ಸಾಮಾಜಿಕ ಕಾರ್ಯಗಳು ನಮಗೆಲ್ಲ ಮಾದರಿ, ಬಬಲಾದಿಯ ಸಿದ್ಧರಾಮ ಅಜ್ಜ

Social work is an example for us all, says Babaladi's grandfather Siddaramaiah

ಸಾಮಾಜಿಕ ಕಾರ್ಯಗಳು ನಮಗೆಲ್ಲ ಮಾದರಿ, ಬಬಲಾದಿಯ   ಸಿದ್ಧರಾಮ ಅಜ್ಜ

ಅಥಣಿ 21: ಉತ್ತರ ಕರ್ನಾಟಕದ ಕಲಾವಿದರು, ರಾಜಕಾರಣಿಗಳು, ಉದ್ಯಮಿಗಳು ಒಂದಾಗಬೇಕು ಆಗ ಮಾತ್ರ ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಸಾಧ್ಯ ಎಂದು ಉದ್ಯಮಿ, ಆರ್‌.ಎಸ್‌.ಪಿ ಸಂಸ್ಥೆಯ ಅಧ್ಯಕ್ಷ ರವಿ ಪೂಜಾರಿ ಹೇಳಿದರು. ಅವರು ಚಿತ್ರಿಕರಣ ಹಂತದಲ್ಲಿರುವ ರತ್ನಾಪುರ ಭಂಡಾರ ಸಿನೇಮಾ ಟೇಸರ್ ಬಿಡುಗಡೆ ಮತ್ತು ತಮ್ಮ ಜನ್ಮ ದಿನದ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ  ಮಾತನಾಡುತ್ತಿದ್ದರು.   

     ಉತ್ತರ  ಕರ್ನಾಟಕದ ನೂರಾರು ಕಲಾವಿದರು ತಮ್ಮ ಕಲೆಯನ್ನು ಅತ್ಯುತ್ತಮವಾಗಿ ಪ್ರದರ್ಶಿಸುತ್ತಿದ್ದರೂ ಕೂಡ ಇಲ್ಲಿಯವರೆಗೂ ಅವರಿಗೆ ಉತ್ತಮವಾದ ವೇದಿಕೆ ಸಿಕ್ಕಿಲ್ಲ ಆದರೂ ಯು ಟ್ಯೂಬ್ ನಂತಹ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಕಲೆಯನ್ನು ಪ್ರದರ್ಶಿಸಿ ತಮ್ಮ ಜನಪ್ರಿಯತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ ಎಂದ ಅವರು ಆರ್‌.ಎಸ್‌.ಪಿ ಸಂಸ್ಥೆಯ ಮೂಲಕ ಉತ್ತರ ಕರ್ನಾಟಕದ ಕಲಾವಿದರನ್ನು ಒಂದೇ ವೇದಿಕೆಯಲ್ಲಿ ಕರೆ  ತರುವ ಪ್ರಯತ್ನ ಮಾಡುತ್ತಿರುವೆ ಎಂದರು.    

  ಆರ್‌.ಎಸ್‌.ಪಿ ಸಂಸ್ಥೆಯ ಮೂಲಕ ರತ್ನಾಪುರ ಭಂಡಾರ ಎನ್ನುವ ಸಿನೇಮಾ ಚಿತ್ರಿಕರಣ ಕೂಡ ಪ್ರಾರಂಭಿಸಲಾಗಿದ್ದು, ಕೆಲವೇ ತಿಂಗಳಲ್ಲಿಯೇ ಚಿತ್ರಿಕರಣ ಮುಕ್ತಾಯಗೊಳ್ಳಲಿದೆ  ಎಂದ ಅವರು ಈ ಸಿನೇಮಾದಲ್ಲಿ ಉತ್ತರ ಕರ್ನಾಟಕದ ಕಲಾವಿದರಿಗೆ, ನಿರ್ದೇಶಕರಿಗೆ ಅವಕಾಶ ನೀಡುವ ಮೂಲಕ ಪ್ರೋತ್ಸಾಹಿಸಿರುವೆ ಎಂದರು.     ಆರ್‌.ಎಸ್‌.ಪಿ ಸಂಸ್ಥೆಯ ಮೂಲಕ ಸಾಮಾಜಿಕ, ರಚನಾತ್ಮಕ, ಶೈಕ್ಷಣಿಕ, ಸೇವಾ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಬದ್ಧನಾಗಿರುವೆ. ಮುಂದಿನ ಶೈಕ್ಷಣಿಕ ವರ್ಷದಿಂದ ಆರ್‌.ಎಸ್‌.ಪಿ ಸಂಸ್ಥೆಯಿಂದ ಶಾಲಾ, ಕಾಲೇಜುಗಳನ್ನೂ ಕೂಡ ಪ್ರಾರಂಭಿಸಲಾಗುವುದು  ಎಂದರು.   

