ದಕ್ಷಿಣ ಆಫ್ರಿಕಾ ವಿಶ್ವಕಪ್ ಗೆಲ್ಲಲಿದೆ : ಸ್ಟೈನ್ ವಿಶ್ವಾಸ

ದುಬೈ, ಏ 18  ಅತ್ಯುತ್ತಮ ಆಟಗಾರರನ್ನೊಳಗೊಂಡಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಮುಂಬರುವ ಐಸಿಸಿ ವಿಶ್ವಕಪ್ ಗೆಲ್ಲುವ ಹೆಚ್ಚಿನ ಅವಕಾಶವಿದೆ ಎಂದು ಹಿರಿಯ ವೇಗಿ ಡೇಲ್ ಸ್ಟೈನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

  ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ರಾಯಲ್ ಚಾಲೆಂಜಸರ್್ ಪರ ಆಡುತ್ತಿರುವ ಸ್ಟೈನ್,  ಅದ್ಭುತ ಲಯದಲ್ಲಿರುವ ಫಾಫ್ ಡು ಪ್ಲೇಸಿಸ್, ಕ್ವಿಂಟಾನ್ ಡಿ ಕಾಕ್ ಹಾಗೂ ಕಗಿಸೋ ರಬಡಾ ಅವರನ್ನೊಳಗೊಂಡ ದಕ್ಷಿಣ ಆಫ್ರಿಕಾ 50 ಓವರ್ಗಳ ಮಾದರಿಯಲ್ಲಿ ಬಲಿಷ್ಟ ತಂಡವಾಗಿ ಹೊರಹೊಮ್ಮಿದೆ. ಹಾಗಾಗಿ, ಇಂಗ್ಲೆಂಡ್ ಹಾಗೂ ವೇಲ್ಸ್ನಲ್ಲಿ ಮೇ 30 ರಿಂದ ನಡೆಯುವ ಐಸಿಸಿ ವಿಶ್ವಕಪ್ನಲ್ಲಿ ಆಡಲು ರಾಷ್ಟ್ರೀಯ ತಂಡ ಎದುರು ನೋಡುತ್ತಿದೆ ಎಂದರು. 

   ತಂಡದ ನಾಯಕ ಫಾಫ್ ದುಪ್ಲಿಸಿಸ್ ತಡವಾಗಿ ಲಯಕ್ಕೆ ಮರಳಿದ್ದಾರೆ. ಜತೆಗೆ, ಐಪಿಎಲ್ ಟೂರ್ನಿಯಲ್ಲಿ  ಸ್ಪಿನ್ನರ್ ಇಮ್ರಾನ್ ತಾಹಿರ್ ಹೆಚ್ಚಿನ ವಿಕೆಟ್ಗಳನ್ನು ಕಬಳಿಸುತ್ತಿದ್ದಾರೆ. ಕ್ವಿಂಟಾನ್ ಡಿ ಕಾಕ್ ಸೇರಿದಂತೆ ಇನ್ನುಳಿದ ಎಲ್ಲ 11 ಆಟಗಾರರು ಪಂದ್ಯದ ಗೆಲ್ಲಿಸಿಕೊಡುವ ಸಾಮಾಥ್ರ್ಯ ಹೊಂದಿದ್ದಾರೆ. ಲಕ್ ಜತೆಗೆ ಅಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿದ್ದೇ ಆದಲ್ಲಿ ನಾವು ವಿಶ್ವಕಪ್ ಗೆಲ್ಲಬಹುದು ಎಂದರು.  

  ಪ್ರಸ್ತುತ ಐಪಿಎಲ್ನಲ್ಲಿ ಮಿಂಚುತ್ತಿರುವ ಮಾರಕ ವೇಗಿ ಕಗಿಸೋ ರಬಡಾ, ಐಸಿಸಿ ವಿಶ್ವಕಪ್ನಲ್ಲೂ ತಮ್ಮ ಲಯ ಮುಂದುವರಿಸಲಿದ್ದಾರೆ ಎಂಬ ನಂಬಿಕೆ ಇದೆ. ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿದ್ದ ಹಲವು ಆಟಗಾರರ ಮಿಂಚಿ ಮರೆಯಾಗಿದ್ದಾರೆ. ಆದರೆ, ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಸಿಕ್ಕ ಅವಕಾಶವನ್ನು ರಬಡಾ ತನ್ನ ಎರಡು ಕೈಗಳಿಂದ ಅಪ್ಪಿಕೊಂಡಿದ್ದಾರೆ. ಇವರು ದೀರ್ಘ ಕಾಲ ಆಫ್ರಿಕಾ ತಂಡದಲ್ಲಿ ಆಡುತ್ತಾರೆಂಬ ಭರವಸೆ ಇದೆ ಎಂದರು. 

  ಕಳೆದ ಒಂದೂವರೆ ವರ್ಷದಲ್ಲಿ ದಕ್ಷಿಣ ಆಫ್ರಿಕಾ ಆಡಿರುವ ಒಟ್ಟು 13 ಏಕದಿನ ಸರಣಿಯಲ್ಲಿ 11ರಲ್ಲಿ ಜಯ ಸಾಧಿಸಿದೆ. ಹಾಗಾಗಿ, ಮುಂಬರುವ ಮಹತ್ತರ ಟೂರ್ನಿಯಲ್ಲಿ ಅಪಾರ ನಿರೀಕ್ಷೆ ಹೊತ್ತು ತಂಡ ಸಾಗುತ್ತಿದ್ದೇವೆ. ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೆ ವಿಶ್ವಕಪ್ನಲ್ಲಿ ಭಾಗವಹಿಸಿದ್ದೇ ಆದಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ ಎಂದರು. 

   ವಿಶ್ವಕಪ್ ಟೂರ್ನಿ  ಆರಂಭವಾಗುವುದಕ್ಕೂ ಮುನ್ನ ದಕ್ಷಿಣ ಆಫ್ರಿಕಾ ಎರಡು ಅಭ್ಯಾಸ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಆಡಲಿದೆ. ಮೇ 30 ರಂದು ಇಂಗ್ಲೆಂಡ್ ವಿರುದ್ಧ ಆಫ್ರಿಕಾ ಮೊದಲ ಪಂದ್ಯವಾಡಲಿದೆ.