ಯಾರದ್ದೋ ತಪ್ಪಿಗೆ ಇನ್ಯಾರಿಗೋ ಶಿಕ್ಷೆ!

ಸದಾನಂದ ಮಜತಿ

ಬೆಳಗಾವಿ: ಕೇಂದ್ರ ಸಕರ್ಾರ ನೂತನ ಮೋಟಾರು ವಾಹನ ಕಾಯ್ದೆ ಜಾರಿಗೊಳಿಸಿದ ಬಳಿಕ ವಾಹನ ಸವಾರರ ಜೇಬಿಗೆ ಕತ್ತರಿ ಬೀಳಲಾರಂಭಿಸಿದೆ. ಅದರಲ್ಲೂ ಬೆಳಗಾವಿ ನಗರದಲ್ಲಿ ನೋ ಪಾಕರ್ಿಂಗ್ ಸ್ಥಳದಲ್ಲಿ ನಿಲ್ಲಿಸಿದ ವಾಹನ ಸವಾರರು ದಂಡದ ಮೊತ್ತ ಕಂಡು ಬೆಚ್ಚಿ ಬೀಳುತ್ತಿದ್ದಾರೆ

ನಗರದ ಪ್ರಮುಖ ರಸ್ತೆಗಳಲ್ಲಿ ಒಂದೊಂದು ದಿನ ಒಂದೊಂದು ಬದಿಗೆ ವಾಹನ ಪಾಕರ್ಿಂಗ್ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ವಿಶೇಷವಾಗಿ ಮಾರುಕಟ್ಟೆ ಪ್ರದೇಶದ ರಸ್ತೆಗಳಾದ ಖಡೇಬಜಾರ್, ಗಣಪತಿ ಗಲ್ಲಿ, ಕಿಲರ್ೋಸ್ಮರ್ ರಸ್ತೆಗಳಲ್ಲಿ ವಾಹನ ಪಾಕರ್ಿಂಗ್ಗೆ ಜಾಗದ ಸಮಸ್ಯೆಯಾಗುತ್ತಿದೆ. ಅಜರ್ೆಂಟ್ ಕೆಲಸ ಐದೇ ನಿಮಿಷ ಎಂದು ನಿರ್ಲಕ್ಷ್ಯ ಮಾಡಿ ರಸ್ತೆಯ ಬದಿಯಲ್ಲಿ ದ್ವಿಚಕ್ರವಾಹನ ನಿಲ್ಲಿಸಿ ಹೋದರೆ ಮರಳಿ ಬರುವಷ್ಟರಲ್ಲಿ ಬೈಕ್ ಪೊಲೀಸರ ವಾಹನ ಏರಿರುತ್ತದೆ. ಬೈಕ್ ಪಡೆಯಲು ಠಾಣೆಗೆ ಹೋದರೆ ದಂಡ ನೋಡಿ ಶಾಕ್ ಆಗುತ್ತಿದ್ದಾರೆ. ನೋ ಪಾಕರ್ಿಂಗ್ ಜಾಗದಲ್ಲಿ ವಾಹನ ನಿಲ್ಲಿಸಿದರೆ 1600 ರೂಪಾಯಿ ದಂಡ ವಿಧಿಸಲಾಗುತ್ತಿದೆ.

