ಶೀಘ್ರದಲ್ಲೇ ತಾಲೂಕಿನಲ್ಲಿ ನೂತನವಾಗಿ ಎರಡು ಪಶು ಚಿಕಿತ್ಸೆ ಆಸ್ಪತ್ರೆಗೆ ಚಾಲನೆ : ಸಚಿವ ಕೆ ವೆಂಕಟೇಶ

Soon two new animal treatment hospitals will be launched in the taluk: Minister K Venkatesh

ಬ್ಯಾಡಗಿ 13: ತಾಲೂಕಿನಲ್ಲಿ ಕುಮ್ಮೂರು ಹಾಗೂ ಕೆರೂಡಿ ಗ್ರಾಮಗಳಲ್ಲಿ ಶೀಘ್ರದಲ್ಲಿಯೇ ನೂತನವಾಗಿ ಪಶು ಚಿಕಿತ್ಸಾ ಆಸ್ಪತ್ರೆಗಳನ್ನು ಮಾಡಲಾಗುವುದು ಎಂದು ಪಶು ಸಂಗೋಪನ ಸಚಿವ ಕೆ ವೆಂಕಟೇಶ್ ಅವರು ಹೇಳಿದರು.

ಪ್ರವಾಸಿ ಮಂದಿರದಲ್ಲಿ ಇಂದು ಭೇಟಿ ನೀಡಿ ಮಾತನಾಡಿದವರು ತಾಲೂಕಿನ ಜೋಯಿಸರಹಳ್ಳಿ ಹಾಗೂ ಕಾಗಿನೆಲೆ ಗ್ರಾಮಗಳಲ್ಲಿ ಇರುವ ಪಶು ಆಸ್ಪತ್ರೆಗಳನ್ನು ನವೀಕರಣಗೊಳಿಸಲಾಗುವುದು ಮತ್ತು ಎರಡು ಹೊಸ ವೈದ್ಯೆ ಸಿಬ್ಬಂದಿಗಳನ್ನು ನೀಡಲಾಗುವುದು ಎಂದು ಭರವಸೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರದ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಬಸವರಾಜ್ ಶಿವಣ್ಣರವರು ಹಾಗೂ ತಾಲೂಕು ದಂಡಾಧಿಕಾರಿ ಫಿರೋಜ್ ಷಾ ಸೊಮನಕಟ್ಟಿ. ತಾಲೂಕು ಪಂಚ ಗ್ಯಾರಂಟಿ ಯೋಜನೆಯ ಅಧ್ಯಕ್ಷ  ಶಂಭನಗೌಡ ಪಾಟೀಲ. ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೆಸಿಮಿ. ಪುರಸಭೆ ಸದಸ್ಯ ರಾಜೇಸಾಬ ಕಳ್ಯಾಳ. ನಜೀರ ಅಹ್ಮದ್ ಶೇಖ್‌. ಹಾಗೂ ಜಿಲ್ಲಾ ಪಶು ವೈದ್ಯಾಧಿಕಾರಿ ಡಾ.ಎಸ್ ಎನ್ ಸಂತಿ. ನಿರ್ದೇಶಕರಾದ ಡಾ.ಮಂಜುನಾಥ್ ಪಾಳೇಗಾರ. ಜಂಟಿ ನಿರ್ದೇಶಕರಾದ ಪರಮೇಶ್ವರ್ ನಾಯಕ . ತಾಲೂಕು ಪಶುವೈದ್ಯಾಧಿಕಾರಿ ಡಾ. ಎಸ್ ಎನ್ ಚೌಡಾಳ. ಹಾಗೂ ಪಶು ಆಸ್ಪತ್ರೆಯ ಇಲಾಖೆಯ ವೈದ್ಯಾಧಿಕಾರಿಗಳು ಸಿಬ್ಬಂದಿಗಳು ಪಕ್ಷದ ಕಾರ್ಯಕರ್ತರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.