* ಸದಾನಂದ ಮಜತಿ
ಬೆಳಗಾವಿ: ತಂತ್ರಜ್ಞಾನ ಇಂದು ಎಲ್ಲ ರಂಗಗಳನ್ನು ಪ್ರವೇಶಿಸಿ ಜನರ ಕೆಲಸ ಹಗುರಗೊಳಿಸಿದೆ. ಅದರಲ್ಲೂ ಕಾಮರ್ಿಕರ ಕೊರತೆಯಿಂದ ನಲುಗಿರುವ ಕೃಷಿ ಕ್ಷೇತ್ರಕ್ಕೆ ಪೂರಕವಾಗಿ ಅನೇಕ ಪ್ರಗತಿಪರ ರೈತರು, ವಿಜ್ಞಾನಿಗಳು ಆಧುನಿಕ ಕೃಷಿ ಸಾಧನ-ಸಲಕರಣೆ ಆವಿಷ್ಕರಿಸುತ್ತಿರುವುದು ರೈತರ ಶ್ರಮ ಕಡಿಮೆ ಮಾಡಿವೆ. ಕೂಲಿಕಾಮರ್ಿಕರ ಕೊರತೆಯಿಂದ ರೈತರು ಹೆಚ್ಚಾಗಿ ಯಂತ್ರಗಳ ಮೊರೆ ಹೋಗುತ್ತಿದ್ದಾರೆ.
ಈಗಾಗಲೇ ಜಿಲ್ಲೆಯಲ್ಲಿ ನೇಗಿಲು, ಕುಂಟಿ, ಒಕ್ಕಲು ಮಾಡುವ ಯಂತ್ರಗಳು, ಬಿತ್ತನೆ ಕೂರಿಗೆ, ಎಡೆ ಹೊಡೆಯಲು ಹೀಗೆ ಅನೇಕ ಕೃಷಿ ಕಾರ್ಯಗಳಿಗೆ ಸಾಧನಗಳ ಬಳಕೆ ಚಾಲ್ತಿಯಲ್ಲಿದೆ. ಇದಕ್ಕೆ ಈಗ ಹೊಸ ಸೇರ್ಪಡೆ ಸೋಯಾಬೀನ್ ಕಾಳು ಚಾಣಿಸುವ ಯಂತ್ರ. ಸೋಯಾಬೀನ್ ಬೆಳೆಯುವ ಪ್ರದೇಶದಲ್ಲಿ ಈ ಸಾಧನ ರೈತರ ಗಮನ ಸೆಳೆಯುತ್ತಿದೆ.
ದಶಕದಿಂದ ಈಚೆಗೆ ಜಿಲ್ಲೆಯಲ್ಲಿ ಸೋಯಾಬೀನ್ ಬೆಳೆಯ ಕ್ಷೇತ್ರ ಗಣನೀಯವಾಗಿ ವಿಸ್ತರಣೆಯಾಗುತ್ತಿದ್ದು, ಒಂದು ಲಕ್ಷ ಹೆಕ್ಟೇರ್ ಸನಿಹಕ್ಕೆ ತಲುಪಿದೆ. ಕಾಮರ್ಿಕರ ಅವಲಂಬನೆ ಕಡಿಮೆಯಾಗಿರುವುದು ಹಾಗೂ ರೋಗಬಾಧೆಯ ಕಾಟವಿಲ್ಲದ ಕಾರಣ ಹೆಚ್ಚಿನ ರೈತರು ಈ ಬೆಳೆಯತ್ತ ಆಕಷರ್ಿತರಾಗುತ್ತಿದ್ದಾರೆ. ಬಿತ್ತನೆ ಮಾಡಿ ಎರಡ್ಮೂರು ಬಾರಿ ಎಡೆ ಹೊಡೆದು, ಒಮ್ಮೆ ಔಷಧಿ ಸಿಂಪಡಣೆ ಮಾಡಿದರೆ ಮುಂದೆ ಕೊಯ್ಲಿಗೆ ಹೊಲಕ್ಕೆ ಕಾಲಿಡಬೇಕು.
ಮುಂಚೆ ಸೋಯಾಬೀನ್ ಕೊಯ್ಲು ಮಾಡಿದ ಬಳಿಕ ಒಕ್ಕಲು ಮಾಡಿ ನೇರವಾಗಿ ಮಾರಾಟ ಮಾಡಲಾಗುತ್ತಿತ್ತು. ಇದರಿಂದ ವ್ಯಾಪಾರಸ್ಥರು ಮಣ್ಣಿನ ಲೆಕ್ಕ ಹಿಡಿದು ಚೀಲಕ್ಕೆ 4-5 ಕೆಜಿ ತೂಕದಲ್ಲಿ ಕಡಿತ ಮಾಡುವುದು ರೂಢಿಯಲ್ಲಿತ್ತು. ಈಗ ಐಟಿಸಿ ಕಂಪನಿಯವರು ತಾಲೂಕು, ಹೋಬಳಿಗಳಲ್ಲಿ ಸೋಯಾಬೀನ್ ಖರೀದಿ ಕೇಂದ್ರ ತೆರೆದಿದ್ದು, ಬೆಲೆ ಹಾಗೂ ತೂಕದಲ್ಲಿ ಪಾರದರ್ಶಕತೆ ಇರುವುದರಿಂದ ರೈತರು ಹೆಚ್ಚಾಗಿ ಕೇಂದ್ರಗಳಲ್ಲೇ ಮಾರಾಟ ಮಾಡುತ್ತಿದ್ದಾರೆ. ಆದರೆ, ಕಾಳುಗಳು ಮಣ್ಣು, ಕಡಿಯಿಂದ ಕೂಡಿದ್ದರೆ ಅವುಗಳನ್ನು ತಿರಸ್ಕರಿಸಲಾಗುತ್ತಿದೆ.