ಎಂದೋ ಒಂದು ದಿನ ಆಕಸ್ಮಿಕವಾಗಿ ಬರುವ ಗ್ರಾಮೀಣ ಪ್ರದೇಶದ ಜನರು, ಕಾಲೇಜು ವಿದ್ಯಾಥರ್ಿಗಳು ಅರಿಯದೇ ವಾಹನ ನಿಲ್ಲಿಸಿ ದಂಡಕ್ಕೆ ಗುರಿಯಾಗಿ ಪೇಚಾಡುತ್ತಿದ್ದಾರೆ. ಅರಿಯದೇ ಮಾಡಿದ ಸಣ್ಣ ತಪ್ಪಿಗೆ ಇಷ್ಟೊಂದು ದೊಡ್ಡ ಶಿಕ್ಷೆ ಸರಿಯೇ ? ದಂಡ ವಿಧಿಸುವುದಕ್ಕೂ ಮುನ್ನ ರಸ್ತೆ ಬದಿಯ ಪಾಕರ್ಿಂಗ್ ಸ್ಥಳದಲ್ಲಿರುವ ಅಡೆತಡೆ ತೆರವುಗೊಳಿಸಬೇಕು. ಅದನ್ನು ಬಿಟ್ಟು ವಾಹನ ಸವಾರರನ್ನೇ ಟಾಗರ್ೆಟ್ ಮಾಡುವುದು ಯಾವ ನ್ಯಾಯ ಎಂಬುದು ವಾಹನ ಚಾಲಕರ ಅಳಲು.

ಬೇಸ್ಮೆಂಟ್ ತೆರವುಗೊಳಿಸುವುದಕ್ಕೇಕೆ ಹಿಂದೇಟು ?

ಮಾರುಕಟ್ಟೆಯಲ್ಲಿ ಯಾವುದೇ ವಾಣಿಜ್ಯ ಕಟ್ಟಡ ನಿಮರ್ಿಸಿದರೆ ನೆಲಮಹಡಿಯನ್ನು ಪಾಕರ್ಿಂಗ್ಗೆ ಬಿಡಬೇಕೆಂಬ ನಿಯಮವಿದೆ. ಆದರೆ, ನಗರದ ಮುಖ್ಯ ಮಾರುಕಟ್ಟೆ ಪ್ರದೇಶದಲ್ಲಿ ಬೇಸ್ಮೆಂಟ್ ಜಾಗವನ್ನು ಅಂಗಡಿಗಳೇ ಆವರಿಸಿಕೊಂಡಿದ್ದು, ಹುಡುಕಾಡಿದರೂ ಬೇಸ್ಮೆಂಟ್ನಲ್ಲಿ ಪಾಕರ್ಿಂಗ್ ಜಾಗ ಇರುವ ಕಟ್ಟಡಗಳು ಸಿಗಲ್ಲ. ಬೇಸ್ಮೆಂಟ್ ಅಂಗಡಿ ತೆರವುಗೊಳಿಸಬೇಕೆಂದು ಮಹಾನಗರಪಾಲಿಕೆ ಹಲವಾರು ಬಾರಿ ನೋಟಿಸ್ ನೀಡಿದ್ದರೂ ಕಟ್ಟಡ ಮಾಲೀಕರು ಕ್ಯಾರೇ ಎನ್ನುತ್ತಿಲ್ಲ. ತೆರವು ಕಾಯರ್ಾಚರಣೆ ನಡೆಸುವುದಾಗಿ ದಶಕಗಳಿಂದ ಎಚ್ಚರಿಕೆ ನೀಡುತ್ತಿರುವ ಪಾಲಿಕೆ ಅಧಿಕಾರಿಗಳು ಅದ್ಯಾವುದೋ ಒತ್ತಡಕ್ಕೆ ಮಣಿದು ಕಾಯರ್ಾಚರಣೆಗೆ ಧೈರ್ಯ ಮಾಡುತ್ತಿಲ್ಲ. ಕಾನೂನಿಗೆ ಸೆಡ್ಡು ಹೊಡೆದು ತಿಂಗಳಿಗೆ ಲಕ್ಷಾಂತರ ರೂಪಾಯಿ ವ್ಯವಹಾರ ನಡೆಸುವವರಿಗೆ ಬಿಸಿ ಮುಟ್ಟಿಸುವುದನ್ನು ಬಿಟ್ಟು ಬಡಪಾಯಿ ದ್ವಿಚಕ್ರವಾಹನ ಸವಾರರ ಮೇಲೆ ಸವಾರಿ ಮಾಡುವುದು ಎಷ್ಟು ಸರಿ ಎಂಬ ವಾದ ಕೇಳಿಬರುತ್ತಿದೆ.

