ಅಮೀನಗಡ ಪಪಂಗೆ ವಿಶೇಷ ಅನುದಾನ

ಲೋಕದರ್ಶನವರದಿ

ಹುನಗುಂದ: ಅಮೀನಗಡ ಪಪಂಗೆ ಮುಖ್ಯಮಂತ್ರಿಗಳ ಪ್ರದೇಶಾಭಿವೃದ್ಧಿ ಯೋಜನೆಯಿಂದ ಎರಡುವರೆ ಕೋಟಿ ವಿಶೇಷ  ಅನುದಾನ ನೀಡಲಾಗಿದೆ ಎಂದು ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

 ಪಟ್ಟಣದ ಪಪಂಯಲ್ಲಿ 2018-19ನೇ ಸಾಲಿನ ವಿವಿಧ ಯೋಜನೆಯಡಿ ಫಲಾನುಭವಿಗಳಿಗೆ ವೈಯಕ್ತಿಕ ಸೌಲಭ್ಯ ವಿತರಣೆ, ಹಾಗೂ 2019-20ನೇ ಸಾಲಿನ ಅನುದಾನಗಳಲ್ಲಿ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳು ಹಾಗೂ ಆಶ್ರಯ ಮನೆಗಳ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

     ಸಮೀಪದ ಅಮೀನಗಡ ಹಾಗೂ ಕಮತಗಿ ಪಪಂಗೆ ತಲಾ ಎರಡುವರೆ ಕೋಟಿಯಂತೆ  ಮುಖ್ಯಮಂತ್ರಿಗಳ ಪ್ರದೇಶಾಭಿವೃದ್ಧಿ ವತಿಯಿಂದ ಒಟ್ಟು ಐದು ಕೋಟಿ ವಿಶೇಷ ಅನುದಾನ ನೀಡಲಾಗಿದೆ ವಿಶೇಷ ಅನುದಾನವನ್ನು ಸದುಪಯೋಗ ಪಡೆದುಕೊಂಡು ಪಟ್ಟಣದ ಅಭಿವೃದ್ದಿ ದೃಷ್ಟಿಯಿಂದ ಉತ್ತಮವಾಗಿ ಚರಂಡಿ ನಿಮರ್ಾಣ ಮತ್ತು ಸಿಸಿ ರಸ್ತೆಗಳನ್ನು ಅಚ್ಚುಕಟ್ಟಾಗಿ ನಿಮರ್ಾಣ ಮಾಡಬೇಕು. ಪಟ್ಟಣದಲ್ಲಿ ಸಂಚಾರಕ್ಕೆ ತೊಂದರೆಯಾಗಿರುವ ಅತಿಕ್ರಮ ಅಂಗಡಿ ಗುಡಿಸಲುಗಳನ್ನು ಮುಲಾಜಿಲ್ಲದೆ ತೆರವುಗೊಳಿಸಬೇಕು ಮತ್ತು ತಹಸೀಲ್ದಾರರು ವಿಶೇಷವಾಗಿ ಗಮನ ಹರಿಸಿ ಪಟ್ಟಣದ ಅಭಿವೃದ್ದಿ ಕಾಮಗಾರಿಯತ್ತ ಹೆಚ್ಚಿನ ಕಾಳಜಿ ವಹಿಸಬೇಕು ಎಂದರು.

   ಪಪಂ ಸದಸ್ಯರು ಪಕ್ಷಬೇಧ ಮರೆತು ಪಟ್ಟಣದ ಅಭಿವೃದ್ಧಿಯತ್ತ ಗಮನಹರಿಸಬೇಕು. ಚುನಾವಣೆ ಸಂದರ್ಭದಲ್ಲಿ ಚುನಾವಣೆ ಮಾಡೋಣ ಆದರೆ ಪಟ್ಟಣದ ಅಭಿವೃದ್ಧಿ ವಿಚಾರದಲ್ಲಿ ಯಾವುದೇ ರೀತಿಯ ರಾಜಕೀಯ ಮಾಡದೇ ಉತ್ತಮ ಕೆಲಸಗಳಿಗೆ ಎಲ್ಲರೂ ಕೈಗೂಡಿಸಬೇಕು ಮತ್ತು ಪ್ರತಿಯೊಬ್ಬ ಸದಸ್ಯರು ತಮ್ಮ ತಮ್ಮ ವಾರ್ಡಗಳನ್ನು ಸ್ವಚ್ಚ ಇಟ್ಟುಕೊಳ್ಳುವಲ್ಲಿ ಹೆಚ್ಚಿನ ಆಧ್ಯತೆ ನೀಡಬೇಕು ವಾರ್ಡಗಳು ಸ್ವಚ್ಚವಾದರೆ ಪಟ್ಟಣ ಸ್ವಚ್ಚವಾಗುತ್ತದೆ ಎಂದು ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಪಪಂ ಸದಸ್ಯರು ಮಾತನಾಡಿ, ಪಟ್ಟಣದಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ಕಂಬಗಳನ್ನು ತೆರವುಗಳಿಸುವಂತೆ ಪಪಂ ವತಿಯಿಂದ ಸದಸ್ಯರು ಹಲವಾರು ಭಾರಿ ಹೇಸ್ಕಾಂ ಅಧಿಕಾರಿಗಳಿಗೆ ಮನವಿ ಮಾಡಿದರು ಹೇಸ್ಕಾಂ ಅಧಿಕಾರಿಗಳು ಯಾವುದೇ ರೀತಿಯ ಕ್ರಮಕೈಗೊಳ್ಳುತ್ತಿಲ್ಲ ಮತ್ತು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಹೇಸ್ಕಾಂ ಕಛೇರಿ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತಂದರು.

     ಇದೇ ಸಂದರ್ಭದಲ್ಲಿ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಪಪಂ ವತಿಯಿಂದ ಸನ್ಮಾನ ಮಾಡಿ ಗೌರವಿಸಲಾಯಿತು ಮತ್ತು ವಿವಿಧ ಫಲಾನುಭವಿಗಳಿಗೆ ಸೌಲಭ್ಯ ವಿತರಣೆ ಮತ್ತು ಆಶ್ರಯ ಮನೆಗಳ ಪ್ರಮಾಣ ಪತ್ರ ವಿತರಣೆ ಮಾಡಲಾಯಿತು.

  ಕಾರ್ಯಕ್ರಮದಲ್ಲಿ ಹುನಗುಂದ ತಹಸೀಲ್ದಾರ ಬಸವರಾಜ ನಾಗರಾಳ,ಪಪಂ ಮುಖ್ಯಾಧಿಖಾರಿ ಎಸ್.ಟಿ.ಆಲೂರ,ಪಪಂ ಸದಸ್ಯರಾದ ವಿಜಯಕುಮಾರ ಕನ್ನೂರ, ಗುರುನಾಥ ಚಳ್ಳಮರದ,ಮನೋಹರ ರಕ್ಕಸಗಿ,ಶೇಖಪ್ಪ ಲಮಾಣಿ, ಸಂಗಮೇಶ ಗೌಡರ,ಸಂಗಪ್ಪ ತಳವಾರ,ಯಮನಪ್ಪ ಕುರಿ,ಹುಸೇನ ಪಟೇಲ ಸೇರಿದಂತೆ ಇನ್ನಿತರರು ಇದ್ದರು.