ಹೀಗಾಗಿ ರೈತರು ಕಾಳು ಸ್ವಚ್ಛ ಮಾಡಿ ಮಾರಾಟಕ್ಕೆ ಒಯ್ಯುತ್ತಿದ್ದಾರೆ. ಮುಂಚೆ ರೈತರು ಮಣ್ಣು, ಕಡಿ ಸ್ವಚ್ಛ ಮಾಡಲು ಸಾಂಪ್ರಾದಾಯಿಕ ಪದ್ಧತಿಯ ಮೊರೆ ಹೋಗಿದ್ದರು. ರೈತ ಮಹಿಳೆಯರು ಸೇರಿಕೊಂಡು ಬಿದರಿನ ಚಾಣಿಗೆ ಮೂಲಕ ಸ್ವಚ್ಛಗೊಳಿಸುತ್ತಿದ್ದರು. ಇದು ಶ್ರಮದಾಯಕ ಕೆಲಸವಾಗಿತ್ತು. 8-10 ಮಹಿಳೆಯರು ಸೇರಿ ದಿನಕ್ಕೆ 15-20 ಚೀಲ ಕಾಳು ಸ್ವಚ್ಛ ಮಾಡುವ ಹೊತ್ತಿಗೆ ಹೈರಾಣ ಆಗುತ್ತಿದ್ದರು.
ರೈತರ ಶ್ರಮ ದೂರ ಮಾಡುವ ನಿಟ್ಟಿನಲ್ಲಿ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹಿರೇಹೊನ್ನಹಳ್ಳಿಯ ರೈತರೊಬ್ಬರು ಕಡಿಮೆ ಖಚರ್ಿನಲ್ಲಿ ಸೋಯಾಬೀನ್ ಸ್ವಚ್ಛಗೊಳಿಸುವ ಸಾಧನ ಆವಿಷ್ಕಾರಿಸಿದ್ದು, ಬಹುಬೇಗನೆ ಜನಪ್ರಿಯತೆ ಪಡೆದುಕೊಂಡಿದೆ.
ಈ ಸಾಧನ ಸೋಯಾಬೀನ್ ಬೆಳೆಯುವ ರೈತರಿಗೆ ವರದಾನವಾಗಿದೆ. ದಿನಕ್ಕೆ 40-50 ಚೀಲ ಕಾಳು ಸ್ವಚ್ಛಗೊಳಿಸುವ ಇದು ಕಡಿಮೆ ಖಚರ್ಿನ, ಅತ್ಯಂತ ಸರಳ ಸಾಧನವಾಗಿದೆ. ಇಡೀ ಯಂತ್ರಕ್ಕೆ ಬಳಸಿರುವುದು ಎರಡ್ಮೂರು ಸಾವಿರ ರೂಪಾಯಿಯ ತಗಡು ಮಾತ್ರ. ಈ ಸಾಧನಕ್ಕೆ 6-7 ಸಾವಿರ ರೂಪಾಯಿ ಬೆಲೆಯಿದೆ.
ಸುಮಾರು ನಾಲ್ಕು ಅಡಿ ಸುತ್ತಳತೆಯ ಹಾಗೂ ಹತ್ತು ಅಡಿ ಎತ್ತರದ ತಗಡಿನ ಕಂಬಕ್ಕೆ 20 ಸಣ್ಣ ಹಾಗೂ 5 ದೊಡ್ಡ ಗಾತ್ರದ ಸುರುಳಿಯಾಕಾರದ ತಗಡು (ಬುಟ್ಟಿ) ಜೋಡಿಸಲಾಗಿದೆ. ಮೇಲಿನ ಬುಟ್ಟಿಯಲ್ಲಿ ಸೋಯಾಬೀನ್ ಕಾಳು ಹಾಕಿದರೆ ಅವು 20 ಬಟ್ಟಿಯಾಕಾರದ ಸರಳುಗಳಲ್ಲಿ ಸುತ್ತುತ್ತ ಕಾಳಿನಿಂದ ಮಣ್ಣು, ಕಡಿ, ಬೇಳೆ ಬೇರ್ಪಟ್ಟು ಸಣ್ಣ ಸುರುಳಿಯಿಂದ ಕೊಳವೆ ಮೂಲಕ ಹೊರಬಂದರೆ, ಕಾಳುಗಳು ಸುತ್ತುವಾಗ ಪುಟಿಯುತ್ತ ಹೊರ ಸುರುಳಿ ಮೂಲಕ ಕೆಳ ಬಂದು ಮತ್ತೊಂದು ಕೊಳವೆ ಮೂಲಕ ಕೆಳಗೆ ಬರುತ್ತವೆ. ಒಂದು ಗಂಟೆಗೆ ಎರಡ್ಮೂರು ಚೀಲ ಕಾಳು ಸ್ವಚ್ಛವಾಗುತ್ತದೆ.
ಧಾರವಾಡದ ಕೃಷಿ ಮೇಳದಲ್ಲಿ ಈ ಸಾಧನ ನೋಡಿದ ಅನೇಕ ರೈತರು ಖರೀದಿಸಿ ತಂದಿದ್ದಾರೆ. ಹಲವಾರು ರೈತರು ಬಾಡಿಗೆ ಮೇಲೆ ಸಾಧನ ಒಯ್ಯುತ್ತಿದ್ದಾರೆ. ದಿನಕ್ಕೆ 200, 300 ಹೀಗೆ ದಿನಬಾಡಿಗೆಗೆ ಸೋಯಾಬೀನ್ ಸ್ವಚ್ಛಗೊಳಿಸಲು ಈ ಹೊಸ ಯಂತ್ರ ಬಳಸಲಾಗುತ್ತಿದೆ.