ಕೊರೋನಾ ತಡೆಯಲು ವಿಶೇಷ ಪೂಜಾ ಕಾರ್ಯಕ್ರಮ

ಶಿಗ್ಗಾವಿ21 : ತಾಲೂಕಿನ ಬಂಕಾಪುರ ಪಟ್ಟಣದ ಪೇಟೆ ಯಲ್ಲಮ್ಮ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ, ವಿಶ್ವಶಾಂತಿ, ಮಹಾಮಾರಿ ಕೊರೊನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಯಲ್ಲಮ್ಮ ದೇವಿ ಸೇವಾ ಸಮಿತಿ ಆಶ್ರಯದಲ್ಲಿ, ಪೇಟೆ ಯಲ್ಲಮ್ಮ ದೇವಿಗೆ ಬಿಸನಳ್ಳಿ ಕಾಶಿ ಶಾಖಾ ಮಠದ ವಟುಗಳಿಂದ ವಿಶೇಷ ಪೂಜಾ, ಹೋಮ, ಹವನಾದಿ ಕಾರ್ಯಕ್ರಮಗಳು ಭಕ್ತ ಜನಸಮೂಹದ ಮಧ್ಯ ಶ್ರದ್ಧಾ, ಭಕ್ತಿಯಿಂದ ನಡೆದವು.

     ಯಲ್ಲಮ್ಮದೇವಿ ಸೇವಾ ಸಮಿತಿ ಅಧ್ಯಕ್ಷ ಬಸಪ್ಪ ಸೊಪಿನ ಮಾತನಾಡಿ, ಯಲ್ಲಮ್ಮದೇವಿ ಬೇಡಿ ಬಂದ ಭಕ್ತರ ಕಷ್ಟ, ಕಾರ್ಪಣ್ಯ, ರೋಗ, ರುಜನಿ, ಇಷ್ಟಾರ್ಥಗಳನ್ನು ಸಿದ್ಧಿಸುವ ಶಕ್ತಿಯನ್ನು ಪಡೆದವಳಾಗಿದ್ದು, ವಿಶ್ವಾದ್ಯಂತ ವ್ಯಾಪಿಸಿರುವ ಕೊರಾನಾ ಸೊಂಕನ್ನು ಹೋಗಲಾಡಿಸಿ, ಮಾನವ ಸಂಕುಲವನ್ನು ರಕ್ಷಿಸುವಂತೆ ತಾಯಿ ಯಲ್ಲಮ್ಮ ದೇವಿಗೆ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಭಿಲ್ವಾರ್ಚನೆ, ಪುಷ್ಫಾರ್ಚನೆ, ಸಹಶ್ರನಾಮಾವಳಿ, ರುದ್ರಪಠಣ ಸೇರಿದಂತೆ ಹೋಮ, ಹವನಾದಿಗಳನ್ನು ಮಾಡಲಾಗುತ್ತಿದೆ. 

 ದೇಶದಲ್ಲಿ ಓರ್ವ ಕೊರೊನಾ ಸೊಂಕಿತನಿಂದ ಪ್ರಾರಂಭವಾದ ಈ ಮಹಾಮಾರಿ ರೋಗ ದಿನದಿಂದ, ದಿನಕ್ಕೆ ಒಬ್ಬರಿಂದ ಒಬ್ಬರಿಗೆ ಹರಡುವಮೂಲಕ ಸೊಂಕಿತರ ಸಂಖ್ಯೆ 200 ಗಡಿದಾಟಿದೆ. ನಾಲ್ಕು ಜನರ ಸಾವು ಸಂಭವಿಸಿದೆ. ವಿಶ್ವದ್ಯಾಂತ 9 ಸಾವಿರಕ್ಕೂ ಅಧಿಕ ಜನ ಈ ಸೊಂಕಿನಿಂದ ಸಾವನಪ್ಪಿರುವುದು ದೃಡಪಟ್ಟಿದೆ. ಮಾನವ ಸಂಕುಲನಕ್ಕೆ ಎಂದೂ ಕೇಳರಿಯದ ಆಪತ್ತು ಬಂದೋದಗಿದೆ. ಇದನ್ನು ತಡೆಯುವ ಶಕ್ತಿ ಆ ಯಲ್ಲಮ್ಮದೇವಿಗೆ ಮಾತ್ರ ವಿದ್ದು, ಈ ವಿಪತ್ತಿನಿಂದ ಮಾನವ ಸಂಕುಲವನ್ನು ಕಾಪಾಡುವಂತೆ ದೇವಿಗೆ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. 

     ಕಾರ್ಯಕ್ರಮದ ನಂತರ ಅನ್ನಪ್ರಸಾದದ ಸೇವೆ ನಡೆಯಿತು.

    ಕಾಶಿ ವೇದಪಾಠಶಾಲೆಯ ಮುಖ್ಯೋಪಾದ್ಯಾಯ ಜಗದೀಶಸ್ವಾಮಿ, ಪಿ.ಡಿ.ಕೋರಿ, ಮಹೇಶ ಪುಕಾಳೆ, ರವಿ ಕುರಗೋಡಿ, ನೀಲಕಂಠಪ್ಪ ನರೇಗಲ್, ಬಸವಂತಪ್ಪ ಕೊಟಬಾಗಿ, ಯಲ್ಲಪ್ಪ ಸಿಂಗಾಪುರ, ಯಲ್ಲಪ್ಪ ಪೀಸೆ, ದೇವರಾಜ ರಾಮಣ್ಣವರ, ಶಂಕ್ರಪ್ಪ ಹಳವಳ್ಳಿ, ರವಿ ನರೇಗಲ್, ಗಂಗಾಧರ ಬಡ್ಡಿ, ಡಾ: ರಾಜು ಈಳಗೇರ, ನಿಂಗಪ್ಪ ಕೋರಿ, ರಾಮಣ್ಣ ಕುರಗೋಡಿ ಸೇರಿದಂತೆ ಮತ್ತಿತರರು ಇದ್ದರು.

ಕೊರೋನಾ ನಾಶಕ್ಕೆ ಮುಸ್ಲಿಂರಿಂದ ಪ್ರಾರ್ಥನೆ