ನಾಗರಾಳದಲ್ಲಿ ವಿಶೇಷ ಯೋಗ ದಿನಾಚರಣೆ: ಆರ್.ಟಿ.ಪಾಟೀಲ
Special Yoga Day celebration in Nagaral: R.T. Patil
ಮಹಾಲಿಂಗಪುರ 18: ಪ್ರಧಾನಿ ಮೋದಿಜಿಯವರು ಜಗತ್ತಿಗೆ ನಮ್ಮ ಯೋಗದ ಮಹತ್ವ ಪರಿಚಯಿಸಿದ ದಿನದಲ್ಲಿ ನಮ್ಮ ಗ್ರಾಮಗಳಲ್ಲಿ ಯೋಗದ ಮಹತ್ವ ಸಾರುವ ನಿಟ್ಟಿನಲ್ಲಿ ವಿಶ್ವ ಯೋಗ ದಿನವನ್ನು ನಾಗರಾಳದ ಗ್ರಾಪಂ ಹಾಗೂ ಶಾಲಾ ಕಾಲೇಜುಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ನಾಗರಾಳ ಸರ್ಕಾರಿ ಪ್ರೌಢ ಶಾಲಾ ಆವರಣದಲ್ಲಿ ಗ್ರಾಮದಲ್ಲಿ ಜೂ.21 ರಂದು ಬೆ.6 ಗಂಟೆಗೆ ಈ ಬಾರಿ ವಿಶೇಷ ಆಚರಣೆ ಹಮ್ಮಿಕೊಂಡಿದ್ದು ಸರ್ವರೂ ಸದುಪಯೋಗಪಡಿಸಿಕೊಳ್ಳಬೇಕೆಂದು ಮಾಧವಾನಂದ ವಿದ್ಯಾವರ್ಧಕ ಟ್ರಸ್ಟ್ ಹಾಗೂ ಶಾಲಾ ಕಾಲೇಜು ಒಕ್ಕೂಟಗಳ ಅಧ್ಯಕ್ಷ ಆರ್.ಟಿ.ಪಾಟೀಲ ಹೇಳಿದರು.
ಸ್ಥಳೀಯ ಮಾಧವಾನಂದ ವಿವಿದೋದ್ದೇಶ ಸಂಘದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಂಚೂರ ಸವಿತಾ ಪೀಠದ ಸವಿತಾನಂದ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ, ಆರ್.ಟಿ.ಪಾಟೀಲ ಅಧ್ಯಕ್ಷತೆಯಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಉದ್ಘಾಟಿಸಿ, ಸಂಸದ ಗೋವಿಂದ ಕಾರಜೋಳ, ಪದ್ಮಶ್ರೀ ಪುರಸ್ಕೃತ ವೈದ್ಯೆ ಡಾ.ವಿಜಯಲಕ್ಷಿ?? ದೇಶಮಾನೆ ವಿಶೇಷ ಉಪಸ್ಥತಿ ವಹಿಸಲಿದ್ದು, ಗ್ರಾಪಂ ಅಧ್ಯಕ್ಷೆ ಪಾರ್ವತಿ ತೇಲಿ, ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಎಂ.ಮುಲ್ಲಾ, ಪಿಡಿಒ ರಂಜಿತಾ ಹಟ್ಟಿ. ಪತ್ರಕರ್ತ ನಾರಾಯಣಗೌಡ ಉತ್ತಂಗಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರೆಂದು ತಿಳಿಸಿದರು.
ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀಶೈಲ ಹುನ್ನೂರ, ಮುಖಂಡರಾದ ಈರಣ್ಣ ಅರಗಂಜಿ, ಬಸವರಾಜ ರೊಳ್ಳಿ, ಮಂಜುಳಾ ಸುಳ್ಳದ, ಯಲ್ಲಪ್ಪ ಸೂರ್ಯವಂಶಿ, ದುಂಡಪ್ಪ ಕೈಪಾಳಿ, ಯಲ್ಲಪ್ಪ ಮಾರಾಪುರ, ಮಲ್ಲಪ್ಪ ಹಸಬಿ, ಶಿರಾಜ ಹೊರಟ್ಟಿ ಇತರರಿದ್ದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 