ದಕ್ಷಿಣ ಕೊರಿಯಾ- ಅಮೆರಿಕ ನಡುವೆ ಸೇನಾ ನಿರ್ವಹಣೆ ಕುರಿತ ಮಾತುಕತೆ ಆರಂಭ

ಮಾಸ್ಕೋ, ನ 18:    ಅಮೆರಿಕದ ಕೊರಿಯಾ ಪಡೆಗಳು (ಯುಎಸ್ ಎಫ್ ಕೆ ) ನಿರ್ವಹಣಾ ವೆಚ್ಚಕ್ಕೆ ಸಂಬಂಧಿಸಿದಂತೆ ದಕ್ಷಿಣ ಕೊರಿಯಾ ಮತ್ತು ಅಮೆರಿಕ ಸೋಮವಾರ ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿವೆ.       ಸಿಯೋಲ್ ನಲ್ಲಿ ನಡೆಯಲಿರುವ ಈ ಮಾತುಕತೆಯಲ್ಲಿ ದಕ್ಷಿಣ ಕೊರಿಯಾದ ಸಂಯೋಜಕ ಜಿಯೋಂಗ್ ಯೂನ್ ಬೋ ನೇತೃತ್ವ ವಹಿಸಿದ್ದು, ಅಮೆರಿಕದ ಜೇಮ್ಸ್ ಡೆಹಾರ್ಟ್ನೊಂದಿಗೆ ಮಂಗಳವಾರದವರೆಗೆ  ಚರ್ಚೆ  ನಡೆಸಲಿದ್ದಾರೆ.     ದಕ್ಷಿಣ ಕೊರಿಯಾದಲ್ಲಿ ನಿಯೋಜಿಸಿರುವ ಅಮೆರಿಕದ ಸೇನಾ ಸಿಬ್ಬಂದಿಯ ನಿರ್ವಹಣಾ ವೆಚ್ಚದ ಕುರಿತು ಅಮೆರಿಕ ಮತ್ತು ಕೊರಿಯಾ ದೇಶಗಳ ನಡುವೆ ದೀರ್ಘಕಾಲದ ಬಿಕ್ಕಟ್ಟು ಮನೆ ಮಾಡಿದೆ. ಅಮೆರಿಕ ಸೇನೆಯನ್ನು ವಿಶೇಷ ದ್ವಿಪಕ್ಷೀಯ ಕ್ರಮಗಳ ಒಪ್ಪಂದ (ಎಸ್ಎಂಎ) ಮೂಲಕ ನಿಯೋಜಿಸಲಾಗಿದ್ದು, ಪ್ರತಿ ಐದು ವರ್ಷಗಳಿಗೊಮ್ಮೆ ನವೀಕರಿಸಲ್ಪಡುತ್ತದೆ. ಕಳೆದ ಡಿಸೆಂಬರ್ ನಲ್ಲಷ್ಟೇ ಇದನ್ನು ನವೀಕರಿಸಲಾಗಿತ್ತು.     1991ರಿಂದ ದಕ್ಷಿಣ ಕೊರಿಯಾದ ದೇಶಾದ್ಯಂತ 28,500 ಅಮೆರಿಕದ ಸದೃಢ ಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಸೇನೆ ಸಿಯೋಲ್ ಸೇರಿದಂತೆ ಅನೇಕ ಪ್ರದೇಶಗಳ ಬೆಲೆಬಾಳುವ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಂಡಿವೆ. ಎಸ್ ಎಂಎ ಒಪ್ಪಂದದ ಪ್ರಕಾರ,  ಈ ಸೇನಾ ಪಡೆಯ ನಿರ್ವಹಣಾ ವೆಚ್ಚವನ್ನು ಉಭಯ ರಾಷ್ಟ್ರಗಳು ಸಮನಾಗಿ ಹಂಚಿಕೊಳ್ಳಬೇಕು. ಆದರೆ, ಎರಡೂ ರಾಷ್ಟ್ರಗಳು ಎಷ್ಟು ವೆಚ್ಚ ಮಾಡಬೇಕು ಎಂಬುದರ ಬಗ್ಗೆ ತೀಮರ್ಾನಕ್ಕೆ ಬಂದಿಲ್ಲ.