ಮಣ್ಣಿನ ಆರೋಗ್ಯ ಅರಿಯಲು ಮಣ್ಣು ಪರೀಕ್ಷೆ ಅಗತ್ಯ

ಲೋಕದರ್ಶನವರದಿ

ಮಹಾಲಿಂಗಪುರ: ಮನುಷ್ಯನ ಆರೋಗ್ಯ ತಪ್ಪಿದರೆ, ಪರೀಕ್ಷೆಗಳು ಎಷ್ಟು ಮುಖ್ಯವೋ ಹಾಗೆ ಮಣ್ಣಿನ ಆರೋಗ್ಯ ತಿಳಿಯಲು ಮಣ್ಣು ಪರೀಕ್ಷೆ ಕೂಡ ಅಷ್ಟೇ ಅಗತ್ಯವೆಂದು ಗೋಕಾಕ್ ಮಣ್ಣು ಆರೋಗ್ಯ ಕೇಂದ್ರ ಮುಖ್ಯಸ್ಥೆ ಶ್ರೀಮತಿ ಶೈಲಜಾ ಬೆಳ್ಳಂಕಿಮಠ ಹೇಳಿದರು.

       ಸಮೀಪದ ಕಟಕಬಾವಿ ಗ್ರಾಮದಲ್ಲಿ ರಾಯಬಾಗದ ಐಡಿಎಫ್ ಸಂಸ್ಥೆ ಹಾಗೂ ಮಣ್ಣು ಆರೋಗ್ಯ ಕೇಂದ್ರ ಗೋಕಾಕ್ ಇವರ ಸಹಯೋಗದಲ್ಲಿ ವಿಶ್ವ ಮಣ್ಣು ದಿನಾಚರಣೆ ಸಪ್ತಾಹದ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.

    ರೈತರು ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಬಳಸುವುದರಿಂದ ಮಣ್ಣಿನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು ಹೆಚ್ಚಿನ ಪ್ರಮಾಣದಲ್ಲಿ ಸಗಣಿ, ಕಾಂಪೋಸ್ಟ್, ಜೈವಿಕ ಗೊಬ್ಬರಗಳನ್ನು ಬಳಸುವುದಲ್ಲದೇ ಸೂಕ್ಷ್ಮ ಪೋಷಕಾಂಶಗಳನ್ನು ಬಳಸುವುದರಿಂದ ಹೆಚ್ಚಿನ ಇಳುವರಿ ನೀರಿಕ್ಷೆ ಮಾಡಬಹುದು ಎಂದರು.

   ಇಲಾಖೆ ಕೂಡ ಮಣ್ಣು ಆರೋಗ್ಯದ ದೃಷ್ಟಿಯಿಂದ ಎಲ್ಲ ರೈತರಿಗೆ ಮಣ್ಣು ಆರೋಗ್ಯ ಕಾರ್ಡ ವಿತರಿಸಲಾಗುತ್ತಿದ್ದು ರೈತರು ಹೆಚ್ಚಿನ ರೀತಿಯಲ್ಲಿ ಪ್ರಯೋಜನ ಪಡೆಯಬೇಕೆಂದು ಕರೆ ನೀಡಿದರು.

      ಕಾರ್ಯಕ್ರಮದಲ್ಲಿ ಪ್ರಯೋಗಗಳ ಮೂಲಕ ಮಣ್ಣಿನಲ್ಲಿ ನೀರು ಹಿಡಿಯುವ ಸಾಮಥ್ರ್ಯದ ಬಗ್ಗೆ ಪ್ರಾತ್ಯಕ್ಷಿಕೆ ತೋರಿಸಲಾಯಿತು.

        ಸಂಚಾರಿ ಮಣ್ಣು ಪ್ರಯೋಗಾಲಯವನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ರೈತರು, ರೈತ ಮಹಿಳೆಯರು, ಶಾಲಾ ವಿದ್ಯಾಥರ್ಿಗಳು ವಿಕ್ಷೀಸಿ ಮಾಹಿತಿ ಪಡೆದರು.

      ಐಡಿಎಫ್ ಕಾರ್ಯಕರ್ತರಾದ ಆನಂದ ಚೌಗಲಾ ಮಾತನಾಡಿ, ರಾಯಬಾಗ ರೈತ ಉತ್ಪಾದಕ ಕಂಪನಿಯಿಂದ ದೊರೆಯುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕಿರಣ್ ಚೌಗಲಾ ಸ್ವಾಗತಿಸಿ, ರಾಮಪ್ಪ ಕರೆಮ್ಮಿ ನಿರೂಪಿಸಿ, ಅಜಯ್ ಕಲಾಲ್ ವಂದಿಸಿದರು. ಲೋಹಿತ್ ಕಲಾಲ್, ಲಕ್ಷ್ಮೀ ಬೆನ್ನಾಳ, ನಿಂಗವ್ವ ಪೂಜೇರಿ, ಕಸ್ತೂರಿ ಮಲಕಾಪುರೆ ಉಪಸ್ಥಿತರಿದ್ದರು.