ವಿಜಯಪುರ 23: ನಗರದ ಪ್ರತಿಷ್ಠಿತ ವಿ. ಭ. ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜು, ವಿಜಯಪುರದ ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಜಿ. ಗುನ್ನಾಪೂರ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು, ರಾಷ್ಟ್ರ ಮಟ್ಟದ ಪದವಿ ಪೂರ್ವ ಕಾಲೇಜುಗಳ ಹಾಕಿ ತಂಡಕ್ಕೆ ಆಯ್ಕೆಯಾಗಿದ್ದಾಳೆ.
ದಿ. 02-12-2024 ಮತ್ತು 03-12-2024 ರಂದು ಕೊಡಗು ಜಿಲ್ಲೆಯ ಪೊನ್ನಂಟೇಟೆ ತಾಲ್ಲೂಕಿನಲ್ಲಿ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಹಾಕಿ ಪಂದ್ಯಗಳು ಜರುಗಿದ್ದವು. ಈ ಆಯ್ಕೆಯಲ್ಲಿ ವಿ. ಭ. ದರಬಾರ ಕಾಲೇಜಿನಿಂದ ಭಾಗವಹಿಸಿ ರಾಷ್ಟ್ರ ತಂಡಕ್ಕೆ ಆಯ್ಕೆಯಾಗಿದ್ದು ದಿನಾಂಕ 29-01-2025 ರಂದು ಜಾರ್ಖಂಡ ರಾಜ್ಯದಲ್ಲಿ ನಡೆಯಲಿರುವ ಪದವಿ ಪೂರ್ವ ಕಾಲೇಜುಗಳ ರಾಷ್ಟ್ರ ಮಟ್ಟದ ಹಾಕಿ ಪಂದ್ಯಾವಳಿಗಳು ನಡೆಯಲಿದ್ದು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾಳೆ.
ಈ ವಿದ್ಯಾರ್ಥಿನಿಯ ಸಾಧನೆಗೆ ಸಂಸ್ಥೆಯ ಅದ್ಯಕ್ಷರಾದ ರಾಜೇಶ ಆರ್. ದರಬಾರ, ಗೌರವ ಕಾರ್ಯದರ್ಶಿಗಳಾದ ಪ್ರಕಾಶ ಎಸ್. ಉಡುಪಿಕರ, ಜಂಟಿ ಕಾರ್ಯದರ್ಶಿಗಳಾದ ಸೋಮನಗೌಡ ಆರ್. ಪಾಟೀಲ (ಸಾಸನೂರ) ಮತ್ತು ಸಮನ್ವಯ ಅಧಿಕಾರಿಗಳಾದ ಡಾಽಽ ವಿನಾಯಕ ಬಿ. ಗ್ರಾಮಪುರೋಹಿತ ಹಾಗೂ ಪ್ರಾಚಾರ್ಯರಾದ ಟಿ. ಆರ್. ಕುಲಕರ್ಣಿ, ದೈಹಿಕ ಶಿಕ್ಷಣ ಉಪನ್ಯಾಸಕರಾದ ಗಣೇಶ ಗುನ್ನಾಪೂರ ಹಾಗೂ ಬೋದಕ ಮತ್ತು ಬೋದಕೇತರ ಸಿಬ್ಬಂದಿಯವರು ಈ ಸಾಧನೆಯನ್ನು ಅಭಿನಂದಿಸಿದ್ದಾರೆ.