ಇಬ್ಬರು ಅಂಧರ ಬಾಳಿಗೆ ಬೆಳಕು ನೀಡಿದ ಸೋಮಶೇಖರಯ್ಯ


ಶೇಡಬಾಳ  : ಶೇಡಬಾಳ ಪಟ್ಟಣದ  ಸೋಮಶೇಕರಯ್ಯ ಪತ್ರಯ್ಯ ಹುದಲಿಮಠ ವಯಸ್ಸು 44 ಅನಾರೋಗ್ಯದಿಂದ  ಮಂಗಳವಾರ ದಿ. 7 ರಂದು  ನಿಧನರಾದರು.  ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟ ಮುಖಾಂತರ ಬೆಳಗಾವಿಯ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಆಸ್ಪತ್ರೆಗೆ ಮೃತರು ತಮ್ಮ ನೇತ್ರದಾನ ಮಾಡಿದ್ದಾರೆ. 

 ಮೃತರ ಕಣ್ಣುಗಳು ಮಣ್ಣಲ್ಲಿ ಮಣ್ಣಾಗಿ ಹೋಗುವುದಕ್ಕಿಂತ ಇಬ್ಬರು ಅಂಧರ ಬಾಳಿಗೆ ಬೇಳಕು ನೀಡಲು ಸಹಕರಿಸಿ ನೋವಿನಲ್ಲು ಕುಟುಂಬದ ಸದಸ್ಯರು ಮಾನವಿಯತೆ ಮೆರೆದಿದ್ದಾರೆ. 

              ಬೈಲಹೊಂಗಲದ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟನ  ಡಾ. ಮಹಾಂತೇಶ ರಾಮಣ್ಣವರ ಹಾಗೂ ಅಥಣಿಯ ವೈದ್ಯ ಡಾ. ಶಿವಕುಮಾರ ಕಲ್ಯಾಣಮಠ ಅವರ ನೇತೃತ್ವದಲ್ಲಿ ನೇತ್ರದಾನ ಪ್ರಕ್ರೀಯೆ ನೆರವೆರಿತು. ನೇತ್ರದಾನ ಮಾಡಿದ ಮೃತರು ತಂದೆ, ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

     ದುಖ:ದ ಸಂದರ್ಭದಲ್ಲಯೂ ನೇತ್ರದಾನ ಮಾಡಿ ಮಾನವಿಯತೆ ಮೆರೆದ ಹುದಲಿಮಠ ಕುಟುಂಬದ ಎಲ್ಲ ಸದಸ್ಯರಿಗೆ ಡಾ. ರಾಮಣ್ಣವರ ಚಾರಿಟೇಬಲ್ ಟ್ರಸ್ಟನ ಕಾರ್ಯದಶರ್ಿ ಡಾ. ಸುಶೀಲಾದೇವಿ ರಾಮಣ್ಣವರ ಕೃತಜ್ಞೆತೆ

 ಸಲ್ಲಿಸಿದ್ದಾರೆ.