ಸೋಮೇಶ್ವರ ಸಹಕಾರಿ 3 ಲಕ್ಷ ಟನ್ ಕಬ್ಬು ನುರಿಸುವ ಗುರಿ :ಶ್ರೀನಿವಾಸ

ಲೋಕದರ್ಶನ ವರದಿ

ಬೈಲಹೊಂಗಲ,16 - ಪ್ರಸಕ್ತ ವರ್ಷ 3 ಲಕ್ಷ ಟನ್ ಕಬ್ಬು ನುರಿಸುವ ಗುರಿ ಹೊಂದಲಾಗಿದ್ದು, ರೈತರು ಹೆಚ್ಚು ಕಬ್ಬು ಕಳುಹಿಸುವ ಮೂಲಕ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾಖರ್ಾನೆಯ ಏಳ್ಗೆಗೆ ಸಹಕರಿಸಬೇಕೆಂದು ವ್ಯವಸ್ಥಾಪಕ ನಿದರ್ೇಶಕ ಕೆ.ಎಲ್.ಶ್ರೀನಿವಾಸ ಹೇಳಿದರು. 

   ಇಲ್ಲಿಯ ಶ್ರೀ ಸೋಮೇಶ್ವರ ಸಹಕಾರಿ ಸಕ್ಕರೆ ಕಾಖರ್ಾನೆಯ 2018-19ನೇ ಸಾಲಿನ ಕಬ್ಬು ಅರೆಯುವ ಹಂಗಾಮು ಪ್ರಾರಂಭೋತ್ಸವ ಪೂಜಾ ಕಾರ್ಯಕ್ರಮದ ನೇತೃತ್ವವಹಿಸಿ ಅವರು ಮಾತನಾಡಿ, ಕಳೆದ ಸಾಲಿನಲ್ಲಿ ಕಬ್ಬು ನುರಿಸುವ ಹಂಗಾಮನ್ನು ರೈತರ, ಕಾಮರ್ಿಕರ, ಆಡಳಿತ ಮಂಡಳಿ ಪರಿಶ್ರಮದಿಂದ ಯಶಸ್ವಿಯಾಗಿ ಪೂರೈಸಿದ್ದು ಶ್ಲಾಘನೀಯ ಎಂದರು. 

    ಕಿತ್ತೂರ ಶಾಸಕ ಮಹಾಂತೇಶ ದೊಡಗೌಡರ ಮಾತನಾಡಿ, ರೈತರ ಹಿತ ಕಾಪಾಡುವುದರ ಜತೆಗೆ ಕಾಖರ್ಾನೆಯ ಪ್ರಗತಿಗೆ ಪ್ರತಿಯೊಬ್ಬರು ಶ್ರಮಿಸಬೇಕೆಂದು ಕರೆ ನೀಡಿದರು. ರೈತರು ಗುಣಮಟ್ಟದ ಕಬ್ಬು ಕಳುಹಿಸುವಂತೆ ಮನವಿ ಮಾಡಿದರು.

     ಹಿರಿಯ ನಿದರ್ೇಶಕ ಮಲ್ಲಪ್ಪ ಮುರಗೋಡ ಮಾತನಾಡಿದರು.

ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ವೇ.ಮೂ.ಡಾ.ಮಹಾಂತೇಶ ಶಾಸ್ತ್ರೀಗಳು ಸಾನಿಧ್ಯವಹಿಸಿದ್ದರು. ಕಾಖರ್ಾನೆ ಅಧ್ಯಕ್ಷ ಗುರುಪುತ್ರಪ್ಪ ಹೊಸಮನಿ ಅಧ್ಯಕ್ಷತೆವಹಿಸಿದ್ದರು.ಇದೇ ವೇಳೆ ಕಾಖರ್ಾನೆಯ ಸಂಸ್ಥಾಪಕ ದಿ.ಆರ್.ಸಿ.ಬಾಳೇಕುಂದರಗಿ ಪುತ್ಥಳಿಗೆ ಪೂಜೆ ಸಲ್ಲಿಸಲಾಯಿತು. 

     ಉಪಾಧ್ಯಕ್ಷ ಪಾರೀಸಪ್ಪ ಭಾವಿ, ಮಾಜಿ ಶಾಸಕ ಅರವಿಂದ ಪಾಟೀಲ, ಶ್ರೀ.ಸೋ.ಸ.ಸ.ಕಾ.ಮಾಜಿ ನಿದರ್ೇಶಕ, ಸಹಕಾರಿ ಧುರೀಣ ಪ್ರಕಾಶ ಬಾಳೇಕುಂದರಗಿ (ಮೂಗಬಸವ), ನಿದರ್ೇಶಕರಾದ ಗಂಗಪ್ಪ ಭರಮಣ್ಣವರ, ಮಲ್ಲಿಕಾಜರ್ುನ ಗೂಳಪ್ಪನವರ, ರಾಜು ಕುಡಸೋಮಣ್ಣವರ, ಅಶೋಕ ಬಾಳೇಕುಂದರಗಿ, ಕಸ್ತೂರಿ ಸೋಮನಟ್ಟಿ, ಮಡಿವಾಳಪ್ಪ ಅಂಗಡಿ, ಬಸವರಾಜ ಮೊಕಾಶಿ, ಶಿವಪುತ್ರಪ್ಪ ಅವಕ್ಕನವರ, ಪ್ರದೀಪ ವಣ್ಣೂರ, ಅದೃಶ್ಯಪ್ಪ ಕೋಟಬಾಗಿ ಹಾಗೂ ಕಾಖರ್ಾನೆ ಸಿಬ್ಬಂದಿ, ಕಾಮರ್ಿಕರು, ರೈತರು ಉಪಸ್ಥಿತರಿದ್ದರು. ಶ್ರೀಕರ ಕುಲಕಣರ್ಿ ಸ್ವಾಗತಿಸಿದರು. ಅಶೋಕ ಬೊಮ್ಮಣ್ಣವರ ನಿರೂಪಿಸಿದರು.