ಶುದ್ಧ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ:ಪುರಸಭೆ ಸದಸ್ಯ ವಿರೇಶ ಹಡಲಗೇರಿ
ಮುದ್ದೇಬಿಹಾಳ 21: ಪಟ್ಟಣದ ಪುರಸಭೆ ಮುಖ್ಯಾಧಿಕಾರಿಯಿಂದ ಪರಿಶಿಷ್ಟ ಜಾತಿ ಕಾಲೋನಿಯಲ್ಲಿ ಕುಡಿಯುವ ನೀರಿನ ಪೈಪ್ಲಾಯಿನ್ ಜೋಡಣೆ ಹೆಸರಲ್ಲಿ 3 ಲಕ್ಷ ರೂ ಗಳ ಭೋಗಸ್ ಬಿಲ್ ತೆಗೆದು ಪರಿಶಿಷ್ಟ ಜನರಿಗೆ ಹಾಗೂ ಸರಕಾರಕ್ಕೂ ಮೋಸ ಎಸಗಿದ್ದಾರೆ ಎಂದು ಈ ಬಡಾವಣೆಯ ನಿವಾಸಿಗಳು ದೂರು ನೀಡಿದ ಹಿನ್ನೇಲೆಯಲ್ಲಿ ತಕ್ಷಣ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೇ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಪುರಸಭೆ ಸದಸ್ಯ ವಿರೇಶ ಹಡಲಗೇರಿ ಜಿಲ್ಲಾಧಿಕಾರಿಗಳಿಗೆ ದೂರಿದ್ದಾರೆ.
ಪಟ್ಟಣದ ಪಿಲೇಕಮ್ಮ ದೇವಸ್ಥಾನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಟ್ಟಣದ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ರವರು ದಿ 12-2023 ವಿಜಯಪುರ ಜಿಲ್ಲಾಧಿಕಾರಿಗಳ ಆದೇಶದಂತೆ 2021-22 ನೇ ಸಾಲಿನ 15 ಹಣಕಾಸು ಯೋಜನೆಯ ರಾಜ್ಯದ ನಗರ ಸ್ಥಳೀಯ ಸಂಸ್ಥೆಗಳಿಗೆ ನಾನ್ ಮಿಲಿಯನ್ ಪಲ್ಸ ಸಿಟಿಗಳಿಗೆ ಮರು ಹಂಚಿಕೆಯಾದ ಅನುದಾನ ಒಟ್ಟು ರೂ. 61.00 ಲಕ್ಷ ಮೊತ್ತದ 09 ಕಾಮಗಾರಿಗಳಗೆ ಅನುಮೋದನೆ ದೊರಕಿದ ಕ್ರಿಯಾಯೋಜನೆಯ ಪಟ್ಟಿಯ 7 ನೇ ಕ್ರಮಾಂಕದಲ್ಲಿನ ಪಟ್ಟಣದ ಇಂದಿರಾನಗರದಲ್ಲಿ ಬೋರವೆಲ್ ಕೊರೆದು ಮೋಟಾರ ಮತ್ತು ಪೈಪ್ ಲೈನ್ ಅಳವಡಿಸುವ 3.00 ಲಕ್ಷಗಳ ಮೊತ್ತದ ಕ್ರಿಯಾಯೋಜನೆ ಪತ್ರದಲ್ಲಿ ದಾಖಲಾದ ಕುಡಿಯುವ ನೀರಿನ ಯೋಜನೆಯ ಹಣವನ್ನು ಪಟ್ಟಣದ ಇಂದಿರಾ ನಗರದಲ್ಲಿ ಬೋರವೆಲ್ ಕೊರೆದು ಮೋಟಾರ ಮತ್ತು ಪೈಪ್ ಲೈನ್ ಅಳವಡಿಸುವ 3.00 ಲಕ್ಷಗಳ ಮೊತ್ತದ ಯಾವುದೇ ಕಾಮಗಾರಿಯನ್ನು ನಿರ್ವಹಿಸದೇ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ ಎಂದು ಹಣ ಮಂಜೂರ ಮಾಡುವ ಪತ್ರದಲ್ಲಿ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ರವರು ಕಾಮಾಗಾರಿ ದಿ,3-ಡಿಸೆಂಬರ-2024 ರಂದು ಸರಕಾರಕ್ಕೆ ಸಂದಾಯವಾಗುವ ಎಲ್ಲ ಮೊತ್ತಗಳನ್ನು ಕಡಿತಗೊಳಿಸಿ 203309.00 ರೂ ಹಣವನ್ನು ಪಾತಿಸಿದ ಪುರಸಭೆಯಿಂದ ಸಂದಾಯವಾದ ಮೊತ್ತದ ದಾಖಲೆಗಳಲ್ಲಿ ಕಂಡು ಬಂದಿದೆ.
