ಲೋಕದರ್ಶನ ವರದಿ
ಬಾಗಲಕೋಟೆ 16: ಭಾರತ ಚುನಾವಣಾ ಆಯೋಗದ ನಿದರ್ೇಶನದನ್ವಯ ಜಿಲ್ಲೆಯಲ್ಲಿ ಜಮಖಂಡಿ ಮತಕ್ಷೇತ್ರ ಹೊರತುಪಡಿಸಿ ಉಳಿದ 6 ಮತಕ್ಷೇತ್ರಗಳ ಪರಿಷ್ಕರಣ ಕಾರ್ಯ ಪ್ರಾರಂಭಿಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ ಹೇಳಿದರು.
ಜಿಲ್ಲಾಧಿಕಾರಿಗಳ ಸಭಾಂಗಣಲ್ಲಿಂದು ಜರುಗಿದ ವಿವಿಧ ರಾಜಕೀಯ ಪಕ್ಷದ ಮುಖಂಡರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾರತ ಚುನಾವಣಾ ಆಯೋಗವು ಜನವರಿ 1, 2019ನ್ನು ಅರ್ಹತಾ ದಿನಾಂಕವೆಂದು ಪರಿಗಣಿಸಿ ವಿಧಾನಸಭಾ ಕ್ಷೇತ್ರಗಳ ಮತದಾರರ ಯಾದಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ವೇಳಾ ಪಟ್ಟಿಯನ್ನು ಹೊರಡಿಸಿದ್ದು, ಕರಡು ಮತದಾರರ ಪಟ್ಟಿಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ನವೆಂಬರ 20 ವರಗೆ ಸ್ವೀಕರಿಸಲಾಗುತ್ತದೆ ಎಂದರು.
ಈಗಾಗಲೇ ಅಕ್ಟೋಬರ 10 ರಂದು ಕರಡು ಮತದಾರ ಪಟ್ಟಿಯನ್ನು ಆಯಾ ಮತಕ್ಷೇತ್ರಗಳಲ್ಲಿ ಪ್ರಸಿದ್ದಿಪಡಿಸಲಾಗಿದೆ. ಜನವರಿ 01, 2019ಕ್ಕೆ ಇರುವಂತೆ 18 ವರ್ಷ ಮೇಲ್ಪಟ್ಟ ವಯಸ್ಸು ಹೊಂದಿದವರು ಮತದಾರರ ಯಾದಿಯಲ್ಲಿ ಹೆಸರು ಇಲ್ಲದವರು ಈ ಅವಧಿಯಲ್ಲಿ ತಮ್ಮ ಹೆಸರುಗಳನ್ನು ನಿಗದಿತ ನಮೂನೆ ನಂ.6 ರಲ್ಲಿ ಭತರ್ಿ ಮಾಡಿ ತಮ್ಮ ವ್ಯಾಪ್ತಿಯ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ, ಉಪವಿಭಾಗಾಧಿಕಾರಿಗಳಿಗೆ, ಸಂಬಂದಪಟ್ಟ ತಹಶೀಲ್ದಾರರಿಗೆ ಅಜರ್ಿಗಳನ್ನು ಇತ್ತೀಚಿನ ಪಾಸ್ಪೋರ್ಟ ಸೈಜಿನ ಪೋಟೋ, ವಿಳಾಸ ಹಾಗೂ ವಯಸ್ಸಿನ ದಾಖಲೆಗಳನ್ನು ನೀಡಿ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು.
ಮತದಾರ ಪಟ್ಟಿಯಿಂದ ತೆಗೆದು ಹಾಕಲು ನಮೂನೆ 7, ಮತದಾರರ ಪಟ್ಟಿಲ್ಲಿರುವ ಹೆಸರುಗಳಲ್ಲಿ ಹಾಗೂ ವಿವರಗಳಲ್ಲಿ ದೋಷಗಳಿದ್ದಲ್ಲಿ ತಿದ್ದುಪಡಿ ಮಾಡಲು ನಮೂನೆ 8 ಹಾಗೂ ವಿಧಾನಸಭಾ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಸ್ಥಳಾಂತರ ಮಾಡಬೇಕಾದಲ್ಲಿ ನಮೂನೆ 8ಎರಲ್ಲಿ ಅಜರ್ಿ ಸಲ್ಲಿಸಬಹುದಾಗಿದೆ. ಈ ಕಾರ್ಯದಲ್ಲಿ ಎಲ್ಲ ರಾಜಕೀಯ ಪಕ್ಷದವರು ವಿಧಾನಸಭಾ ಮತಕ್ಷೇತ್ರವಾರು ಎಲ್ಲ ಮತಗಟ್ಟೆಗಳಿಗೆ ಬಿ.ಎಲ್.ಎ ರವರನ್ನು ನೇಮಕಾತಿ ಮಾಡಿ ಆಯಾ ತಹಶೀಲ್ದಾರವರಿಗೆ ಯಾದಿಯನ್ನು ಕಳುಹಿಸಬೇಕು. ಅಲ್ಲದೇ ಬಿ.ಎಲ್.ಎಗಳು ಆಯಾ ಮತಗಟ್ಟೆಯ ಮತದಾರರಾಗಿರಬೇಕು. ಪರಿಷ್ಕರಣೆ ಕಾರ್ಯದಲ್ಲಿ ಎಲ್ಲ ರಾಜಕೀಯ ಪಕ್ಷದವರು ಸಹಕರಿಸುವಂತೆ ಕೋರಲಾಯಿತು.
ನವೆಂಬರ 20 ರಿಂದ ಡಿಸೆಂಬರ 20 ವರೆಗೆ ಅಜರ್ಿಗಳ ಪರೀಕ್ಷರಣೆ ನಡೆಯಲಿದ್ದು, ಜನವರಿ 3, 2019 ರಂದು ಅಂತಿಮ ಮತದಾರರ ಪಟ್ಟಿ ತಯಾರಿಸಿ ಅಂತಿಮ ಮತದಾರರ ಪಟ್ಟಿಯನ್ನು ಜನವರಿ 4, 2019 ರಂದು ಪ್ರಕಟಿಸಲಾಗುತ್ತದೆ ಎಂದು ತಿಳಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ಅನೀಲಕುಮಾರ ದಡ್ಡಿ, ಯಲ್ಲಪ್ಪ ಸಕ್ಯಾನವರ, ಸಲೀಮ್ ಮೋಮಿನ್ ಹಾಗೂ ನೂರ ಪಟ್ಟೇಲಾಲ ಉಪಸ್ಥಿತರಿದ್ದರು.