ಲೋಕದರ್ಶನ ವರದಿ
ಜಮೀನು ಅಡವಿಟ್ಟು ಓದಲು ಹಣ ಕಳಿಸಿದ್ದ ತಂದೆಯ ಆಸೆ ಈಡೇರಿಸಿದ ಮಗ
ಯರಗಟ್ಟಿ, 27 : ಸಮೀಪದ ಕೊಡ್ಲಿವಾಡ ಗ್ರಾಮದ ಯುವಕ ಯುಪಿಎಸ್ಸಿ ಪರೀಕ್ಷೆಯಲ್ಲಿ 910 ರಾ್ಯಂಕ್ ಪಡೆದಿದ್ದು ಹೆಮ್ಮೆಯ ವಿಷಯ ಅವನ ಮುಂದಿನ ಭವಿಷ್ಯ ಉಜ್ವಲವಾಗಲಿ ಉನ್ನತ ಹುದ್ದೆಯನ್ನು ಅಲಂಕರಿಸಲಿ.
ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ ಮಾತನಾಡಿ ಯರಗಟ್ಟಿ ತಾಲೂಕಿನ ಕೊಡ್ಲಿವಾಡ ಗ್ರಾಮದ ಹಣಮಂತ ನಂದಿ ಅವರು ಯುಪಿಎಸ್ಸಿ ಉನ್ನತ ಪರೀಕ್ಷೆಯಲ್ಲಿ 910 ನೇ ರಾಂಕ್ ಪಡೆದು ಪಾಸಾಗಿರುವುದು ಕೊಡ್ಲಿವಾಡ ಗ್ರಾಮಕ್ಕೆ ಹಾಗೂ ನೂತನ ಯರಗಟ್ಟಿ ತಾಲೂಕಿಗೆ ಹೆಮ್ಮೆಯ ವಿಷಯ. ಹನುಮಂತ ನಂದಿಯವರಿಗೆ ವಯಕ್ತಿಕವಾಗಿ ಹಾಗೂ ತಾಲೂಕಾ ಆಡಳಿತ ಪರವಾಗಿ ಅಭಿನಂದನೆಗಳು. ಅವರ ಮುಂದಿನ ಭವಿಷ್ಯ ಉಜ್ವಲವಾಗಲಿ ಹಾಗೂ ಅವರು ಉನ್ನತ ಹುದ್ದೆ ಅಲಂಕರಿಸಲಿ ಎಂದು ಹಾರೈಸಿ ಯರಗಟ್ಟಿ ತಾಲೂಕಾ ಆಡಳಿತದಿಂದ ಹಾಗೂ ಊರಿನ ಹಿರಿಯರು, ಪತ್ರಿಕಾ ಬಳಗದವರು, ಗೆಳೆಯರು, ಬಂಧು ಬಾಂಧವರು ಸನ್ಮಾನಿಸಿದರು.
ನಂತರ ಮಾತನಾಡಿದ ಅಕ್ಕಿಸಾಗರ ಪಂಚಾಯತ್ ಪಿಡಿಓ ಜಯಗೌಡ ಪಾಟೀಲ ಬಡವಿದ್ಯಾರ್ಥಿಗಳು ಪ್ರತಿಭಾವಂತರು ಅನ್ನೋದನ್ನ ಹನುಮಂತ ನಂದಿ ತೋರಿಸಿಕೊಟ್ಟನು. ಪಾಲಕರು ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ನಮ್ಮ ಮಕ್ಕಳೇ ನಮ್ಮ ಆಸ್ತಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಂದಾಯ ನೀರೀಕ್ಷಕರು ವಾಯ್. ಎಫ್. ಮುರ್ತೆನ್ನವರ, ಗ್ರಾಮ ಆಡಳಿತಾಧಿಕಾರಿಗಳಾದ ಎಲ್. ಬಿ. ದಳವಾಯಿ, ಬಿಸಾಬಿ ಅಗಸಿಮನಿ, ಯಲ್ಲಪ್ಪ ಭಾಂಗಿ, ಗ್ರಾಮಸ್ಥರಾದ ದೇವರುಷಿ ಮಾಳಿಂಗರಾಯ ಪೂಜೇರಿ ಕಜಗಲ್, ಮುಗಳಿಹಾಳ ಪಿಡಿಓ ಅಮಿತ್ ನಾಯ್ಕ , ಗುತ್ತಿಗೆದಾರ ಬಾಳೆಶ ಕೌಜಲಗಿ, ಬಸು ಸತ್ತೂರಿ, ಹಣಮಂತ ರಂಗಾಪುರ, ಅಜ್ಜಪ್ಪ ಬಂಗೆಪ್ಪಗೋಳ, ಬಸವರಾಜ ಕೌಜಲಗಿ, ಬಸವರಾಜ ಅಂಗಡಿ, ನಾಗಪ್ಪ ಆಲದಕಟ್ಟಿ, ವಿರುಪಾಕ್ಷಿ ಸೊಪ್ಪಡ್ಲ, ಸುನೀಲ ತಳವಾರ, ಈರಣ್ಣ ಹೊಸಮನಿ, ಹಾಗೂ ಊರಿನ ಹಿರಿಯರು, ಗೆಳೆಯರು, ಮತ್ತಿತರರು ಉಪಸ್ಥಿತರಿದ್ದರು.