ವಿಶೇಷ ಚೇತನರಿಗೆ ವಿಶೇಷ ಜಾಬ್ ಕಾರ್ಡ್‌ ವಿತರಣೆ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು - ಪರಮೇಶ್

Special Job Card Distribution Scheme for the Specially Gifted Should Be Utilized - Paramesh

ವಿಶೇಷ ಚೇತನರಿಗೆ ವಿಶೇಷ ಜಾಬ್ ಕಾರ್ಡ್‌ ವಿತರಣೆ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕು - ಪರಮೇಶ್   

ರಾಣೆಬೆನ್ನೂರು 24 : ತಾಲ್ಲೂಕಿನ 1200 ವಿಶೇಷ ಚೇತನರಿಗೆ ನರೇಗಾ ಯೋಜನೆಯಡಿ ವಿಶೇಷ ಜಾಬ್ ಕಾರ್ಡ್‌ ವಿವರಿಸಲಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ ಹೇಳಿದರು.. ಅವರು ತಾಲೂಕಿನ ಹಿರೇಬಿದರಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಿಶೇಷ ಚೇತನರಿಗೆ ನರೇಗಾ ಯೋಜನೆಯಡಿ ವಿಶೇಷ ಜಾಬ್ ಕಾರ್ಡ್‌ ವಿತರಣೆ ಮಾಡಿ ಮಾತನಾಡಿದ ಅವರು ರಾಜ್ಯದ ನರೇಗಾ ಮಾರ್ಗಸೂಚಿ ಪ್ರಕಾರ ವಿಶೇಷ ಚೇತನ ಫಲಾನುಭವಿಗಳಿಗೆ ಒಂದು ಕುಟುಂಬವನ್ನಾಗಿ ಪರಿಗಣಿಸಿ ವರ್ಷದಲ್ಲಿ 100 ದಿನ ನರೇಗಾದಡಿ ಕೂಲಿ ಕೆಲಸ ನೀಡಲಾಗುವುದು ಎಂದು ತಿಳಿಸಿದರು.ಗ್ರಾಮ ಪಂಚಾಯತಯ ನೂತನ ಅಧ್ಯಕ್ಷರಾದ ಕೆಂಚಪ್ಪ  ಸಂಗಾನವರ ಮಾತನಾಡಿ, ರಾಜ್ಯದಲ್ಲಿ ವಿಶೇಷ ಚೇತನರಿಗೆ ಒಂದು ಸ್ಥಾನಮಾನ ಇದೆ. ಅವರು ಬೇರೆ ಬೇರೆ ಸ್ಥಳಗಳಿಗೆ ಹೋಗಿ ದುಡಿಯಲು ಆಗುವುದಿಲ್ಲ ಹಾಗಾಗಿ ಸ್ಥಳೀಯ ಗ್ರಾಮ ಪಂಚಾಯಿತಿಯ ನರೇಗಾ ಯೋಜನೆಯಡಿ ವಿಶೇಷ ಚೇತನರಿಗೆ ಕೂಲಿ ಕೆಲಸ ನಿಡಲಾಗುವುದು. ಗ್ರಾಮದಲ್ಲಿ ಸುಮಾರು  65 ವಿಶೇಷ ಚೇತನರಿಗೆ ಜಾಬ್ ಕಾರ್ಡ್‌ ವಿತರಣೆ ಮಾಡಲಾಯಿತು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಅನುಸುಯಾ ಚಿಕ್ಕಬಿದರಿ, ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರ​‍್ಪ ಓಲೇಕಾರ, ಶಿವಪುತ್ರಪಗೌಡ ಪಾಟೇಲ, ಲಕ್ಷ್ಮಿ ಬಳ್ಳಾರಿ, ನೀಲಪ್ಪ ಚಂದಾಪುರ್, ವನಜಾಕ್ಷಿ ಜಾಡರ, ಸಾಕಮ್ಮ ಸಂಗಾನವರ, ಅನ್ನಪೂರ್ಣ ಗೂರ​‍್ಪಳವರ, ಲಕ್ಷ್ಮವ್ವ ಮೇಗಳಮನಿ, ಪ್ರದೀಪ್ ಕೆಂಪಪ್ಪನವರ, ಗ್ರಾಮ ಅಭಿವೃದ್ಧಿ ಅಧಿಕಾರಿ ಸಫಿವುಲ್ಲಾ,  ಪಂಚಾಯತ್ ಕಾರ್ಯದರ್ಶಿ ಮಂಜುನಾಥ್ ಹಳ್ಳದ, ಐ ಈ ಸಿ ಸಂಯೋಜಕ ದಿಂಗಾಲೇಶ್ವರ ಅಂಗೂರ್, ಡಿ ಇ ಓ ಸಣ್ಣನಿಂಗಪ್ಪ,  ಅಂಗವಿಕಲ ಸಂಯೋಜಕ ಮಂಜುನಾಥ್ ಚಲವಾದಿ, ಬಿ ಎಫ್ ಟಿ ಪರಶುರಾಮ ಅಂಬಿಗೇರ ಸೇರಿದಂತೆ ಮತ್ತಿತರರು ಇದ್ದರು.