ಬೀದಿಬದಿ ವ್ಯಾಪಾರಸ್ಥರಿಗೇಕೆ ವಿನಾಯಿತಿ?

ಮೊದಲೇ ಪಾಕರ್ಿಂಗ್ ಸ್ಥಳದ ಸಮಸ್ಯೆಯಿಂದ ನಲುಗಿರುವ ಖಡೇಬಜಾರ್, ಗಣಪತಿ ಗಲ್ಲಿ, ಶನಿವಾರ ಕೂಟ, ರವಿವಾರ ಪೇಟೆ ಮತ್ತಿತರ ಕಡೆಗಳಲ್ಲಿ ಬೀದಿಬದಿ ವ್ಯಾಪಾರಸ್ಥರು ಹಾಗೂ ಕಾಯಿಪಲ್ಲೆ ಮಾರಾಟಗಾರರ ಹಾವಳಿ ಹೆಚ್ಚಾಗಿದೆ. 

ಜಾಗ ಇಲ್ಲದ್ದಕ್ಕೆ ಅಪರೂಪಕ್ಕೊಂದು ಬಾರಿ ಅರಿವಿಲ್ಲದೆ ನಿಲ್ಲಿಸಿದ ಬೈಕ್ಗಳನ್ನು ಎತ್ತಿಕೊಂಡು ಹೋಗಿ ಭಾರಿ ದಂಡ ವಿಧಿಸುವ ಪೊಲೀಸರಿಗೆ ಪಾಕರ್ಿಂಗ್ ಸ್ಥಳದಲ್ಲಿ ವ್ಯಾಪಾರ ನಡೆಸುವುದು, ಕಾಯಿಪಲ್ಲೆ ಮಾರಾಟ ಮಾಡುವವರು ಕಾಣಿಸುವುದಿಲ್ಲವೇ ? ಅವರು ರಸ್ತೆ ಅತಿಕ್ರಮಿಸಿಕೊಂಡ ಪರಿಣಾಮ ಸ್ಥಳ ಇಲ್ಲದ್ದಕ್ಕೆ ಐದತ್ತು ನಿಮಿಷ ಬೈಕ್ ನಿಲ್ಲಿಸಿದರೆ ಭಾರಿ ದಂಡ ಕಟ್ಟಬೇಕು. ರಸ್ತೆ ಅತಿಕ್ರಮಿಸಿಕೊಂಡು ಪ್ರತಿನಿತ್ಯ ವ್ಯಾಪಾರ ವಹಿವಾಟು ನಡೆಸುವವರಿಗೆ ಮಾತ್ರ ಯಾವುದೇ ಕಾನೂನು ಅಡ್ಡಿಯಾಗಲ್ಲ. ರಸ್ತೆಗಳು ಇರುವುದು ವಾಹನ ಸಂಚಾರಕ್ಕೋ ಅಥವಾ ವ್ಯಾಪಾರ ಮಾಡಲಿಕ್ಕೋ ಎಂಬುದು ತಿಳಿಯದಾಗಿದೆ ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ.

ಸಂಚಾರ ನಿಯಮ ಪಾಲನೆಯಾಗಬೇಕು. ಅದರಲ್ಲೂ ಎರಡು ಮಾತಿಲ್ಲ. ನಿಯಮಗಳು ಎಂದ ಮೇಲೆ ಎಲ್ಲರಿಗೂ ಅನ್ವಯವಾಗಬೇಕು. ಆದರೆ, ಪೊಲೀಸರು ಈಗ ವತರ್ಿಸುತ್ತಿರುವ ರೀತಿ ನೋಡಿದರೆ ಇಬ್ಬಗೆ ನೀತಿ ಅನುಸರಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.