ಕಂಕಣ ಸೂರ್ಯಗ್ರಹಣ ಜಾಗೃತಿ ಕಾರ್ಯಕ್ರಮ

ಹುನಗುಂದ: ವರ್ಷದುದ್ದಕ್ಕೂ ನಡೆಯುವ ಗ್ರಹಣಗಳು ಸೂರ್ಯ ಮತ್ತು ಚಂದ್ರ ಉದಯ ಅಸ್ತ ಕಾಲದಲ್ಲಿ ಬಾಹ್ಯಾಕಾಶದಲ್ಲಿ ನಡೆಯುವ ಅಪರೂಪದ ಸಂಗತಿಗಳು ಎಂದು ಬಿಜಾಪೂರ ಶಿಕ್ಷಣ ಸಂಯೋಜಕ ರಮೇಶ ಬಳ್ಳಾ ಹೇಳಿದರು. 

       ಕನರ್ಾಟಕ ರಾಜ್ಯ ವಿಜ್ಞಾನ ಪರಿಷತ್ ಬೆಂಗಳೂರ, ಹಾಗೂ ಜಿಲ್ಲ ಸಮಿತಿ ಬಾಗಲಕೋಟ, ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೂಯರ್ೋತ್ಸವ 2019 ಜಿಲ್ಲಾ ಮಟ್ಟದ ಶಿಕ್ಷಕರ, ಸಾರ್ವಜನಿಕರ ಕುರಿತು ನಗರದ ವಿದ್ಯಾನಗರ ಸಕರ್ಾರಿ ಪ್ರೌಢ ಶಾಲೆಯಲ್ಲಿ ಕಂಕಣ ಸೂರ್ಯಗ್ರಹಣ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡುತ್ತ ವರ್ಷದಲ್ಲಿ ಸಂಭವಿಸುವ 7 ಗ್ರಾಹಣಗಳಲ್ಲಿ ನಿದರ್ಿಷ್ಟ ಪ್ರದೇಶದಲ್ಲಿ ಕೇವಲ 4ಗ್ರಹಣಗಳು ಸಂಭವಿಸುತ್ತವೆ. ಅದರಲ್ಲಿ ಕಂಕಣ ಸೂರ್ಯಗ್ರಹಣ ಕುತೂಹಲಕಾರಿಯಾಗಿದೆ.

      ಇದನ್ನು ಬರೀಗಣ್ನಿನಿಂದ ನೀಡುವದು ಅಪಾಯಕಾರಿಯಾಗಿದೆ. ವೈಜ್ಞಾನಿಕ ಸಾಧನಗಳ ಮೂಲಕ ಕಂಕಣ ಸೂರ್ಯಗ್ರಹಣವನ್ನು ಮಕ್ಕಳು ವೀಕ್ಷಿಸಬಹುದು ಎಂದರು. ಕೃಷಿಕ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಮಿಸಾಳೆ ಅವರು ಗ್ರಾಹಣ ಪ್ರಯೋಗಗಳನ್ನೂ ಸರಳ ಮಾದರಿಗಳ ಮೂಲಕ ಮನವರಿಕೆ ಮಾಡಿದರು.

       ಅಗಸ್ಯ್ತ ಫೌಂಡೇಷನ್ ಶಿಕ್ಷಕ ಬಸವರಾಜ ಅವರು ಗ್ರಾಹಣದ ಮಾದರಿಗಳ ಮಾದರಿಯೊಂದಿಗೆ ಪ್ರಾಯೋಗಿಕವಾಗಿ ತೋರಿಸಿದರು.

      ವಿಜಯಕುಮಾರ ಕೆ. ಅವರು ಸೌರವ್ಯೂಹದ ಗ್ರಹ ಮತ್ತು ಉಪಗ್ರಹಗಳ ಜೊತೆಗೆ ಗ್ರಹಣದ ವಿದ್ಯಮಾನಗಳು ತೋರಿಸಿದರು. ಬಿ. ದೊಡಬಸ್ಪ್ಪ ಅಧ್ಯಕ್ಷತೆ ವಹಿಸಿದ್ದರು. ದಾನೇಸ್ವರಿ ಸಾರಂಗಮಠ, ಪವನ ಹಿರೇಗೊಂಡ, ಉದಯಕುಮಾರ ನಾಯಕ ವೇದಿಕೆ ಮೇಲೆ ಇದ್ದರು. ಎಸ್.ಜಿ. ಎಮ್ಮಿ ಸ್ವಾಗತಿಸಿದರು.

  ಆಯ್. ಎಚ್. ನಾಯಕ ಪ್ರಾಥರ್ಿಸಿದರು. ಶಿಕ್ಷಕ ಮಲ್ಲು ದರಗಾರ ನಿರೂಪಿಸಿದರು. ರಾಜು ಹಳ್ಳೂರ ವಂದಿಸಿದರು. ಹುನಗುಂದದಲ್ಲಿ ಬೆಳಿಗ್ಗೆ 10ಕ್ಕೆ ಕಾರ್ಯಗಾರ ನಡೆಯಲಿದೆ