ನವದೆಹಲಿ 14: ಕೇಂದ್ರ ಗೃಹ ಸಚಿವ ರಾಜನಾಥ್
ಸಿಂಗ್ ಈ ಬಾರಿ ದಸರಾ
ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಿದ್ದಾರೆ. ಭಾರತ-ಪಾಕಿಸ್ತಾನ ಅತ್ಯಂತ
ಸೂಕ್ಷ್ಮ ಗಡಿ ಪ್ರದೇಶದಲ್ಲಿ ಶಸ್ತ್ರಪೂಜೆಯನ್ನುಸಿಂಗ್
ನೆರವೇರಿಸಲಿದ್ದಾರೆ.
ಭಾರತದೊಂದಿಗೆ ಈ ಹಿಂದೆ ಪೂರ್ಣ
ಪ್ರಮಾಣದ ಯುದ್ಧ ನಡೆಸಿ ಈಗಲೂ ಪಾಕಿಸ್ತಾನ ಕಾಲು
ಕೆರೆದುಕೊಂಡು ಕ್ಯಾತೆ ತೆಗೆಯುತ್ತಿರುವ ಅತ್ಯಂತ ಸೂಕ್ಷ್ಮ ಸ್ಥಳದಲ್ಲೇ ಗೃಹ ಸಚಿವರು ಶಸ್ತ್ರ
ಪೂಜೆ ನೆರವೇರಿಸಲು ಸಜ್ಜಾಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ (ಕುರುಳಿನ ಕರೆ ಚಿತ್ರದಲ್ಲಿನ ಮೈಸೂರು
ದಸರಾ ಎಷ್ಟೊಂದು ಸುಂದರ ಎಂಬ ಜನಪ್ರಿಯ ಗೀತೆಯ
ಶತ್ರುವ ಅಳಿಸಲು ಶಸ್ತ್ರವ ಹೂಡಿ ಎಂಬ ಆಯುಧಪೂಜೆ
ಹಾಡಿನ ಸಾಲನ್ನು ನೆನೆಪಿಸುತ್ತದೆ).
ರಾಜಸ್ತಾನದ ಭಾರತ-ಪಾಕಿಸ್ತಾನ ಗಡಿಯ
ಬಿಕನೇರ್ನಲ್ಲಿ ಗಡಿ ಭದ್ರತಾ ಪಡೆ(ಬಿಎಸ್ಎಫ್) ಯೋದರೊಂದಿಗೆ ಗೃಹ ಸಚಿವರು ಅ.19ರಂದು ದಸರಾ ಆಚರಿಸಲಿದ್ದಾರೆ
ಎಂದು ಗೃಹ ಸಚಿವಾಲಯದ ಹಿರಿಯ
ಅಧಿಕಾರಿಯೊಬ್ಬರು ಹೇಳಿದ್ದಾರೆ.
ಗಡಿ ಪ್ರದೇಶದ ಮುಂಚೂಣಿ
ನೆಲೆಯಲ್ಲಿನ ಬಾರ್ಡರ್ ಔಟ್ ಪೋಸ್ಟ್ (ಬಿಪಿಒ)ನಲ್ಲಿ ಶಸ್ತ್ರ ಪೂಜೆಯನ್ನೂ ಸಹ ಸಿಂಗ್ ನೆರವೇರಿಸುವರು.
ಕೇಂದ್ರದ ಸಚಿವರೊಬ್ಬರು ಇಂಡೋ-ಪಾಕ್ ಗಡಿಯಲ್ಲಿ
ಇಂಥ ಪೂಜೆ ನೆರವೇರಿಸಿ ದಸರಾವನ್ನು
ವಿಶಿಷ್ಟವಾಗಿ ಆಚರಿಸಲು ಮುಂದಾಗಿರುವುದು ಇದೇ ಮೊದಲು.
ದಶಕಂಠ ರಾವಣನ ವಿರುದ್ಧ ರಾಮನ ವಿಜಯೋತ್ಸವದ ಸಂಭ್ರಮಾಚರಣೆಯೂ
ದಸರಾದ ಒಂದು ಭಾಗವಾಗಿದೆ. ದಸರಾ
ಸಂದರ್ಭದಲ್ಲಿ ಅದರಲ್ಲೂ ಗಡಿ ಪ್ರದೇಶದಲ್ಲಿ ರಾಜನಾಥ್
ಸಿಂಗ್ ಅವರು ಶಸ್ತ್ರಪೂಜೆಯು ಶತ್ರುವ
ಅಳಿಸಲು ಶಸ್ತ್ರವ ಹೂಡಿ ಎಂಬ ಆಯುಧಪೂಜೆ
ಹಾಡಿನ ಸಾಲಿನಂತಿರುವುದು ಕುತೂಹಲಕ್ಕೆ ಕಾರಣವಾಗಿದೆ.