ಬೆಂಗಳೂರು, ಜೂ.21, ಇಂದು ರಾಹುಗ್ರಸ್ತ ಚೂಡಾಮಣಿ ಸೂರ್ಯಗ್ರಹಣ ಪ್ರಯುಕ್ತ ನೆಹರು ತಾರಾಲಯದಲ್ಲಿ ಸೂರ್ಯಗ್ರಹಣ ವೀಕ್ಷಣೆಗೆ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.ಸೂರ್ಯ ಗ್ರಹಣ ನಿಮಿತ್ಯ ಕೇವಲ ಅಧ್ಯಯನದ ದೃಷ್ಟಿಯಿಂದ ಮಾತ್ರ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ, ಕೊರೊನಾ ಭೀತಿ ಹಿನ್ನೆಲೆಯಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧಿಸಲಾಗಿದೆ.ಗ್ರಹಣ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ನೀಡಿದರೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ತೀರ ಕಷ್ಟವಾಗಲಿದೆ. ಆದ್ದರಿಂದ ನೆಹರು ತಾರಾಲಯದ ವೆಬ್‌ಸೈಟ್‌ನಲ್ಲಿ ಗ್ರಹಣದ ನೇರ ಪ್ರಸಾರವಾಗಲಿದ್ದು, ಈ ಮೂಲಕ ಸಾರ್ವಜನಿಕರು ಗ್ರಹಣ ವೀಕ್ಷಿಸಬಹುದು ಎಂದು ನೆಹರು ತಾರಾಲಯದ ನಿರ್ದೇಶಕ ಡಾ.ಪ್ರಮೋದ್ ಗಲಗಲಿ ತಿಳಿಸಿದ್ದಾರೆ.ಇನ್ನು, ಮನೆಯಲ್ಲಿದ್ದವರೂ ಬರಿಗಣ್ಣಿನಿಂದ ಸೂರ್ಯ ಗ್ರಹಣವನ್ನು ವೀಕ್ಷಿಸಬೇಡಿ. ಸೋಲಾರ್ ಕನ್ನಡಕವನ್ನು ಬಳಸಿ ಸೂರ್ಯಗ್ರಹಣವನ್ನು ವೀಕ್ಷಿಸಿ ಎಂದು ಅವರು ಸೂಚಿಸಿದ್ದಾರೆ.