ಧಾರವಾಡ 22: ಅನೇಕ ಬಡ ವಿದ್ಯಾರ್ಥಿ ಗಳ ವಿದ್ಯಾರ್ಜನೆಗೆ ಅನುಕೂಲ ಕಲ್ಪಿಸಿ ವ್ಯಾಪಕ ಜನಪರ ಸೇವೆಗಳಿಗೆ ಕಾರಣರಾಗಿರುವ ಸೊಲ್ಲಾಪುರದ ವಾರದ ಮಲ್ಲಪ್ಪನವರು ವೀರಶೈವ ಧರ್ಮದ ಒಬ್ಬ ಯುಗ ಪುರುಷರಾಗಿದ್ದಾರೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಶ್ರೀಕಾಶಿ ಜ್ಞಾನ ಪೀಠದ ಜಗದ್ಗುರು ಡಾ. ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದರು.
ಅವರು ಉತ್ತರಪ್ರದೇಶದ ವಾರಣಾಸಿಯಲ್ಲಿರುವ ಕಾಶಿ ಜ್ಞಾನಪೀಠದ ಶ್ರೀಜಗದ್ಗುರು ವಿಶ್ವಾರಾಧ್ಯ ಗುರುಕುಲದ ಶತಮಾನೋತ್ಸವದ ನಿಮಿತ್ತ ಹಮ್ಮಿಕೊಂಡಿರುವ 38 ದಿನಗಳ 'ವೀರಶೈವ ಮಹಾಕುಂಭ' ಅಂಗವಾಗಿ ಹಮ್ಮಿಕೊಂಡಿದ್ದ ವಾರದ ಮಲ್ಲಪ್ಪನವರ ಸ್ಮರಣೋತ್ಸವದ ಸಾನ್ನಿಧ್ಯವಹಿಸಿ ಮಾತನಾಡುತ್ತಿದ್ದರು. ವಾರದ ಮಲ್ಲಪ್ಪನವರು ಶ್ರೀಮದ್ ವೀರಶೈವ ಗ್ರಂಥಮಾಲೆಯನ್ನು ಸ್ಥಾಪಿಸಿ ಅದರ ವತಿಯಿಂದ ಪ್ರಾಚೀನ ವಿರಳ ಗ್ರಂಥಗಳನ್ನು ಸಂಗ್ರಹಿಸಿ, ವಿದ್ವಾಂಸರಿಂದ ಸಂಶೋಧಿಸಿ ಮರಾಠಿ ಭಾಷೆಗೆ ಅನುವಾದ ಮಾಡಿ ತಮ್ಮ ಅಂಗಡಿಗಳಲ್ಲಿ ಅವುಗಳ ಮಾರಾಟದ ವ್ಯವಸ್ಥೆಯನ್ನು ಮಾಡಿದ್ದರು. ಒಂದು ವಿಶ್ವವಿದ್ಯಾಲಯ ಮಾಡಬೇಕಾದ ಕಾರ್ಯವನ್ನು ವಾರದ ಮಲ್ಲಪ್ಪನವರು ಒಬ್ಬರೇ ತಮ್ಮ ಆದಾಯದಿಂದ ಗ್ರಂಥ ಮುದ್ರಣವನ್ನು ಮಾಡಿ ಬಹುದೊಡ್ಡ ಉಪಕಾರವನ್ನು ಮಾಡಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ ಅವರು ಮಾಡಿದ ಕಾರ್ಯ ಅಪೂರ್ವವಾದದ್ದು ಎಂದರು.
ವಾರದ ಮಲ್ಲಪ್ಪ ಅವರು ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿ ಕವಾಗಿ, ಔದ್ಯೋಗಿಕವಾಗಿ ಮತ್ತು ರಾಜಕೀಯವಾಗಿ ಮಾಡಿದ ಸೇವೆ ಅಪೂರ್ವವಾದುದು. ಸೊಲ್ಲಾಪುರದಲ್ಲಿ ಉತ್ತಮ ಸಂಸ್ಕೃತ ಅಧ್ಯಯನಕ್ಕಾಗಿ ಶ್ರೀಮದ್ ವೀರಶೈವ ವಾರದ ಸಂಸ್ಕೃತ ಪಾಠಶಾಲೆಯನ್ನು ಸ್ಥಾಪಿಸಿ ನಾಲ್ಕಾರು ಪಂಡಿತರನ್ನು ಇಟ್ಟುಕೊಂಡು ವೀರಶೈವ ಮಠಾಧಿಪತಿಗಳಿಗೆ ಸಂಸ್ಕೃತ ಅಧ್ಯಯನಕ್ಕೆ ಅನುಕೂಲತೆಯನ್ನು ಮಾಡಿಕೊಟ್ಟರು. ವಾರದ ಕಾಮಸರ್್ ಕಾಲೇಜನ್ನು ಸ್ಥಾಪಿಸಿ ಮಕ್ಕಳಿಗೆ ಶಿಕ್ಷಣವನ್ನು ಕೊಡುತ್ತಿದ್ದರು. ತಮ್ಮ ಸಾವಿರಾರು ಎಕರೆ ಜಮೀನ ಜೊತೆಗೆ ಇತರರ ಭೂಮಿಯನ್ನು ಸಹ ಪಡೆದುಕೊಂಡು 16 ಸಾವಿರ ಎಕರೆ ಭೂಮಿಯನ್ನು ರೈತರಿಂದ ಸಾಗುವಳಿ ಮಾಡಿಸಿ ಬಡ ರೈತರಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟಿದ್ದರು. ಇವರು ನರಸಿಂಹ ಗಿರಿಜಿ ಎಂಬ ಮುಂಬೈಯ ಮಾವರ್ಾಡಿ ಅವರ ಸಹಭಾಗಿತ್ವದಲ್ಲಿ ನೂಲಿನ ಗಿರಣಿಯನ್ನು ಸ್ಥಾಪಿಸಿ ಸಾವಿರಾರು ಬಡ ಕುಟುಂಬಗಳಿಗೆ ಉದ್ಯೋಗವನ್ನು ಕಲ್ಪಿಸಿಕೊಟ್ಟಿದ್ದರು. ಬ್ರಿಟಿಷ್ ಸಕರ್ಾರವು ಇವರ ಸಾಮಾಜಿಕ ಸೇವೆಯನ್ನು ಗುರುತಿಸಿ ಇವರಿಗೆ 'ರಾವ್ ಬಹದ್ದೂರ್ ಎಂಬ ಪ್ರಶಸ್ತಿಯನ್ನು ಕೊಟ್ಟು ಗೌರವಿರಸಿದ್ದರು ಎಂದರು.
