ವಿಶೇಷ ಆರ್ಥಿಕ ಪ್ಯಾಕೇಜ್ , ಹಣಕಾಸು ಸಚಿವೆ ನಿರ್ಮಲ ರಿಂದ ವಿವರಣೆ

ನವದೆಹಲಿ,  ಮೇ 13, ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದ 20 ಲಕ್ಷ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಕುರಿತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಬುದವಾರ   ಸಂಜೆ 4 ಗಂಟೆಗೆ ಪತ್ರಿಕಾಗೋಷ್ಠಿ ಯಲ್ಲಿ  ಹೆಚ್ಚಿನ  ವಿವರಣೆ ನೀಡಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಕೊರೊನಾ,  ಲಾಕ್ಡೌನ್ನಿಂದಾಗಿರುವ ನಷ್ಟಕ್ಕೊಳಗಾಗಿರುವ ಆರ್ಥಿಕತೆಗೆ ಪುನಶ್ಚೇತನ ನೀಡುವ ಸಲುವಾಗಿ ಬಡವರಿಗೆ, ಶ್ರಮಿಕ ವರ್ಗದವರಿಗೆ ಸಹಾಯವಾಗಲೆಂದು 20 ಲಕ್ಷ ಕೋಟಿ ವಿಶೇಷ ಪ್ಯಾಕೇಜ್ ಘೋಷಿಸಿದ್ದರು. ಈ ವಿಶೇಷ ಪ್ಯಾಕೇಜ್ ಕುರಿತು ನಿರ್ಮಲಾ ಸೀತಾರಾಮನ್ ವಿವರ  ಹಂಚಿಕೊಳ್ಳಲಿದ್ದಾರೆ. ಮತ್ತು  ಯಾರು , ಯಾರಿಗೆ  ಯಾವ ರೀತಿಯ  ಅನುಕೂಲವಾಗಲಿದೆ  ಎಂಬ ಮಾಹಿತಿ  ಕೊಡಲಿದ್ದಾರೆ. 

'ನಾವು ಜನರ ಸಾಮರ್ಥ್ಯ, ಕೌಶಲಗಳನ್ನು ಜಾಗತಿಕ ಮಾನದಂಡಗಳಿಗೆ ಅನುಗುಣವಾಗಿ ಹೆಚ್ಚಿಸಲು  ವಿಶ್ವದರ್ಜೆಯ ಸ್ಥಳೀಯ ಬ್ರಾಂಡ್ಗಳನ್ನು ರೂಪಿಸುತ್ತೇವೆ' ಎಂದು ನಿರ್ಮಲಾ ಸೀತಾರಾಮನ್ ಟ್ವಿಟರ್ನಲ್ಲಿ ಪ್ಯಾಕೇಜ್ ಬಗ್ಗೆ ಹೊಸ ನಿರೀಕ್ಷೆ ಹುಟ್ಟುಹಾಕಿದ್ದಾರೆ. ಮಂಗಳವಾರ ಪ್ರಧಾನಿ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದ ಬೆನ್ನಲ್ಲೇ ಟ್ವೀಟ್ ಮಾಡಿದ್ದ ಹಣಕಾಸು ಸಚಿವರು  ಇದು ಕೇವಲ ಪ್ಯಾಕೇಜ್ ಅಲ್ಲ. ಮನಸ್ಥಿತಿಗಳ ಸುಧಾರಣೆಗೆ ಮುನ್ನುಡಿ'' ಎಂದೂ ದು ಹೇಳಿದ್ದರು. ಆದರ ಇದಕ್ಕೆ ಮಾಜಿ ಹಣಕಾಸು ಸಚಿವ ಚಿದಂಬರಂ ಪ್ರತಿಕ್ರಿಯೆ ವ್ಯಕ್ತಪಡಿಸಿ ಹೆಡ್  ಲೈನ್ ಕೊಟ್ಟು ಪುಟ ಖಾಲಿಬಿಟ್ಟಿದ್ದಾರೆ ಎಂದು  ಮೂದಲಿಸಿದ್ದರು.