ಮಣ್ಣು ಒಂದು ಜೀವಂತ ನೈಸರ್ಗಿಕ ಸಂಪತ್ತು: ಕುಡುಪಲಿ

ಹಾವೇರಿ: ವಿಶ್ವ ಮಣ್ಣು ದಿನಾಚರಣೆಯ ಮಹತ್ವವನ್ನು ತಿಳಿಸಿದರು. ಮಣ್ಣ್ಣು ಒಂದು ಜೀವಂತ ನೈಸಗರ್ಿಕ ಸಂಪತ್ತು. ಈ ಮಣ್ಣಿನಿಂದಲೇ ಸಕಲ ಜೀವರಾಶಿಗಳು ಬದುಕುತ್ತಿದ್ದು ಅದನ್ನು ಸುಸ್ಥಿತಿಯಲ್ಲಿ ಉಳಿಸಿಕೊಂಡು ಹೋಗುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ ಎಂದು ಹಾವೇರಿ ತಾಲೂಕ ಸಹಾಯಕ ಕೃಷಿ ನಿದರ್ೇಶಕರಾದ ಆರ್.ಕೆ.ಕುಡಪಲಿ ಹೇಳಿದರು. 

ತಾಲೂಕಿನ ಕೃಷಿ ಇಲಾಖೆಯಿಂದ ಡಿ.05ರಂದು ಸಹಾಯಕ ಕೃಷಿ ನಿದರ್ೇಶಕರ ಸಭಾಭವನದಲ್ಲಿ 2019-20ನೇ ಸಾಲಿನ ವಿಶ್ವ ಮಣ್ಣು  ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು. 

     ನಾವೆಲ್ಲರೂ ಹಿಂದೆ ಬದುಗಳನ್ನು ನಿಮರ್ಿಸಿಕೊಂಡು ಮಣ್ಣಿನ ಸಂರಕ್ಷಣೆ ಮಾಡುತ್ತಿದ್ದೇವು, ಆದರೆ ಈಗ ಹೆಚ್ಚಿನ ಇಳುವರಿ ಪಡೆಯಲು ಎಲ್ಲಾ ಬದುಗಳನ್ನು ಉಳಿಸದೇ ಸಾಗು ಮಾಡುತ್ತಿದ್ದು ಇದರ ಪರಿಣಾಮ ಮಣ್ಣು ಸವಕಳಿಯಿಂದ ಸಾಕಷ್ಟು ಹಾನಿಯಾಗುತ್ತದೆ ಎಂದು ಹೇಳಿದರು. 

       ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಉಪನ್ಯಾಸ ನೀಡಲು ಆಗಮಿಸಿದ ಡಾ||ಕೆ.ಬಿ.ಎಡಹಳ್ಳಿ ಪ್ರಾಧ್ಯಾಪಕರು, ಕೃಷಿ ಮಹಾವಿದ್ಯಾಲಯ ಹನುಮನಮಟ್ಟಿ ಇವರು ಮತಾನಾಡಿ ಡಿ.5ರಂದು ವಿಶ್ವ ಮಣ್ಣು ದಿನಚಾರಣೆಯನ್ನು ಥೈಲಾಂಡ್ ರಾಜನ ಹುಟ್ಟು ಹಬ್ಬದ ಅಂಗವಾಗಿ 1914 ರಿಂದ ಪ್ರತಿ ವರ್ಷ ಡಿ.5ರಂದು ನ್ನು ವಿಶ್ವ ಮಣ್ಣು ದಿನಚಾರಣೆಯನ್ನಾಗಿ ಆಚರಿಸಲಾಗುತ್ತದೆ. ಕೇವಲ ಒಂದು ಇಂಚು ಮಣ್ಣು ತಯಾರಾಗಲು ಸಾವಿರಾರು ವರ್ಷಗಳು ಬೇಕು ಆದರೆ ನಾವೇನಾದರೂ ನಿರ್ಲಕ್ಷ್ಯ ವಹಿಸಿದರೆ, ನಾಶವಾಗಲು ಕೆಲವೇ ದಿನಗಳು ಸಾಕಗುತ್ತೆ. ಒಂದು ಕ್ಯೂಬಿಕ್ ಸೆಂ.ಮಿ ಮಣ್ಣಿನಲ್ಲಿ ಮಿಲಿಯನ್ ಸಂಖ್ಯೆಯಲ್ಲಿ ಸೂಕ್ಮ ಜೀವಿಗಳು ಇರುತ್ತವೆ. 

          ಹಾಗಾಗಿ ಮಣ್ಣು ಉಸಿರಾಡುತ್ತೆ ಹಾಗೂ ಜೀವಂತವಾಗಿದೆ. ಶೇ.95 ರಷ್ಟು ಆಹಾರ ಉತ್ಪಾದನೆ ಮಣ್ಣಿನಿಂದಲೇ ಬೆಳೆಯುತ್ತದೆ ಹಾಗಾಗಿ ಮಣ್ಣಿನ ಸಂರಕ್ಷಣೆಯನ್ನು ಪ್ರತಿಯೊಬ್ಬರು ಮಾಡಬೇಕು.

