ಕಾಬೂಲ್, ಏ 30, ದಕ್ಷಿಣ ಅಫ್ಘಾನಿಸ್ತಾನದ ಹೆಲ್ಮಂಡ್ ಪ್ರಾಂತ್ಯದ ಜಿಲ್ಲೆಯೊಂದರಲ್ಲಿ ರಸ್ತೆಬದಿಯಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ ಹಿರಿಯ ಭದ್ರತಾ ಅಧಿಕಾರಿ ಮೃತಪಟ್ಟಿದ್ದು, ಐವರು ಸೈನಿಕರು ಗಾಯಗೊಂಡಿದ್ದಾರೆ. ಎಂದು ಭದ್ರತಾ ಮೂಲಗಳು ತಿಳಿಸಿವೆ. "ರಸ್ತೆಬದಿಯ ಬಾಂಬ್ ಸ್ಫೋಟದಿಂದ ನಾವಾ ಜಿಲ್ಲೆಯ ರಾಷ್ಟ್ರೀಯ ಭದ್ರತಾ ನಿರ್ದೇಶನಾಲಯದ ಮುಖ್ಯಸ್ಥ ಮೊಹಮ್ಮದ್ ಇಸ್ಮಾಯಿಲ್ ಸಾವನ್ನಪ್ಪಿದರು ಮತ್ತು ಐದು ಸೈನಿಕರು ಗಾಯಗೊಂಡಿದ್ದಾರೆ" ಎಂದು ಹೇಳಲಾಗಿದೆ ಯಾವುದೇ ಭಯೋತ್ಪಾದನಾ ಗುಂಪು ಇನ್ನೂ ದಾಳಿಯ ಹೊಣೆಯನ್ನು ಹೊತ್ತುಕೊಂಡಿಲ್ಲ.