ಪಿಂಚಣಿದಾರರ ಸಮಸ್ಯೆ ಪರಿಹರಿಸಿ:ಡಾ.ರಾಜೇಂದ್ರ

ಬಾಗಲಕೋಟೆ: ಸಮಸ್ಯೆಗಳನ್ನು ಹೊತ್ತು ತಂದ ಪಿಂಚಣಿದಾರರನ್ನು ಸತಾಯಿಸದೇ ಅವರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವಾಗಬೇಕೆಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ಬ್ಯಾಂಕ್ ಮತ್ತು ಖಜಾನೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜಿಲ್ಲಾಡಳಿತ, ಪಿಂಚಣಿ ಸಣ್ಣ ಉಳಿತಾಯ ಮತ್ತು ಆಸ್ತಿ-ಋಣ ನಿರ್ವಹಣೆ ಇಲಾಖೆಗಳ ಸಹಯೋಗದಲ್ಲಿ ಜರುಗಿದ ಪಿಂಚಣಿ ಅದಾಲತ್ ಕಾರ್ಯಕ್ರಮದ 

ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪಿಂಚಣಿದಾರರು ಹಿರಿಯ ಜೀವಿಗಳಾಗಿದ್ದು, ಅವರನ್ನು ಸತಾಯಿಸದೇ ಕೆಲಸಗಳನ್ನು ಮಾಡಿಕೊಡಬೇಕು. ಪಿಂಚಣಿ ಪಡೆಯಲು ಬಂದ ವೃದ್ದರಿಗೆ ಬ್ಯಾಂಕಿನಲ್ಲಿ ಗಂಟೆಗಟ್ಟಲೆ ಕಾಯಿಸದೇ ಪ್ರತ್ಯೇಕ ಕೌಂಟರ್ ತೆರೆದು ತೊಂದರೆಯಾಗದಂತೆ ಕ್ರಮವಹಿಸಲು ಬ್ಯಾಂಕರ್ಸ್ಗಳಿಗೆ ಸೂಚಿಸಿದರು.

ಪಿಂಚಣಿದಾರರನ್ನು ನಮ್ಮವರು ಎಂಬ ಭಾವನೆಯಿಂದ ತಿಳಿದು ಅವರ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವಾಗಬೇಕು. ಪಿಂಚಣಿದಾರರ ವಿವಿಧ ಅಹವಾಲುಗಳನ್ನು 15 ದಿನಗದೊಳಗಾಗಿ ಬಗೆಹರಿಸಬೇಕು. ಈ ಕುರಿತು ಮುಂದಿನ ತಿಂಗಳು ಮತ್ತೊಮ್ಮೆ ಸಭೆ ನಡೆಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದರು. ಗುಡೂರ ಸಿಂಡಿಕೇಟ್ ಬ್ಯಾಂಕ್ನಲ್ಲಿ ಎತ್ತರದ ಕಟ್ಟಡದಲ್ಲಿ ಶಾಖೆ ಇದ್ದು, ಹತ್ತಲು ತುಂಬಾ ತೊಂದರೆಯಾಗುತ್ತಿದೆ. ಪಿಂಚಣಿ ನೀಡಲು ತಾಸುಗಟ್ಟಲೇ ನಿಲ್ಲಿಸುತ್ತಿರುವ ಬಗ್ಗೆ ಸಭೆಯಲ್ಲಿ ತಿಳಿಸಿದಾಗ ಪಿಂಚಣಿದಾರರಿಗೆ ಬ್ಯಾಂಕ್ಗೆ ಬಂದು ಹೋಗಲು ಅನುಕೂಲಕರ ಸೌಲಭ್ಯಗಳನ್ನು ಒದಗಿಸುವಂತೆ ಅಗ್ರಣಿಯ ಬ್ಯಾಂಕ್ ಮ್ಯಾನೇಜರ ರಾಮಲಿಂಗಾರೆಡ್ಡಿ ಅವರಿಗೆ ಸೂಚಿಸಿದರು.

ಪಿಂಚಣಿ ಪಡೆಯಲು ಬ್ಯಾಂಕ್ಗಳಿಗೆ ಹೋದಾಗ ಬಹುತೇಕ ಸಿಂಡಿಕೇಟ್ ಬ್ಯಾಂಕ್ ಶಾಖೆಗಳಲ್ಲಿ ಸರ್ವರ್ ಇಲ್ಲ, ಕರೇಂಟ್ ಇಲ್ಲ ಎಂಬ ನೆಪ ಒಡ್ಡುತ್ತಿರುವ ಬಗ್ಗೆ ಪಿಂಚಣಿದಾರರು ಸಭೆಗೆ ತಿಳಿಸಿದಾಗ ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಹಿರಿಯರು, ವಿಧವೆಯರು ವೃದ್ದರು ಬ್ಯಾಂಕಿಗೆ ಬಂದಾಗ ಮಾನವೀಯತೆಯಿಂದ ಕೆಲಸ ಮಾಡಿಕೊಡಬೇಕು. ನೀವು ಸಹ ವಯೋ ನಿವೃತ್ತಿಹೊಂದಿದಾಗ ನಿಮ್ಮ ಪರಿಸ್ಥಿತಿಯನ್ನು ಇದೇ ರೀತಿಯಾಗಬಾರದೆಂದರೆ ಪಿಂಚಣಿದಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಲು ತಿಳಿಸಿದರು.

