ಹಾವೇರಿ: ರಾಜ್ಯದಲ್ಲಿ ವಸತಿ ನಿಲಯಗಳಿಗೆ ಅಗತ್ಯವಿರುವ ನಿವೇಶನಗಳ ಸಮಸ್ಯೆ ನಿವಾರಣೆ ಹಾಗೂ ಮಂಜೂರಾತಿ ಕುರಿತಂತೆ ಶೀಘ್ರವೇ ಬೆಂಗಳೂರಿನಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಸಮಸ್ಯೆ ನಿವಾರಿಸಲಾಗುವುದು ಎಂದು ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ.ಕಾರಜೋಳ ಅವರು ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಮಾಜ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಲೋಕೋಪಯೋಗಿ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದರು.
ಹಾವೇರಿ ಜಿಲ್ಲೆ ಒಳಗೊಂಡಂತೆ ರಾಜ್ಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ವಿದ್ಯಾಥರ್ಿ ನಿಲಯಗಳು ಖಾಸಗಿ ಕಟ್ಟದಲ್ಲಿ ನಡೆಯಬಾರದು. ಖಾಸಗಿ ಕಟ್ಟಡದಲ್ಲಿ ವಿದ್ಯಾಥರ್ಿ ನಿಲಯಗಳು ನಡೆದರೆ ಮೂಲ ಸೌಕರ್ಯ ಕಲ್ಪಿಸಲು ಕಷ್ಟಸಾಧ್ಯ. ಎಲ್ಲ ವಸತಿ ನಿಲಯಗಳು ಸಕರ್ಾರಿ ಕಟ್ಟಡಗಳಲ್ಲೇ ನಡೆಯಬೇಕು. ಈ ನಿಟ್ಟಿನಲ್ಲಿ ನಿವೇಶನ ಇಲ್ಲದ ವಸತಿ ನಿಲಯಗಳಿಗೆ ನಿವೇಶ ಕಲ್ಪಿಸುವ ಕುರಿತಂತೆ ಜಿಲ್ಲಾಧಿಕಾರಿಗಳು ಆದ್ಯತೆ ಗಮನಹರಿಸಬೇಕು. ಕಟ್ಟಡ ನಿಮರ್ಾಣಕ್ಕೆ ಬೇಕಾದ ಅನುದಾನವನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ಸಮುದಾಯ ಭವನಗಳ ನಿಮರ್ಾಣಕ್ಕೆ ಕೋಟ್ಯಾಂತರ ರೂ. ಅನುದಾನ ಒದಗಿಸಲಾಗಿದೆ. ಆದರೆ ಬಹಳಷ್ಟು ಕಡೆ ನಿವೇಶನ ಸಿಗದೆ ಭವನಗಳು ನಿಮರ್ಾಣವಾಗಿಲ್ಲ. ಅನುದಾನ ಕೊಳೆಯುತ್ತಿದೆ. ನಿವೇಶನ ಸಿಗದೆ ಕಟ್ಟಡ ಆರಂಭಿಸಿದ ಇಂತಹ ಭವನಗಳಿಗೆ ಬಿಡುಗಡೆಯಾದ ಅನುದಾನವನ್ನು ಹಿಂಪಡೆಯಲು ನಿರ್ಧರಿಸಲಾಗಿದೆ. ಜಿಲ್ಲೆಯಲ್ಲಿ ಇಂತಹ ಪ್ರಕರಣಗಳು ಇದ್ದರೆ ಪಟ್ಟಿ ಮಾಡಿ ಸಲ್ಲಿಸಿ ಅಥವಾ ಜಿಲ್ಲೆಯಲ್ಲಿ ಬೇರೆಡೆ ಸ್ಥಳಾಂತರಿಸಿ ಪ್ರಸ್ತಾವನೆ ಸಲ್ಲಿಸಿದರೆ ಮಂಜೂರಾತಿ ನೀಡುವುದಾಗಿ ತಿಳಿಸಿದರು.
ರಾಜ್ಯ ವಲಯದಲ್ಲಿ ಜಿಲ್ಲಾ ಪಂಚಾಯತ್ ಅಧೀನ ಇಲಾಖೆಗಳಿಗೆ ಬಿಡುಗಡೆ ಮಾಡಿರುವ ಅನುದಾನ ಹೆಚ್ಚುವರಿ ಆಗಿದ್ದರೆ ಖಚರ್ು ಮಾಡುವ ಇಲಾಖೆಗೆ ಮರು ಹೊಂದಾಣಿಕೆ ಮಾಡಿಕೊಳ್ಳಿ. ಈ ಕುರಿತು ಕ್ರಿಯಾ ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಿದರೆ ಅನುಮೋದನೆ ನೀಲಡಾಗುವುದು ಎಂದರು.
