25 ರಂದು ಕಾಗವಾಡದಲ್ಲಿ ಭ್ರಷ್ಟಾಚಾರ ನಿಮರ್ೂಲನೆ ವಿಶೇಷ ಸಾರ್ವಜನಿಕ ಸಭೆ ಅಣ್ಣಾ ಹಜಾರೆ, ಸಂತೋಷ ಹೆಗಡೆ ಉಪಸ್ಥಿತಿ

ಶೇಡಬಾಳ 01: ಕಾಗವಾಡ ವಿಧಾನ ಸಭಾ ಮತಕ್ಷೇತ್ರವನ್ನು ಭ್ರಷ್ಟಾಚಾರ ರಹಿತ ಕ್ಷೇತ್ರವನ್ನಾಗಿಸುವ ಉದ್ದೇಶದಿಂದ ಗಾಂಧಿ ವಾದಿ ಅಣ್ಣಾ ಹಜಾರೆ ಹಾಗೂ ನಿವೃತ್ತ ಲೋಕಾಯುಕ್ತ ಸಂತೋಷ ಹೆಗಡೆಯವರ ಉಪಸ್ಥಿತಿಯಲ್ಲಿ ಬರುವ ಸಪ್ಟಂಬರ್ 25 ರಂದು ಕಾಗವಾಡ ಮತ ಕ್ಷೇತ್ರದಲ್ಲಿ ಭ್ರಷ್ಟಾಚಾರ ನಿಮರ್ೂಲನೆ ವಿಶೇಷ ಸಾರ್ವಜನಿಕ ಸಭೆಯನ್ನು ಆಯೋಜಿಸಲಾಗುವುದೆಂದು ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹೇಳಿದರು.

ಅವರು ಶುಕ್ರವಾರ ದಿ. 31 ರಂದು ಕಾಗವಾಡ ಗ್ರಾಮದಲ್ಲಿ ಪತ್ರಕರ್ತರಿಗೆ ಈ ವಿಷಯವನ್ನು ತಿಳಿಸಿದ ಅವರು ಈಗಾಗಲೇ ಅಣ್ಣಾ ಹಜಾರೆಯವರ ಹುಟ್ಟೂರಾದ ಮಹಾರಾಷ್ಟ್ರದ ರಾಳೆಗನಸಿದ್ಧ್ದಿ ಗ್ರಾಮಕ್ಕೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲ ಹಾಗೂ ಅನೇಕ ಮುಖಂಡರು ಹೋಗಿ ಅವರಿಗೆ ಈ ವಿಷಯವನ್ನು ಹೇಳಿದಾಗ ಅಣ್ಣಾ ಹಜಾರೆಯವರು ಸ್ವಸಂತೋಷದಿಂದ ಕಾರ್ಯಕ್ರಮಕ್ಕೆ ಆಗಮಿಸುವುದಾಗಿ ಭರವಸೆ ನೀಡಿದ್ದಾರೆ. ಅದರಂತೆ ನಿವೃತ್ತ ಲೋಕಾಯುಕ್ತ ಸಂತೋಷ ಹೆಗಡೆಯವರನ್ನು ಬೆಂಗಳೂರಿನಲ್ಲಿ ಭೇಟಿಯಾಗಿ ಸಭೆಗೆ ಆಗಮಿಸುವಂತೆ ಕೇಳಿಕೊಂಡಾಗ ಅವರು ಕೂಡ ಸಭೆಗೆ ಬರುವುದಾಗಿ ಭರವಸೆ ನೀಡಿದ್ದಾರೆ.

ದೇಶದಲ್ಲಿ ಭ್ರಷ್ಟಾಚಾರ ನಿಮರ್ೂಲನೆಗಾಗಿ ತಮ್ಮ ಪ್ರಾಣವನ್ನೇ ಮುಡುಪಾಗಿಟ್ಟಿರುವ ಅಣ್ಣಾ ಹಜಾರೆ ಹಾಗೂ ಸಂತೋಷ ಹೆಗಡೆಯವರು ಈ ಕಾರ್ಯಕ್ರಮಕ್ಕೆ ಆಗಮಿಸುತ್ತಿರುವುದು ನನಗೆ ಆನೆ ಬಲ ಬಂದಂತಾಗಿದೆ. ಅವರ ಮಾರ್ಗದರ್ಶನದಲ್ಲಿ ಕಾಗವಾಡ ಮತಕ್ಷೇತ್ರವನ್ನು ಭ್ರಷ್ಟಾಚಾರ ರಹಿತ ಕ್ಷೇತ್ರವನ್ನಾಗಿಸುವದರ ಜತೆಗೆ ಕನರ್ಾಟಕ ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಹೊಂದಿರುವುದಾಗಿ ಶ್ರೀಮಂತ ಪಾಟೀಲ ಹೇಳಿದರು. 

ಈ ಮಹಾನ್ ಕಾರ್ಯಕ್ಕೆ ಕ್ಷೇತ್ರದ ಜನರು ಸಕರ್ಾರಿ ಅಧಿಕಾರಿಗಳು ಕೈ ಜೋಡಿಸುವಂತೆ ಕರೆ ನೀಡಿದರು. ಈಗಾಗಲೆ ಸಕರ್ಾರಿ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆಂದು ಹೇಳಿದರು. 

ನಿಯೋಗದಲ್ಲಿ ಯುವ ಮುಖಂಡ ದಾದಾ ಪಾಟೀಲ, ಲಟಕೆ ಸಾಹೇಬ ಸೇರಿದಂತೆ ಅನೇಕರು ಇದ್ದರು.