜರ ನರಸಿಂಮ ಸ್ವಾಮಿ ಮುಂತಾದವರು ಇದ್ದರು. ಗಾಯತ್ರಿ ಮಹಿಳಾ ಸಂಘದಿಂದ ಸ್ವಾಗತ ಗೀತೆ ಹಾಡಿದರು. ರಘವೀರ ನವಡೆದ ಜಗದೀಪ ಮದೋಳ ನಿರೂಪಿಸಿದರು. ಮಹೇಶ ಹರಿಜನ ವಂದಿಸಿದರು.