ವಿದ್ಯಾಥರ್ಿನಿಯಲಗಳ ಸಮರ್ಪಕ ನಿರ್ವಹಣೆ ಮಾಡದ ಸ್ವಚ್ಛತೆ, ಮೂಲಸೌಕರ್ಯ ಕಲ್ಪಿಸಲು ವಿಫಲವಾದ ವಾಚಮನ್ಮ ತಾಲೂಕಾ ಅಧಿಕಾರಿಗಳ ಮೇಲೆ ನಿಧರ್ಾಕ್ಷಿಣ್ಯ ಕ್ರಮಕೈಗೊಳ್ಳಿ. ಇಂತಹ ಅಧಿಕರಿಗಳನ್ನು ಹೊರಹಾಕಿ, ಜಿ.ಪಂ.ಮುಖ್ಯ ಕಾರ್ಯನಿವರ್ಾಹಣಾಧಿಕಾರಿ, ಜಿಲ್ಲಾಧಿಕಾರಿ ಇತರ ಇಲಾಖಾ ಅಧಿಕಾರಿಗಳು ತಮ್ಮ ಜಿಲ್ಲಾ ಪ್ರವಾಸ ವೇಳೆಯಲ್ಲಿ ವಿದ್ಯಾಥರ್ಿ ನಿಲಯಗಳಿಗೆ ಅನಿರೀಕ್ಷಿತ ಭೇಟಿ ಮಾಡಿ ಕಡ್ಡಾಯವಾಗಿ ಊಟ ಮಾಡಿ ಎಂದು ಸಲಹೆ ನೀಡಿದರು.
ಪರಿಶಿಷ್ಟ ವರ್ಗದ ನಿರುದ್ಯೋಗಿ ವಿದ್ಯಾಥರ್ಿಗಳಿಗೆ ಗಣಕಯಂತ್ರ, ನಸರ್ಿಂಗ್, ಪ್ಯಾರಾಮೆಡಿಕಲ್, ಪ್ರಿಂಟಿಂಗ್ ನಂತಹ ಕೌಶಲ್ಯಾಧಾರಿತ ತರಬೇತಿಗೆ ಸೂಕ್ತ ವ್ಯವಸ್ಥೆಮಾಡಿ ತರಬೇತಿಗೆ ಬೇಕಾದ ಅಗತ್ಯ ಅನುದಾನ ನೀಡಲಗುವುದು. ಬೆಂಗಳೂರಿನಂತಹ ನಗರಗಳಲ್ಲಿ ಕನ್ನಡ ಟೈಪಿಂಗ್ ಮಾಡಿರುವವರು ಸಿಗುವುದಿಲ್ಲ. ಈ ನಿರುದ್ಯೋಗಿಗಳಿಗೆ ಕನ್ನಡದಲ್ಲಿ ಟೈಪಿಂಗ್ ಮಾಡುವ ತರಬೇತಿ ಆಯೋಜಿಸಲು ತಿಳಿಸಿದರು.
ಜಿಲ್ಲೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಅನುದಾನವನ್ನು ಒದಗಿಸಲಾಗುವುದು. ಜಿಲ್ಲೆಯ ಸಚಿವರು, ಶಾಸಕರನ್ನು ಸಂಪಕರ್ಿಸಿ ಕ್ಷೇತ್ರವಾರು ಅಭಿವೃದ್ಧಿ ಕಾರ್ಯಕ್ರಮಗಳು ಬೇಕಾದ ಅನುದಾನದ ವಿವರ ಸಲ್ಲಿಸಿ. 10 ಕೋಟಿ ರೂ.ವರೆಗೆ ಅನುದಾನ ಕೊಡಲು ಸಿದ್ಧವಿದ್ದೇನೆ. ಈ ಅನುದಾನದಲ್ಲಿ ರಸ್ತೆ ಚರಂಡಿ ನಿಮರ್ಾಣದ ಬದಲು ಸ್ಥಿರಾಸ್ತಿ ನಿಮರ್ಾಣ ಮಾಡುವಂತಹ ಬಡವರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರ ಜೀವನ ಮಟ್ಟ ಸುಧಾರಣೆಗೆ ಅನುಕೂಲವಾಗುವಂತಹ ಕಾರ್ಯಕ್ರಮಗಳು, ಕಾಮಗಾರಿಗಳನ್ನು ಕೈಗೊಳ್ಳಬೇಕು. ಬಹುಉಪಯೋಗಿ ಕಟ್ಟಡ, ದೇವಾಲಯಗಳು, ನೆರೆ ಹಾಗೂ ಅತಿವೃಷ್ಟಿಯಿಂದ ಹಾನಿಯಾದ ಮನೆಗಳ ಪುನರ್ ನಿಮರ್ಾಣದಂತಹ ಕಾರ್ಯ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಪರಿಶಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ ವಿವಿಧ ಯೋಜನೆಗಳ ಕಲ್ಯಾಣ ಕಾರ್ಯಕ್ರಮಳ ಪ್ರಗತಿಯನ್ನು ಪರಿಶೀಲಿಸಿದರು. ಪ್ರಸಕ್ತ ಆಥರ್ಿಕ ವರ್ಷದ ಐದು ತಿಂಗಳು ಮಾತ್ರ ಬಾಕಿ ಇದೆ. ಬಿಡುಗಡೆಯಾದ ಅನುದಾನವನ್ನು ಕಡ್ಡಾಯವಾಗಿ ಖಚರ್ುಮಾಡಬೇಕು ಎಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ, ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ, ಸಮಾಜ ಕಲ್ಯಾಣಾಧಿಕಾರಿ ಚೈತ್ರಾ, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಪ್ರಭಾರ ಅಧಿಕಾರಿ ರಾಜು ಕೂಲೇರ ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.