       ಕಡು ಬಡತನದಲ್ಲಿ ಹುಟ್ಟಿ ಬೆಳೆದ ನಾನು ಅನೇಕ ಸಂಕಷ್ಟಗಳ ಮಧ್ಯೆಯೂ ಪ್ರಾಮಾಣಿಕವಾಗಿ  ಮತ್ತು ನಿಷ್ಠೆಯಿಂದ  ಕಾರ್ಯ ನಿರ್ವಹಿಸಿದ್ದರಿಂದಲೇ ಈ ಸ್ಥಿತಿಗೆ ಇಂದು ತಲುಪಿರುವೆ ಎಂದರು.  ನಾನು ಕಷ್ಟದಲ್ಲಿದ್ದಾಗ ಅನೇಕ ಬಾರಿ ಹಸೀದ ಹೊಟ್ಟೆಯಲ್ಲಿಯೇ ಇರುತ್ತಿದ್ದೆ ಈ ಸ್ಥಿತಿ ಬೆರೋಬ್ವರಿಗೆ ಬರಬಾರದೆನ್ನುವ ಕಾರಣದಿಂದ  ಆರ್‌.ಎಸ್‌.ಪಿ ಸಂಸ್ಥೆಯ ಮೂಲಕ ನಿತ್ಯ ಅನ್ನ ದಾಸೋಹ ಕಳೆದ ಒಂದು ವರ್ಷದಿಂದ ಪ್ರಾರಂಭಿಸಿರುವೆ ಇದರ ಜೊತೆಗೆ ಉಚಿತ ಅಂಬ್ಯುಲನ್ಸ ಸೇವೆಯನ್ನೂ ಸಹ ಕಳೆದ ವರ್ಷದಿಂದ ಪ್ರಾರಂಭಿಸಿರುವೆ ಎಂದರು.      ನಾನು ಆರ್ಥಿಕ ಸಂಕಷ್ಟದಲ್ಲಿರುವಾಗ ಅನೇಕರು ನನ್ನನ್ನು ಹಂಗಿಸಿದ್ದರು ಅವರ ಆ ಹಂಗಿಗೆ ಉತ್ತರವಾಗಿ ಇಂದು ನಾನು ಅತೀ ಹೆಚ್ಚು  ಬಂಗಾರದ ಆಭರಣಗಳನ್ನು ಧರಿಸುವ ಮೂಲಕ ಗೋಲ್ಡ ರವಿ ಎಂದು ಪ್ರಸಿದ್ಧಿಯಾಗಿರುವೆ ಎಂದ ಅವರು ನಿಷ್ಠೆಯಿಂದ ನಮ್ಮ ನಮ್ಮ ಕೆಲಸ ಕಾರ್ಯಗಳನ್ನು ಮಾಡಿದಲ್ಲಿ ನಿಶ್ಚಿತವಾಗಿಯೂ ಯಶಸ್ಸು ನಮ್ಮನ್ನು ಹುಡುಕಿಕೊಂಡು ಬರುತ್ತದೆ ಎಂದರು.     ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಬಬಲಾದಿ ಮೂಲ ಸಂಸ್ಥಾನ ಮಠದ ವೇದಮೂರ್ತಿ ಶ್ರೀ ಸಿದ್ಧರಾಮ ಅಜ್ಜ ಮಾತನಾಡಿ, ಉದ್ಯಮಿ ರವಿ ಪೂಜಾರಿಯ ಸಾಮಾಜಿಕ ಕಳಕಳಿ ಮೆಚ್ಚುವಂತಹದ್ದು, ಅವರ ಸಾಮಾಜಿಕ ಕಾರ್ಯಗಳು ಮುಂದುವರೆಯಲಿ ಎಂದು ಶುಭ ಹಾರೈಸಿದ ಅವರು ಬೆಂಕಿ ಬಬಲಾದಿ ಮುತ್ಯಾ ಅನ್ಯಾಯ ಎಂದಿಗೂ ಸಹಿಸಲ್ಲ ಇಂತಹ ಬಬಲಾದಿ ಕ್ಷೇತ್ರದ ಭಕ್ತ ರವಿ ಪೂಜಾರಿಗೆ ಬಬಲಾದಿ ಮುತ್ಯಾನ ಆಶೀರ್ವಾದ ಇದ್ದೆ ಇರುತ್ತದೆ ಎಂದರು.      ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಮಾಜಿ ಶಾಸಕ ಮಹೇಶ ಕುಮಠಳ್ಳಿ, ರವಿ ಪೂಜಾರಿ ಒಬ್ಬ ಸ್ನೇಹ ಜೀವಿ, ಜನಪ್ರಿಯ ವ್ಯಕ್ತಿ ಎನ್ನಲು ಅವರ ಜನ್ಮ ದಿನದ ಕಾರ್ಯಕ್ರಮದಂದು ಸೇರಿದ್ದ ಜನೋಸ್ತಮವೇ ಉತ್ತಮ ನಿದರ್ಶನ ಎಂದರು.       ಸಾನಿಧ್ಯವನ್ನು ಶೆಟ್ಟರ ಮಠದ ಶ್ರೀ ಮರುಳಸಿದ್ಧ ಸ್ವಾಮೀಜಿ ವಹಿಸಿ ಮಾತನಾಡಿದರು. ಆರ್‌.ಎಸ್‌.ಎಸ್ ನ ಅರವಿಂದರಾವ ದೇಶಪಾಂಡೆ, ಬಿಜೆಪಿ ಧುರೀಣ ರಾಜೇಂದ್ರ ಐಹೊಳೆ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಬಿಜೆಪಿ ಧುರೀಣ ಉಮೇಶರಾವ ಬಂಟೋಡಕರ, ಗೀರೀಶ ಬುಟಾಳಿ ಆಗಮಿಸಿದ್ದರು.      ಕಾರ್ಯಕ್ರಮದ ನಂತರ ಉತ್ತರ ಕರ್ನಾಟಕದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.