ನವದೆಹಲಿ, ಜ. 28 : ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಟೆಸ್ಟ್ ಸರಣಿಯನ್ನು ಸೋತಿರುವ ದಕ್ಷಿಣ ಆಫ್ರಿಕಾ ತಂಡಕ್ಕೆ ಪೆಟ್ಟು ಬಿದಿದೆ. ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ದಕ್ಷಿಣ ಆಫ್ರಿಕಾ ನಾಲ್ಕನೇ ಟೆಸ್ಟ್‌ನಲ್ಲಿ ನಿಧಾನಗತಿಯ ಬೌಲಿಂಗ್ ಪರಿಣಾಮ, ಆರು ಅಂಕ ಕಳೆದುಕೊಂಡಿದೆ. ಅಲ್ಲದೆ ಪಂದ್ಯದ ಶುಲ್ಕದ 60 ಪ್ರತಿಶತದಷ್ಟು ದಂಡವನ್ನು ವಿಧಿಸಲಾಯಿತು.
ದಕ್ಷಿಣ ಆಫ್ರಿಕಾ ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ ನಿಧಾನಗತಿಯ ಬೌಲಿಂಗ್ ನಿಂದ ಅಂಕಗಳನ್ನು ಕಳೆದುಕೊಂಡ ಮೊದಲ ತಂಡವಾಗಿದೆ. ಈ ಸರಣಿಯಲ್ಲಿ ಒಂದು ಪಂದ್ಯ ಗೆದ್ದ ದಕ್ಷಿಣ ಆಫ್ರಿಕಾಕ್ಕೆ 30 ಪಾಯಿಂಟ್‌ಗಳು ದೊರೆತವು ಆದರೆ ಆರು ಪಾಯಿಂಟ್‌ಗಳನ್ನು ಕಡಿತಗೊಂಡವು. ಆಫ್ರಿಕಾ ಚಾಂಪಿ ನ್ ಶಿಪ್ ಅಂಕ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ.
ವಾಂಡರರ್ಸ್‌ನಲ್ಲಿ ನಿಧಾನಗತಿಯ ಬೌಲಿಂಗ್ ನಿಂದ ದಕ್ಷಿಣ ಆಫ್ರಿಕಾಕ್ಕೆ ಪಂದ್ಯದ ಶುಲ್ಕದ ಶೇಕಡಾ 60 ರಷ್ಟು ದಂಡ ವಿಧಿಸಲಾಗಿದೆ. ಆತಿಥೇಯರು ತಂಡದ ಪ್ರಮುಖ ಸ್ಪಿನ್ನರ್ ಕೇಶವ್ ಮಹಾರಾಜ್ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಡಿರಲಿಲ್ಲ. ಪರಿಣಾಮ ಈ ಟೆಸ್ಟ್ ನಲ್ಲಿ ಎಲ್ಲ ಓವರ್ ಗಳನ್ನು ವೇಗಿಗಳೇ ಮಾಡಿದ್ದಾರೆ.
ಐಸಿಸಿ ನೀತಿ ಸಂಹಿತೆಯಡಿ, ಪ್ರತಿ ನಿಧಾನಗತಿಯ ಓವರ್‌ಗೆ ಪಂದ್ಯದ ಶುಲ್ಕದ ಶೇಕಡಾ 20 ಮತ್ತು ಪ್ರತಿ ಓವರ್‌ಗೆ ಎರಡು ಪಾಯಿಂಟ್‌ಗಳ ದಂಡ ವಿಧಿಸಲಾಗುತ್ತದೆ. ದಕ್ಷಿಣ ಆಫ್ರಿಕಾದ ನಾಯಕ ಫಾಫ್ ಡು ಪ್ಲೆಸಿಸ್ ಈ ಶಿಕ್ಷೆಯನ್ನು ಒಪ್ಪಿಕೊಂಡರು, ಆದ್ದರಿಂದ ಪ್ರಕರಣದ ವಿಚಾರಣೆಯ ಅಗತ್ಯವಿರಲಿಲ್ಲ.