ಚಂಡೀಗಡ, ಅ 14: ಹರಿಯಾಣ ವಿಧಾನಸಭಾ ಚುನಾವಣೆ ಪ್ರಚಾರದ ವೇಳೆ ಬಿಜೆಪಿ ನಾಯಕ ಹಾಗೂ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಮತ್ತೊಮ್ಮೆ ತಮ್ಮ ನಾಲಿಗೆ ಸಡಿಲಿಸಿದ್ದಾರೆ. ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ 'ಸತ್ತ ಇಲಿ' ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದಾರ. ಖಟ್ಟರ್ ಅವರು ಕೂಡಲೇ ಸೋನಿಯಾಗಾಂಧಿ ಅವರ ಕ್ಷಮೆಯಾಚಿಸಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಲೋಕಸಭಾ ಚುನಾವಣೆ ಹೀನಾಯ ಸೋಲಿನ ನಂತರ ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದರು, ಗಾಂಧಿಯೇತರ ಕುಟುಂಬ ಸದಸ್ಯರು ಹೊಸ ಅಧ್ಯಕ್ಷರಾಗಬಹುದು ಎಂದು ಅವರು ಹೇಳಿಕೊಂಡು ಬಂದರು. ಇದು ಒಳ್ಳೆಯದು ಎಂದು ನಾವು ಸಹ ಭಾವಿಸಿದ್ದೆವು. ಗಾಂಧಿ ಕುಟುಂಬದ ಹೊರಗಿವರು ಅಧ್ಯಕ್ಷರಾಗಬಹು ಎಂಬ ಆಶಯಹೊಂದಿದ್ದವು. ಹೊಸ ಕಾಂಗ್ರೆಸ್ ಅಧ್ಯಕ್ಷರಿಗಾಗಿ ಇಡೀ ದೇಶ ಮೂರು ತಿಂಗಳಿಗಳಿಂದ ನಿರೀಕ್ಷೆಯಲ್ಲಿತ್ತು. ಆ ನಂತರ ಕಾಂಗ್ರೆಸ್ ಅಧ್ಯಕ್ಷರಾಗಿ ಯಾರು ಅಧಿಕಾರ ವಹಿಸಿಕೊಂಡರು? ಎಂದು ಪ್ರಶ್ನಿಸಿದ ಕಟ್ಟರ್, ಬಳಿಕ ಅಂತಿಮವಾಗಿ ಸೋನಿಯಾ ಗಾಂಧಿ ಅವರನ್ನೇ ಕಾಂಗ್ರೆಸ್ಸಿಗರು ಆಯ್ಕೆಮಾಡಿಕೊಂಡರು. ಈ ಆಯ್ಕೆ ಹೇಗಿತ್ತು ಎಂದರೆ .. ಬೆಟ್ಟ ಅಗೆದು ಇಲಿ ಹಿಡಿದಂತಾಗಿದೆ. ಅದು ಕೂಡಾ ಸತ್ತ ಇಲಿಯನ್ನು ಹಿಡಿದಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ಎಂದು ಖಟ್ಟರ್ ಲೇವಡಿ ಮಾಡಿದರು. ಖಟ್ಟರ್ ಅವರ ಹೇಳಿಕೆಗೆ ಕಾಂಗ್ರೆಸ್ ಪಕ್ಷದ ಟ್ವೀಟರ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಆಡಳಿತ ಪಕ್ಷ ಹೊಂದಿರುವ ಮಹಿಳಾ ವಿರೋಧಿ ಗುಣಗಳು ಮುಖ್ಯಮಂತ್ರಿ ಖಟ್ಟರ್ ಹೇಳಿಕೆಗಳಲ್ಲಿ ಪ್ರತಿ ಬಿಂಬಿಸಿವೆ. ಈ ಹೇಳಿಕೆ ಜಂಬಕೊಚ್ಚಿಕೊಳ್ಳುವ ವಿಷಯವಲ್ಲ ಎಂದು ಆಕ್ಷೇಪಿಸಿರುವ ಕಾಂಗ್ರೆಸ್, ಕೂಡಲೇ ಖಟ್ಟರ್ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದೆ. ಖಟ್ಟರ್ ಇಂತಹ ವಿವಾದಾತ್ಮಕ ಹೇಳಿಕೆ ನೀಡಿರುವುದು ಇದೇ ಮೊದಲಲ್ಲ. ಎರಡು ತಿಂಗಳ ಹಿಂದೆ ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿ ರದ್ದುಪಡಿಸಿದ ನಂತರ ಕಾಶ್ಮೀರ ಮಹಿಳೆಯರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹಿಂದೆ ಬಿಹಾರದಿಂದ ಸೊಸೆಯರನ್ನು ತರುತ್ತಿದ್ದೆವು ಇನ್ನೂ ಕಾಶ್ಮೀರದ ಸುಂದರ ಸೊಸೆಯರನ್ನು ತರಬಹುದು ಎಂದಿದ್ದರು. 'ಬೇಟಿ ಬಚಾವೊ ... ಬೇಟಿ ಪಡಾವೊ' ವಿಜಯೋತ್ಸವದ ಸಂದರ್ಭದಲ್ಲಿ ಅವರು ಕೊಟ್ಟ ಹೇಳಿಕೆ ವಿವಾದಕ್ಕೀಡಾಗಿತ್ತು.