ಸ್ಮರಣೋತ್ಸವ : ಹಾನಗಲ್ಲ ವಿರಕ್ತಮಠದ ಲಿಂಗೈಕ್ಯ ಶ್ರೀಕುಮಾರ ಸ್ವಾಮಿಗಳು, ಚಿತ್ರದುರ್ಗ ಬ್ರಹನ್ಮಠದ ಲಿಂಗೈಕ್ಯ ಜಗದ್ಗುರು ಜಯದೇವ ಸ್ವಾಮೀಜಿ, ಹುಬ್ಬಳ್ಳಿ ಮೂರುಸಾವಿರಮಠದ ಲಿಂಗೈಕ್ಯ ಜಗದ್ಗುರು ಗಂಗಾಧರ ಸ್ವಾಮೀಜಿ, ನಿಡಸೋಸಿ ಸಿದ್ಧಸಂಸ್ಥಾನಮಠದ ಲಿಂಗೈಕ್ಯ ಶ್ರೀಚತುರ್ಥ ಶಿವಲಿಂಗೇಶ್ವರ ಸ್ವಾಮೀಜಿ, ಆನಂದಪುರದ ಲಿಂಗೈಕ್ಯ ಶ್ರೀಲಿಂಗ ಸ್ವಾಮೀಜಿ, ಇಳಕಲ್ಲ ಮಠದ ಲಿಂಗೈಕ್ಯ ಶ್ರೀಮಹಾಂತಸ್ವಾಮಿಗಳು ಹಾಗೂ ಹುನಗುಂದ ಚರಮತಿಮಠದ ಶ್ರೀವೀರಭದ್ರ ಶಾಸ್ತ್ರಿಗಳ ಸ್ಮರಣೋತ್ಸವವನ್ನು ಆಚರಿಸಲಾಯಿತು.
ಹಾರ್ನಹಳ್ಳಿ ಕೋಡಿಮಠದ ಶಿವಾನಂದ ರಾಜೇಂದ್ರ ಮಹಾಸ್ವಾಮಿಗಳು, ನಿಡಸೋಶಿ ಮಠದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಶಿವಮೊಗ್ಗ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜು ನ ಮಹಾಸ್ವಾಮಿಗಳು, ಧಾರವಾಡ ಮುರುಘಾಮಠದ ಶ್ರೀಮಲ್ಲಿಕಾರ್ಜು ನ ಸ್ವಾಮೀಜಿ ಪಾಲ್ಗೊಂಡು ಉಪದೇಶಾಮೃತ ನೀಡಿದರು. ಬಾಲೇಹೊಸೂರಿನ ಶ್ರೀದಿಂಗಾಲೇಶ್ವರ ಸ್ವಾಮಿಗಳು ವಿಶೇಷ ಉಪನ್ಯಾಸ ನೀಡಿದರು. ಕರ್ನಾ ಟಕ ಸರ್ಕಾ ರದ ಸಚಿವ ಶ್ರೀರಾಮುಲು ಸಮಾರಂಭದ ಅಧ್ಯಕ್ಷತೆವಹಿಸಿದ್ದರು.
ಬಿಡುಗಡೆ : ವಾರದ ಮಲ್ಲಪ್ಪನವರನ್ನು ಕುರಿತು ಬರೆದ 'ಪುಣ್ಯ ಶ್ಲೋಕ ವಾರದ' ಎಂಬ ಕೃತಿಯನ್ನು ಬಿಡುಗಡೆಗೊಳಿಸಲಾಯಿತು. ಈ ಕೃತಿ ಕುರಿತು ಮರಾಠಿ ವೀರಶೈವ ಸಾಹಿತ್ಯದ ಶ್ರೇಷ್ಠ ಸಂಶೋಧಕ ಡಾ. ಶೇಷನಾರಾಯಣ ಪಸಾರಕರ ಮಾತನಾಡಿದರು. ಕಾಶಿ ಕ್ಷೇತ್ರದಲ್ಲಿ ನಡೆದ ವಾರದ ಮಲ್ಲಪ್ಪನವರ 108ನೇ ಪುಣ್ಯಸ್ಮರಣೋತ್ಸವದಲ್ಲಿ ವಿವಿಧ ಪ್ರಾಂತಗಳ ಸಹಸ್ರಾರು ಭಕ್ತರು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಹಾನಗಲ್ಲ ಕುಮಾರಸ್ವಾಮಿಗಳ ಸಾಕ್ಷ್ಯಚಿತ್ರ ಪ್ರದರ್ಶಿ ಸಲಾಯಿತು.