ಸಾರಿಗೆ ಬಸ್ ಗೆ ವಿಶೇಷ ಪೂಜೆ

ಲೋಕದರ್ಶನವರದಿ

ಶಿಗ್ಗಾವಿ: ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ ಸಂಚಾರ ವ್ಯವಸ್ಥೆ ಕಲ್ಪಿಸಿರುವುದನ್ನು ಸ್ವಾಗತಿಸಿ ಮುಗಳಿ ಗ್ರಾಮದ ವಿಶ್ವಗುರು ಹಳೆಯ ವಿದ್ಯಾರ್ಥಿಗಳ ಸಂಘದ ನೇತೃತ್ವದಲ್ಲಿ ಸೋಮವಾರ ಬಸ್ಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

  ಗ್ರಾಮದ ವಿದ್ಯಾರ್ಥಿ ಗಳು ಹಿರೇಮಣಕಟ್ಟಿ ಸರ್ಕಾರಿ  ಪ್ರೌಢಶಾಲೆಗೆ ತೆರಳುತ್ತಿದ್ದರು. ಆದರೆ ಬಸ್ ವ್ಯವಸ್ಥೆ ಇಲ್ಲದ ಹಿನ್ನೆಲೆಯಲ್ಲಿ ಟಂಟಂ, ಕ್ರೂಷರ್ ಹಾಗೂ ಟೆಂಪೋ ಅವಲಂಬಿಸುವಂತಾಗಿತ್ತು. ಪರಿಣಾಮವಾಗಿ ನಿಗದಿತ ಸಮಯಕ್ಕೆ ತರಗತಿಗಳಿಂದ ವಂಚಿತವಾಗುವಂತಾಗಿತ್ತು. ಸಮಸ್ಯೆ ಅರಿತ ಗ್ರಾಮದ ವಿಶ್ವಗುರು ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳು ಶಾಸಕ ಬಸವರಾಜ ಬೊಮ್ಮಾಯಿ ಅವರ ಗಮನಕ್ಕೆ ತಂದಿದ್ದರು.  

       ಎನ್ಡಬ್ಲ್ಯೂಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜ ಬೆಳಗಾವಿ ಅವರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಶಾಸಕರು ಸೂಚಿಸಿದ್ದರು. 

 ಇದಕ್ಕೆ ಸ್ಪಂದಿಸಿದ ಸಾರಿಗೆ ಇಲಾಖೆಯ ಸವಣೂರ ಘಟಕದ ವ್ಯವಸ್ಥಾಪಕ ಭಾಯಿ ಸರ್ಕಾರ ,ಶಿಗ್ಗಾವಿ ಬಸ್ ನಿಲ್ದಾಣದ ನಿಯಂತ್ರಣಾಧಿಕಾರಿ ಎನ್.ಆರ್. ನದಾಫ್ ಅವರು ಬಸ್ ವ್ಯವಸ್ಥೆ ಕಲ್ಪಿಸಿದ್ದಾರೆ.

       ಗ್ರಾಮವನ್ನು ಪ್ರವೇಶಿಸುತ್ತಿದ್ದಂತೆ ಬಸ್ಗೆ ತೆಂಗಿನ ಗರಿ ಅಲಂಕರಿಸಲಾಯಿತು. ಜೊತೆಗೆ ಹೂ ಮಾಲೆ ಅಳವಡಿಸಿ ಪೂಜೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳು ವಿಭೂತಿ, ಕುಂಕುಮ ಹಚ್ಚಿ ಪೂಜೆ ಸಲ್ಲಿಸಿದರು.

ಈ ವೇಳೆ ವಿಶ್ವಗುರು ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ವಿ.ಜಿ.ದುಂಡಪ್ಪನವರ, ಉಪಾಧ್ಯಕ್ಷ ವಿ.ಎಸ್.ಭದ್ರಶೆಟ್ಟಿ, ಸಂಘದ ಗದಿಗಯ್ಯ ಕಳಸಗೇರಿಮಠ, ಮಹಾದೇವಪ್ಪ ತಳವಾರ, ಬಸವರಾಜ ಹುಲಗೂರ, ಶಂಕ್ರಪ್ಪ ಗೊಬ್ಬಿ, ಗ್ರಾಪಂ ಸದಸ್ಯ ಅರುಣ ರಾಮಗೇರಿ, ನಿಂಗಪ್ಪ ಅರಳಿಕಟ್ಟಿ, ಚಿಕ್ಕಪ್ಪ ಸಕ್ರಿ, ಮುದಕಪ್ಪ ಕಾಮನಹಳ್ಳಿ, ಗುರುಪಾದಗೌಡ ಪಾಟೀಲ, ಲಕ್ಷ್ಮಣ ಬೆಂಗೇರಿ, ಚಮನಸಾಬ್, ಕೋಟೆಪ್ಪ ಕೂಡಲ ಇದ್ದರು.