ಪಿಂಚಣಿ ಅದಾಲತ್ನಲ್ಲಿ ಅನುದಾನಿತ ಕಾಲೇಜಿನ ಉಪನ್ಯಾಸಕರು 2018 ರಿಂದ ಪಿಂಚಣಿ ಪಿಂಚಣಿ ಜಮಾ ಆಗುತ್ತಿಲ್ಲವೆಂದು ತಿಳಿಸಿದರೆ, ಕಳೆದ 10 ತಿಂಗಳಿನಿಂದ ಪಿಂಚಣಿ ಬರುತ್ತಿಲ್ಲವೆಂದು ತಿಳಿಸಿದರು. 2007 ರಿಂದ ಪರಿಷ್ಕೃತ ವೇತನದಿಂದಾಗ ಪಿಂಚಣಿ ಬಂದಿರುವುದಿಲ್ಲ. ಇನ್ನು ಕೆಲವರು ಬ್ಯಾಂಕಿನವರು ಕಳೆದ ಪಿಂಚಣಿ ಜಮಾ ಆದ ಬಗ್ಗೆ ರಿಪೋರ್ಟ ನೀಡುತ್ತಿಲ್ಲವೆಂದು ತಿಳಿಸಿದರು. ಜಮಾದಾರ ಎಂಬುವವರು ತಮ್ಮ ಮಡದಿಯ ಪಿಂಚಣಿ ಕಳೆದ 7 ತಿಂಗಳಿನಿಂದ 33 ಸಾವಿರ ರೂ. ಇದ್ದ ಪಿಂಚಣಿ ಈಗ ಕೇವಲ 17 ಸಾವಿರ ರೂ.ಗಳು ಮಾತ್ರ ಜಮಾ ಆಗುತ್ತಿದೆ. ಈ ರೀತಿ ತಾರತಮ್ಯವಾಗುತ್ತಿದ್ದು, ಇದಕ್ಕೆ ಯಾರು ಸ್ಪಂದಿಸುತ್ತಿಲ್ಲವೆಂದು ತಿಳಿಸಿದರು.

ಪ್ರತಿಯೊಬ್ಬ ಪಿಂಚಣಿದಾರರ ಅಹವಾಲುಗಳನ್ನು ಆಲಿಸಿದ ಜಿಲ್ಲಾಧಿಕಾರಿಗಳು ಪಿಂಚಣಿದಾರರ ಸಮಸ್ಯೆಗಳ ಬಗ್ಗೆ ಅಜರ್ಿಗಳ ಮೂಲಕ ವಿವರಗಳನ್ನು ಪಡೆದು 15 ದಿನಗಳಲ್ಲಿ ಬಗೆಹರಿಸುವಂತೆ ಪಿಂಚಣಿ ಮತ್ತು ಸಣ್ಣ ಉಳಿತಾಯ ಇಲಾಖೆಯ ಸಹಾಯಕ ನಿದರ್ೇಶಕ ಎಂ.ಸಿ.ಕೋಟಿ ಅವರಿಗೆ ಸೂಚಿಸಿದರು. ಯಾವುದೇ ರೀತಿಯ ಸಬೂಬು ಹೇಳದೆ ಜವಾಬ್ದಾರಿಯಿಂದ ಕೆಲಸ ನಿರ್ವಹಿಸಿ ಪಿಂಚಣಿದಾರರು ಅಲೇದಾಡುವದನ್ನು ತಪ್ಪಿಸಬೇಕು. ಪಿಂಚಣಿದಾರರ ವಿಳಾಸ ಹಾಗೂ ಮೊಬೈಲ್ ನಂಬರಗಳನ್ನು ರಜಿಸ್ಟರಗಳಲ್ಲಿ ನಮೂದಿಸಿಕೊಳ್ಳಲು ಸೂಚಿಸಿದರು. ಬ್ಯಾಂಕ್ ಅಧಿಕಾರಿಗಳು ಸಹ ಪಿಂಚಣಿ ಸಮಸ್ಯೆಗಳಿದ್ದಲ್ಲಿ ತಾವೇ ಅಧಿಕಾರಿಗಳನ್ನು ಸಂಪಕರ್ಿಸಿ ಬಗೆಹರಿಸುವ ಕೆಲಸ ಮಾಡಲು ತಿಳಿಸಿದರು.

ಸದರಿ ಅದಾಲತ್ನಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ, ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಗೋಪಾಲರೆಡ್ಡಿ, ಬಾದಾಮಿ ತಾಲೂಕಿನ ನಿವೃತ್ತ ನೌಕರರ ಸಂಘದ ಕಾರ್ಯದಶರ್ಿ ಎಚ್.ಎಚ್.ನದಾಪ್ ಸೇರಿದಂತೆ ಖಜಾನೆ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 30 ಕ್ಕು ಹೆಚ್ಚು ನಿವೃತ್ತ ನೌಕರರು ಪಾಲ್ಗೊಂಡಿದ್ದರು.