ನವದೆಹಲಿ, ಆ 11 ಸೋನಿಯಾ ಗಾಂಧಿ ಅವರನ್ನು ಕಾಂಗ್ರೆಸ್ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಧಾರವನ್ನು ಅಣಕವಾಡಿರುವ ಬಿಜೆಪಿ, ಇದು ಭಟ್ಟಂಗಿತನ ಮತ್ತು ಗುಲಾಮಗಿರಿಯ ಕ್ರಿಯೆ ಎಂದು ಹೇಳಿದೆ. "ಪ್ರೀತಿಯಿಂದ ಕಾಂಗ್ರೆಸ್ಗೆ...." ಎಂದು ಬಿಜೆಪಿಯ ಐಟಿ ವಿಭಾಗದ ಮುಖ್ಯಸ್ಥರಾದ ಅಮಿತ್ ಮಾಳವೀಯಾ ಟ್ವೀಟ್ ಮಾಡಿದ್ದಾರೆ. ಆದಾಗ್ಯೂ, ಮತ್ತೊಂದು ವೀಡಿಯೊದಲ್ಲಿ, ನೀವು ನಿಮ್ಮ ಇಡೀ ಜೀವನದಲ್ಲಿ - ಉಳಿದ ಕಾಂಗ್ರೆಸ್ ನಾಯಕರು - ತಾಯಿ-ಮಗನಿಗೆ ಗುಲಾಮರಾಗಿರುತ್ತೀರಿ ಎಂದು ಟೀಕಿಸಲಾಗಿದೆ. ರಾಹುಲ್ ಗಾಂಧಿಯವರ ರಾಜೀನಾಮೆಯನ್ನು ಅಂಗೀಕರಿಸಲಾಗಿದೆ ಎಂದು ಕಾಂಗ್ರೆಸ್ ಶನಿವಾರ ರಾತ್ರಿ ಘೋಷಿಸಿದ ಕೆಲವೇ ನಿಮಿಷಗಳಲ್ಲಿ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ, ರಾಹುಲ್ ಅವರ 72 ವರ್ಷ ಪ್ರಾಯದ ತಾಯಿ ಸೋನಿಯಾ ಗಾಂಧಿ ಅವರಿಗೆ ಪಕ್ಷದ ಜವಾಬ್ದಾರಿಯನ್ನು ನೀಡಲು ನಿರ್ಧರಿಸಿತು. ಸೋನಿಯಾ ಗಾಂಧಿ ಅವರನ್ನು ಹಂಗಾಮಿ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡುವುದು ಅಷ್ಟೇನೂ ಆಶ್ಚರ್ಯಕರವಲ್ಲ, ಇದು ಕಾಂಗ್ರೆಸ್ ಪಕ್ಷದಲ್ಲಿನ ಒಟ್ಟು ಆಯ್ಕೆಗಳ ಕೊರತೆಯನ್ನು ಮಾತ್ರ ತೋರಿಸಿದೆ ಎಂದು ಮಾಳವಿಯಾ ಟೀಕಿಸಿದ್ದಾರೆ. 2014ರಲ್ಲಿ ಕಾಂಗ್ರೆಸ್ ಪಕ್ಷವು ಶೋಚನೀಯವಾಗಿ ಸೋತಿತ್ತು ಎಂಬುದನ್ನು ಮರೆಯಬಾರದು. ಸೋನಿಯಾ ಗಾಂಧಿ 19 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು ಮತ್ತು ಅವರ ನಾಯಕತ್ವದಲ್ಲಿ ಕಾಂಗ್ರೆಸ್ ಗಮನಾರ್ಹವಾಗಿ ತನ್ನ ಬೆಳವಣಿಗೆಯನ್ನು ಕಳೆದುಕೊಂಡಿದೆ ಎಂಬುದನ್ನು ಮರೆಯಬಾರದು ಎಂದು ಮಾಳವಿಯಾ ಸುದ್ದಿವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದಾರೆ. ಇದಕ್ಕೂ ಮೊದಲು, ಸೋನಿಯಾ ಗಾಂಧಿ ಅವರು ಮಾರ್ಚ್ 14, 1998 ಮತ್ತು ಡಿಸೆಂಬರ್ 16, 2017 ರ ನಡುವೆ 19 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಬಳಿಕ ಪುತ್ರ ರಾಹುಲ್ ಗಾಂಧಿಗೆ ಅಧಿಕಾರ ಹಸ್ತಾಂತರಿಸಿದ್ದರು. ಆದಾಗ್ಯೂ, ಕಾಂಗ್ರೆಸ್ ಈ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಸೋತ ನಂತರ ರಾಹುಲ್ ಗಾಂಧಿ ಅಧಿಕಾರದಿಂದ ಕೆಳಗಿಳಿಯಲು ನಿರ್ಧರಿಸಿದ್ದರು. ನಂತರ ಪಕ್ಷದಲ್ಲಿ ಉಂಟಾಗಿದ್ದ ಗೊಂದಲ ಸಿಡಬ್ಲ್ಯೂಸಿ ಸೋನಿಯಾ ಗಾಂಧಿ ಅವರನ್ನು ಪಕ್ಷದ ಹಂಗಾಮಿ ಮುಖ್ಯಸ್ಥರನ್ನಾಗಿ ನೇಮಿಸಿದ ಬಳಿಕ ಕೊನೆಗೂ ಕೊನೆಗೊಂಡಿದೆ.