ಒಡಿಶಾ 11: ಸೈಕ್ಲಿಂಗ್ ಫೆಡರೇಶನ್ ಆಫ್ ಇಂಡಿಯಾ ಆಯೋಜಿಸಿದ್ದ 29 ನೇ ರಾಷ್ಟ್ರೀಯ ರೋಡ್ ಸೈಕ್ಲಿಂಗ್ ಚಾಂಪಿಯನ್ ಶಿಪ್ ಡಿಸೆಂಬರ್ 7 ರಿಂದ 10, 2024 ರವರೆಗೆ ಒಡಿಶಾದ ಪುರಿಯಲ್ಲಿ ನಡೆಯಿತು. ಈ ಸ್ಪರ್ಧೆಯಲ್ಲಿ ದೇಶಾದ್ಯಂತದ ಸ್ಪರ್ಧಿಗಳು ವಿವಿಧ ವಿಭಾಗಗಳಲ್ಲಿ ಸ್ಪರ್ಧಿಸಿದರು.
ನೈಋತ್ಯ ರೈಲ್ವೆ ತಂಡವು ಒಟ್ಟು ಏಳು ಸ್ಪರ್ಧಿಗಳನ್ನು ಒಳಗೊಂಡಿತ್ತು, ಅದರಲ್ಲಿ ನಾಲ್ವರು - ವೆಂಕಪ್ಪ ಕೆ, ಮೇಘಾ ಗುಗಾಡ್, ಕಾವೇರಿ ಮುರಾನಾಳ್ ಮತ್ತು ಚೈತ್ರಾ ಬೋರ್ಜಿ ಅವರನ್ನೊಳಗೊಂಡ ತಂಡ 60 ಕಿ.ಮೀ ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದರು.
ವೈಯಕ್ತಿಕ ಸಾಧನೆಗಳು:
* ಬಾಗಲಕೋಟೆಯಲ್ಲಿ ಕಮರ್ಷಿಯಲ್ ಕ್ಲರ್ಕ್ ಕಮ್ ಟಿಕೆಟ್ ಕಲೆಕ್ಟರ್ ಆಗಿರುವ ವೆಂಕಪ್ಪ ಕೆ. 60 ಕಿ.ಮೀ ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
* ಹುಬ್ಬಳ್ಳಿಯಲ್ಲಿ ಕಮರ್ಷಿಯಲ್ ಕ್ಲರ್ಕ್ ಕಮ್ ಟಿಕೆಟ್ ಕಲೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿರುವ, ಕಾವೇರಿ ಮುರಾನಾಳ್:
* 60 ಕಿ.ಮೀ ವೈಯಕ್ತಿಕ ರೋಡ್ ರೇಸ್ ಮತ್ತು 60 ಕಿ.ಮೀ ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕಗಳನ್ನು ಪಡೆದರು.
* 2023/24 ರ ಪಂದ್ಯಾವಳಿಯ ಅತ್ಯುತ್ತಮ ಸೈಕ್ಲಿಸ್ಟ್ ಪ್ರಶಸ್ತಿಯನ್ನು ನೀಡಲಾಯಿತು.
* ಹುಬ್ಬಳ್ಳಿಯಲ್ಲಿ ಕ್ಲರ್ಕ್ ಆಗಿರುವ, ಮೇಘಾ ಗುಗಾಡ್ :
* 30 ಕಿ.ಮೀ ವೈಯಕ್ತಿಕ ಟೈಮ್ ಟ್ರಯಲ್ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಮತ್ತು 60 ಕಿ.ಮೀ ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.
* ಚೈತ್ರಾ ಬೋರ್ಜಿ - 60 ಕಿ.ಮೀ ಮಿಶ್ರ ತಂಡ ರಿಲೇ ಸೈಕ್ಲಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ತಂಡದ ಯಶಸ್ಸಿಗೆ ಕೊಡುಗೆ ನೀಡಿದರು.
ತರಬೇತುದಾರ ನಿಜಪ್ಪ ವೈ. (ಉಪಮುಖ್ಯ ಟಿಕೆಟ್ ಪರೀವೀಕ್ಷಕರು/ಹುಬ್ಬಳ್ಳಿ ವಿಭಾಗ) ಅವರ ಮಾರ್ಗದರ್ಶನದಲ್ಲಿ ತಂಡದ ಗಮನಾರ್ಹ ಸಾಧನೆಗಳು ಸಾಧ್ಯವಾಯಿತು, ಅವರ ಸಮರೆ್ಣ ಮತ್ತು ಕಾರ್ಯತಂತ್ರದ ಯೋಜನೆ ಅವರ ಯಶಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ನೈಋತ್ಯ ರೈಲ್ವೆಯ ಜನರಲ್ ಮ್ಯಾನೇಜರ್ ಅರವಿಂದ್ ಶ್ರೀವಾಸ್ತವ್ ಅವರು ಆಟಗಾರರ ಅಸಾಧಾರಣ ಸಾಧನೆಗಳನ್ನು ಅಭಿನಂದಿಸಿದರು, ಅವರ ಸಮರೆ್ಣ ಮತ್ತು ಬದ್ಧತೆಯನ್ನು ಶ್ಲಾಘಿಸಿದರು. ಅವರ ಕಾರ್ಯಕ್ಷಮತೆ ನೈಋತ್ಯ ರೈಲ್ವೆಗೆ ಮಾತ್ರವಲ್ಲದೆ ರಾಷ್ಟ್ರಕ್ಕೂ ಹೆಮ್ಮೆ ತರಿಸಿದೆ ಎಂದು ಬನ್ನಿಸಿದ್ದಾರೆ.