ತಂಬ್ರಳ್ಳಿ ವತಿಯಿಂದ ಸಾಮರ್ಥ್ಯ ಸಂಸ್ಥೆಗೆ ಸೋಲಾರ್ ಅಳವಡಿಕೆ

Solar installation for the capacity building organization by Tambralli

ತಂಬ್ರಳ್ಳಿ ವತಿಯಿಂದ ಸಾಮರ್ಥ್ಯ ಸಂಸ್ಥೆಗೆ ಸೋಲಾರ್ ಅಳವಡಿಕೆ 

ಕೊಪ್ಪಳ 17: ವಿಕಲಚೇತನರ ಮತ್ತು ಬಡ ನಿರ್ಗತಿಕರ ಸೇವೆ ಮಾಡುತ್ತಿರುವ ನಗರದ ಸಾಮರ್ಥ್ಯ ಸಂಸ್ಥೆಗೆ ಕೊಪ್ಪಳ ಇನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ಉಮಾ ಮಹೇಶ್ ತಂಬ್ರಳ್ಳಿ ರವರು ತಮ್ಮ ವೈಯಕ್ತಿಕ ಸಹಾಯ 72,000 ವೆಚ್ಚದಲ್ಲಿ ಪ್ರೋ ಮ್ಯಾಕ್ಸ್‌ 5000 ಯುಪಿಎಸ್ ಸೋಲಾರ್ ಅಳವಡಿಕೆ ಮಾಡಿಸಿಕೊಟ್ಟಿದ್ದಾರೆ. 

 ಸೋಲಾರ್ ಅಳವಡಿಕೆಗೆ ತಗಲುವ ವಿದ್ಯುತ್ ಅಳವಡಿಕೆ ವ್ಯವಸ್ಥೆಯನ್ನು ಸಹ ನೆರವೇರಿಸಿದರು,ಇದಕ್ಕೆ ಇನ್ನರ್ ವೀಲ್ ಕ್ಲಬ್ ಜಿಲ್ಲಾ ಚೇರ್ಮನ್  ಸುಷ್ಮಾ ಪತಂಗೆ ರವರು ವಿದ್ಯುಕ್ತವಾಗಿ ಚಾಲನೆ ನೀಡಿರುತ್ತಾರೆ, ಸಾಮರ್ಥ್ಯ ಸಂಸ್ಥೆಯಲ್ಲಿ ವಿಕಲ ಚೇತನರಿಗೆ ಕೌಶಲ್ಯ ಅಭಿವೃದ್ಧಿ ಹೆಚ್ಚಿಸುವ ಕಾರ್ಯ ಇನ್ನಷ್ಟು ಸುಲಭವಾಗಿ ನಡೆಯಲು ಇದರಿಂದ ತುಂಬಾ ಅನುಕೂಲವಾಗಿದೆ. 

ಈ ಸಂದರ್ಭದಲ್ಲಿ ಕ್ಲಬ್ಬಿನ ಉಪಾಧ್ಯಕ್ಷರಾದ ಮಧು ಶೆಟ್ಟರ್ ಕಾರ್ಯದರ್ಶಿ ಮೀನಾಕ್ಷಿ ಬಣ್ಣದ ಬಾವಿ ಖಜಾಂಚಿ ಆಶಾ ಕವಲೂರು ಎಡಿಟರ್ ನಾಗವೇಣಿ ಐಎಸ್‌ಓ ಮಧು ನಿಲೋಗಲ್ ಕಾರ್ಯಕಾರಣಿ ಸಮಿತಿ ಸದಸ್ಯರಾದ ಡಾ, ರಾಧಾ ಕುಲಕರ್ಣಿ ಸುಜಾತ ಪಟ್ಟಣಶೆಟ್ಟಿ ಪಾರ್ವತಿ ಪಾಟೀಲ್ ತ್ರಿಶಾಲ ಪಾಟೀಲ್ ಮತ್ತು ಪದ್ಮ ಜೈನ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.