ಬೆಂಗಳೂರು, ಡಿ 23- ಜನತಾ ಟಾಕೀಸ್ ಅವರ ಚೊಚ್ಚಲ ನಿರ್ಮಾಣದ ‘ಆನೆಬಲ‘ ಸದ್ಯದಲ್ಲೇ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ
ಇದು ಹೊಸ ಪ್ರತಿಭೆಗಳ ಚಿತ್ರವಾಗಿದ್ದು, ಡಾ ವಿ ನಾಗೇಂದ್ರ ಪ್ರಸಾದ್ ರಚನೆಯ ‘ಮುದ್ದೆ ಮುದ್ದೆ‘ ಹಾಗೂ ‘ಮಳವಳ್ಳಿ ಜಾತ್ರೇಲಿ‘ ಹಾಡುಗಳು ಈಗಾಗಲೇ ಜನಪ್ರಿಯವಾಗಿವೆ ಅನೇಕ ಹೊಸ ಅಂಶಗಳನ್ನು ಹೊತ್ತು ಬರುತ್ತಿರುವ ಈ ಚಿತ್ರದ ಬಗ್ಗೆ ಪ್ರೇಕ್ಷಕರ ವಲಯದಲ್ಲಿ ಸಾಕಷ್ಟು ನಿರೀಕ್ಷೆಗಳಿವೆ
ಸೂನಗಹಳ್ಳಿ ರಾಜು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ‘ಲೂಸಿಯಾ‘ ಖ್ಯಾತಿಯ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿದ್ದು, ಯೋಗರಾಜ್ ಭಟ್ ಒಂದು ಹಾಡನ್ನು ಬರೆದಿದ್ದಾರೆ. ಜೆ.ಟಿ.ಬೆಟ್ಟೇಗೌಡ ಛಾಯಾಗ್ರಹಣ, ಕೆಂಪರಾಜು ಅವರ ಸಂಕಲನ ಈ ಚಿತ್ರಕ್ಕಿದೆ.
ನಿರ್ಮಾಪಕರಾದ ಎ.ವಿ.ವೇಣುಗೋಪಾಲ್ ಅಡಕಿಮಾರನಹಳ್ಳಿ ಅವರು ರೈತಾಪಿ ಕುಟುಂಬದಿಂದ ಬಂದಿದ್ದು ಅವರ ಚೊಚ್ಚಲ ನಿರ್ಮಾಣದ ಚಿತ್ರ ಇದಾಗಿದೆ. ಸಾಗರ್, ರಕ್ಷಿತ, ಮಲ್ಲರಾಜು, ಚಿರಂಜೀವಿ, ಹರೀಶ್, ಗೌತಮ್, ಮುತ್ತುರಾಜ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.