ಶೀಘ್ರದಲ್ಲೇ ತಮಿಳು ಭಾಷೆ ಕಲಿತು, ಮಾತನಾಡುತ್ತೇನೆ: ಅಮಿತ್ ಶಾ

ಚೆನ್ನೈ, ಆಗಸ್ಟ್ 11       ತಾವು ತಮಿಳು ಭಾಷೆಯಲ್ಲಿ ಮಾತನಾಡಲು ಸಾಧ್ಯವಿಲ್ಲ ಎಂದು ವಿಷಾದಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಶೀಘ್ರದಲ್ಲೇ ಅದನ್ನು ಕಲಿಯುವುದಾಗಿ ಭರವಸೆ ನೀಡಿದರು.  ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಅವರು, ತಮಗೆ ತಮಿಳು ಬರದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು.  ಹಿಂದಿಯಲ್ಲಿ ಭಾಷಣ ಮಾಡಿದ್ದು, ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಎಚ್.ರಾಜಾ ಅವರು ತಮಿಳಿನಲ್ಲಿ ಅನುವಾದಿಸಿದರು. ತಾವು ತಮಿಳು ಕಲಿಯಲು ಮತ್ತು ಮಾತನಾಡಲು ಉತ್ಸುಕರಾಗಿರುವುದಾಗಿ ಮತ್ತು ಅದು ಶೀಘ್ರದಲ್ಲೇ ಅದು ಸಾಧ್ಯವಾಗಲಿದೆ ಎಂದು ಶಾ ಹೇಳಿದರು.  ಈ ಕಾರ್ಯದಲ್ಲಿ ತಾವು ಭಾಗವಹಿಸುತ್ತಿರುವುದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಅಥವಾ ಸಂಸದರಾಗಿ ಅಥವಾ ಕೇಂದ್ರ ಗೃಹ ಸಚಿವರಾಗಿ ಅಲ್ಲ. ವೆಂಕಯ್ಯ ನಾಯ್ಡು ಅವರ ವಿದ್ಯಾರ್ಥಿಯಾಗಿ ಎಂದು ಶಾ ಹೇಳಿದರು.  ರಾಜ್ಯಸಭೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡಿರುವ 370ನೇ ವಿಧಿಯನ್ನು ರದ್ದುಗೊಳಿಸುವ ಮಸೂದೆಯನ್ನು ಅಂಗೀಕರಿಸಲು ಸಂಸತ್ತಿನ ಮೇಲ್ಮನೆಯ ಸಭಾಪತಿ ವೆಂಕಯ್ಯ ನಾಯ್ಡು ಅವರ ಚುರುಕಾದ ನಾಯಕತ್ವದಿಂದ ಮಾತ್ರ ಸಾಧ್ಯ ಎಂದು ಅಮಿತ್ ಶಾ ಶ್ಲಾಘಿಸಿದರು.  ನಾಯ್ಡು ಅವರ ವಿದ್ಯಾರ್ಥಿ ದಿನಗಳಿಂದ ಉಪರಾಷ್ಟ್ರಪತಿವರೆಗಿನ ಜೀವನವು ಪ್ರತಿಯೊಬ್ಬರಿಗೂ ಕಲಿಯಲು ಉತ್ತಮ ಪಾಠವಾಗಿದೆ. ನಾಯ್ಡು ತಮ್ಮ ವಿದ್ಯಾರ್ಥಿ ದಿನದಿಂದಲೇ ಪ್ರಜಾಪ್ರಭುತ್ವವನ್ನು ಮರು ಸ್ಥಾಪಿಸಲು ಹೋರಾಟ ಮಾಡಿದವರು. ತುರ್ತ ಸಮಯದಲ್ಲಿ ಜೈಲಿನಲ್ಲಿದ್ದರು ಎಂದರು.