  ಹಸಿರು ಕ್ರಾಂತಿಯ ಪರಿಣಾಮದಿಂದ ರಸಗೊಬ್ಬರಗಳನ್ನು ಯಥೇಚ್ಛವಾಗಿ ಉಪಯೋಗಿಸುವುದರಿಂದ ಮಣ್ಣು ಬರಡಾಗುತ್ತಿದ್ದು ಮಣ್ಣಿನ ಫಲವತ್ತತೆ ಹಾಳುಗುತ್ತಿದೆ.

  ಆದ್ದರಿಂದ ಮಣ್ಣನ್ನು ಜೀವಂತವಾಗಿಸಲು ಮಣ್ಣು ಉಸಿರಾಡುವಂತೆ ಮಾಡಲು ಜೈವಿಕ ಗೊಬ್ಬರ ಹಾಗೂ ಜೀವಾಮೃತ ಬಳಕೆ ಹೆಚ್ಚಿಗೆ ಮಾಡಬೇಕೆಂದರು, ಸಾವಯವ ಗೊಬ್ಬರಗಳನ್ನು ಸ್ವತ: ರೈತರೇ ಆಸಕ್ತಿಯಿಂದ ತಯಾರಿಸಿಕೊಳ್ಳಬೇಕು ಹಾಗೂ ಸಾವಯವ ವಿಧಾನದಿಂದ ಬೆಳೆಗೆ ಹೆಚ್ಚಿನ ಬೇಡಿಕೆಯಿದ್ದು ಆದ್ದರಿಂದ ಒಳ್ಳೆಯ ಆರೋಗ್ಯ ಪಡೆಯಬಹುದೆಂದು ತಿಳಿಸಿದರು. ರಾಸನಿಯಕ ಗೊಬ್ಬರ ಮತ್ತು ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡಿ, ಸಾವಯವ ಕೃಷಿ ಅಳವಡಿಸಿಕೊಳ್ಳಿ ಎಂದು ಹೇಳಿದರು. 

ಬಸವರಾಜ ಹಾದಿಮನಿ, ಪ್ರದಾನ ಕಾರ್ಯದಶರ್ಿ ತಾಲ್ಲೂಕು ಕೃಷಿಕ ಸಮಾಜ ಹಾವೇರಿ ಇವರು ಮಾತನಾಡಿ ಮಣ್ಣು ಪರೀಕ್ಷೆ ಆಧಾರದ ಮೇಲೆ ಗೊಬ್ಬರ ಬಳಸಬೇಕು, ಮಣ್ಣಿನ ಸಂರಕ್ಷಣೆ ಹಾಗೂ ಮಣ್ಣಿನ ಫಲವತ್ತತೆ, ಮಣ್ಣಿನ ಗುಣಮಟ್ಟ ಹಾಗೂ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಹೇಳಿದರು. ದೀಪಕ ಘಂಟಿಸಿದ್ದಪ್ಪನವರ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷರು ಇವರು ಮಾತನಾಡಿ ರಾಸಾಯನಿಕ ಗೊಬ್ಬರ ಬಳಕೆಯಿಂದ ಮಣ್ಣಿನ ಗುಣಧರ್ಮವನ್ನು ಹಾಳುಮಾಡುತ್ತಿದ್ದೇವೆ ಅದಕ್ಕಾಗಿ ಮಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳವುದು ನಮ್ಮೆಲ್ಲರ ಕರ್ತವ್ಯವಾಗಿದೆ.

   ಮಣ್ಣಿನ ಸಂರಕ್ಷಣೆ ಮಾಡಲು ಎಲ್ಲಾ ರೈತ ಭಾಂದವರು ಪ್ರಮಾಣ ಮಾಡಬೇಕೆಂದು ಮನವಿ ಮಾಡಿದರು. 

  ಸದರಿ ಕಾರ್ಯಕ್ರಮದಲ್ಲಿ ತಾಲೂಕು ಕೃಷಿಕ ಸಮಾಜದ ನಿದರ್ೇಶಕರುಗಳಾದ ಮಲ್ಲೇಶಪ್ಪ ಮತ್ತಿಹಳ್ಳಿ, ಪ್ರಕಾಶ ಹಂದ್ರಾಳ ಶಿವಬಸಪ್ಪ ಗೋವಿ ರೈತ ಸಂಘದ ಕಾಯರ್ಾಧ್ಯಕ್ಷರು ಭಾಗವಹಿಸಿದ್ದರು. ಕೃಷಿ ಅಧಿಕಾರಿಗಳಾದ ಕೊಟ್ರೇಶ ಗೆಜ್ಲಿ ಕಾರ್ಯಕ್ರಮವನ್ನು ಸ್ವಾಗತಿಸಿದರು. ಮಹಮ್ಮದ ರಫೀಕ್ ಕುಲಮಿ ಕೃಷಿ ಅಧಿಕಾರಿಗಳು, ರೈತ ಸಂಘದ ಪದಾಧಿಕಾರಿಗಳು, ರೈತ ಬಾಂಧವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ತಾಲ್ಲೂಕು ತಾಂತ್ರಿಕ ವ್ಯವಸ್ಥಾಪಕರಾದ ವಿಶ್ವನಾಥ ರೆಡ್ಡೇರ ಇವರು ಕಾರ್ಯಕ್ರಮ ನಿರೂಪಿಸಿದರು.