ಇಲ್ಲಿನ ಪರಿಶಿಷ್ಟ ಜನರು ವಾಸಿಸುವ ಇಂದಿರಾನಗರದಲ್ಲಿ ಬಡ ಕುಟುಂಬಳಿಗೆ ಕುಡಿಯುವ ನೀರಿನ ಸಮಸ್ಯೆ ತುರ್ತಾಗಿ ಬಗೆಹರಿಸಲು ಬೋರವೆಲ್ ಕೊರೆದು ಮೋಟಾರ ಮತ್ತು ಪೈಪ್ ಲೈನ್ ಅಳವಡಿಸುವ ಹೆಸರಲ್ಲಿ 3.00 ಲಕ್ಷಗಳ ಮೊತ್ತದ ಹಣವನ್ನು ತೆಗೆದು ಸಧ್ಯ ಆ ಬಡಾಣೆಯಲ್ಲಿ ಯಾವುದೇ ಅಭಿವೃದ್ಧಿ ಪೂರಕ ಕುಡಿಯುವ ನೀರಿನ ಪೈಪ್ಲಾಯಿನ್ ಕಾಮಾಗಾರಿಯನ್ನು ಕೈಗೊಳ್ಳದೇ ಖೋಟ್ಟಿ ಬಿಲ್ ತೆಗೆದು ಅಲ್ಲಿನ ಪರಿಶಿಷ್ಟ ಜಾತಿಯ ಜನರಿಗೆ ಹಾಗೂ ಸರಕಾರದ ಕಣ್ಣಿಗೆ ಮಣ್ಣು ಎರಚುವ ಮೂಲಕ ಮೋಸವೆಸಗಿದ್ದಾರೆ.
ಈ ಕೂಡಲೇ ಸಂಬಂಧಪಟ್ಟ ಮೇಲಾಧಿಕಾರಿಗಳು ಹಾಗೂ ಅಧಿಕಾರ ದುರುಪಯೋಗ ಪಡಿಸಿಕೊಂಡಿರುವ ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಇವರ ಮೇಲೆ ಕಾನೂನು ರೀತ್ಯ ಸೂಕ್ತ ಕ್ರಮ ಕೈಗೊಳ್ಳುವದರ ಜೊತೆಗೆ ನಗರದ ಪರಿಶಿಷ್ಟ ಜಾತಿಯ ಜನರಿಗೆ ಹಾಗೂ ಸರಕಾರಕ್ಕೆ ಮೋಸವೆಸಗಿದ ಅಫರಾಧದ ಪ್ರಕರಣ ಮತ್ತು ಜಾತಿ ನಿಂದನೆ ಪ್ರಕರಣ ದಾಖಲಿಸುವ ಮೂಲಕ ಆ ಬಡ ಪರಿಶಿಷ್ಟ ಜಾತಿಯ ಜನರಿಗೆ ಶುದ್ಧ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿ ಸಾಮಾಜಿಕ ನ್ಯಾಯದಡಿಯಲ್ಲಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ ಒಂದು ವೇಳೆ ಯಾವೂದೇ ಕ್ರಮ ಕೈಗೊಳ್ಳುವಲ್ಲಿ ವಿಫಲವಾದರೇ ಬಿದಿಗಿಳಿದು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.