ಮಾಧ್ಯಮ ಜಾಹಿರಾತು ಕುರಿತ ಸೋನಿಯಾ ಗಾಂಧಿ ಸಲಹೆ ಕೂಡಲೇ ಹಿಂಪಡೆಯಬೇಕು; ಐಎನ್‌ಎಸ್ ಒತ್ತಾಯ

ನವದೆಹಲಿ, ಏ ೯, ಕೊರೊನಾಗೆ ಸಂಬಂಧಿಸಿದ ಮಾಹಿತಿ ಒಳಗೊಂಡ  ಜಾಹಿರಾತು   ಹೊರತುಪಡಿಸಿ   ಉಳಿದಂತೆ   ಸರ್ಕಾರ,   ಮಾಧ್ಯಮಗಳಿಗೆ ನೀಡುವ   ಎಲ್ಲ  ಜಾಹಿರಾತುಗಳನ್ನು ಎರಡು ವರ್ಷಗಳ ಕಾಲ   ರದ್ದುಪಡಿಸಬೇಕು   ಎಂಬ  ಸಲಹೆಯನ್ನು    ಕೂಡಲೇ  ಹಿಂಪಡೆಯಬೇಕು ಎಂದು  ದಿ ಇಂಡಿಯನ್  ನ್ಯೂಸ್ ಪೇಪರ್  ಸೊಸೈಟಿ( (ಐಎನ್‌ಎಸ್) ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ  ಅವರನ್ನು  ಒತ್ತಾಯಿಸಿದೆ. ಈ ಸಲಹೆ ಸರ್ಕಾರದ  ವೆಚ್ಚ  ಕಡಿತಗಳಿಗೆ ಸರಿಹೊಂದುವುದಿಲ್ಲ  ಎಂದು   ಸಂಘಟನೆ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ. ದೇಶದಲ್ಲಿ  ಕೊರೊನಾ  ಪ್ರಕರಣಗಳ  ಸಂಖ್ಯೆ   ಹೆಚ್ಚುತ್ತಿರುವ   ಹಿನ್ನಲೆಯಲ್ಲಿ  ಸರ್ಕಾರ  ನಡೆಸುತ್ತಿರುವ   ಪ್ರಯತ್ನಗಳಿಗೆ   ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವ   ಸಂಘಟನೆ,   ಕಾಂಗ್ರೆಸ್  ಅಧ್ಯಕ್ಷೆ  ಸೋನಿಯಾ  ಮಂಗಳವಾರ  ಕೊರೊನಾ ವಿರುದ್ದ  ಕ್ರಮಗಳಿಗೆ   ಹಣ ಹೊಂದಿಸಲು,     ವೆಚ್ಚಕಡಿತಗೊಳಿಸಲು  ಸರ್ಕಾರಕ್ಕೆ  ಐದು ಸಲಹೆಗಳನ್ನು ನೀಡಿದ್ದರು.
ಈ ಪೈಕಿ  ಟಿವಿ ವಾಹಿನಿಗಳು,  ಮುದ್ರಣ ಮಾಧ್ಯಮಗಳು  ಹಾಗೂ ಆನ್‌ಲೈನ್ ಮಾಧ್ಯಮಗಳಿಗೆ ಸರ್ಕಾರಿ  ಜಾಹೀರಾತುಗಳನ್ನು ಎರಡು ವರ್ಷಗಳ ಕಾಲ  ರದ್ದುಪಡಿಸಬೇಕು ಎಂದು ಸಲಹೆ ನೀಡಿದ್ದರು.  ಇದಕ್ಕೆ ಐಎನ್‌ಎಸ್ ಪ್ರತಿಕ್ರಿಯಿಸಿ,   ಮುದ್ರಣ ಮಾಧ್ಯಮಗಳಿಗೆ ಮಾತ್ರವೇ  ವೇತನ ಮಂಡಳಿಗಳಿವೆ.  ನೌಕರರಿಗೆ ಎಷ್ಟು ಸಂಬಳ ನೀಡಬೇಕೆಂದು ಸರ್ಕಾರ ನಿರ್ಧರಿಸುತ್ತದೆ. ಇಲ್ಲಿ ಮಾರುಕಟ್ಟೆಯಲ್ಲಿನ ಏರಿಳಿತಗಳು, ನೌಕರರ ವೇತನದ ಮೇಲಿನ ಪರಿಣಾಮ. ಅಲ್ಲದೆ, ದೇಶದ ಪ್ರತಿಯೊಂದು ಮೂಲೆಯಿಂದಲೂ ಸರಿಯಾದ  ಸುದ್ದಿಯನ್ನು ಸಂಗ್ರಹಿಸಿ, ಜನರಿಗೆ  ಮುಟ್ಟಿಸಲು ಮುದ್ರಣ ಮಾಧ್ಯಮ ಸೂಕ್ತ ವೇದಿಕೆಯಾಗಿದ್ದು,  ಸರ್ಕಾರಿ ಜಾಹಿರಾತು ನಿಲ್ಲಿಸಿದರೆ  ಅವುಗಳು ನಡೆಯುವುದಾರೂ ಹೇಗೆ ಎಂದು ಪ್ರಶ್ನಿಸಿದೆ.
ಆರ್ಥಿಕ ಹಿಂಜರಿತ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್  ಕಾರಣದಿಂದಾಗಿ    ಮುದ್ರಣ ಮಾಧ್ಯಮ ವಲಯದ    ಆದಾಯ  ಗಣನೀಯವಾಗಿ ಕುಸಿದಿದೆ. ಲಾಕ್‌ಡೌನ್ ನಿಂದಾಗಿ  ಮತ್ತಷ್ಟು ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿಸಿದೆದೆ. ಈ ಉದ್ಯಮಕ್ಕೆ ಸಂಬಂಧಿಸಿದ  ಪೂರ್ಣ  ಜವಾಬ್ದಾರಿ ಸರ್ಕಾರದ ಮೇಲಿದೆ.  ಇಂತಹ ಕಷ್ಟಕರ ಸಂದರ್ಭಗಳಲ್ಲಿಯೂ ಮಾಧ್ಯಮ  ಮಂದಿ ಮಾಹಿತಿ ಸಂಗ್ರಹಿಸುವ ಕೈಂಕರ್ಯ ನಡೆಸಿವೆ  ಎಂಬ  ಮೆಚ್ಚುಗೆಗೂ  ಪಾತ್ರವಾಗಿವೆ. ಕಾಂಗ್ರೆಸ್ ಅಧ್ಯಕ್ಷರು  ಸೂಚಿಸಿರುವ ಸಲಹೆ ಮಾಧ್ಯಮ ವಲಯದಲ್ಲಿ   ಕಳವಳ ಉಂಟುಮಾಡುವಂತಿದೆ ಹಾಗಾಗಿ ಕೂಡಲೇ   ತಮ್ಮ  ಸಲಹೆಯನ್ನು ಹಿಂತೆಗೆದುಕೊಳ್ಳುವಂತೆ ಐಎನ್‌ಎಸ್ ಕಾಂಗ್ರೆಸ್ ಅಧ್ಯಕ್ಷರನ್ನು ಒತ್ತಾಯಿಸಿದೆ.