ವಿಜಯಪುರ 11: ಸಾಮಾಜಿಕ ಮಾಧ್ಯಮವು ಗ್ರಾಹಕರೊಂದಿಗೆ ಸಮನ್ವಯತೆ, ಸಂಪರ್ಕ ಸಾಧಿಸಲು ಮತ್ತು ವ್ಯವಹಾರಗಳನ್ನು ಕೈಕೊಳ್ಳಲು ಸಹಕಾರಿಯಾಗಿದೆ. ಯುಟೂಬ್, ವಾಟ್ಸ್ಯಾಪ್, ಫೇಸಬುಕ್, ಟ್ವೀಟರ್, ಇಸ್ಟಾಗ್ರಾಮ್ ಮತ್ತು ಇ-ಮೇಲ್, ಎಕ್ಸ್, ಮೈಕ್ರೋ ಬ್ಲಾಗ್ಲಿಂಗ್‌ನಂತಹ ಪ್ಲಾಟಫಾರಂಗಳನ್ನು ಬಳಸಿ, ವಿಶ್ವದ ಅತಿ ದೊಡ್ಡ ಗ್ರಾಹಕರ ಮಾರುಕಟ್ಟೆಯಾಗಿರುವ ಭಾರತೀಯ ಮಾರುಕಟ್ಟೆಯನ್ನು ಸುಲಭವಾಗಿ ಯಶಸ್ಸಿತ್ತ ದಾಪುಗಾಲು ಹಾಕುತ್ತಿದೆ. ಗ್ರಾಹಕರೊಂದಿಗೆ ನೇರ ಸಂವಹನ ಹೊಂದಲು ಹಾಗೂ ಗ್ರಾಹಕರ ವರ್ತನೆ-ನಡುವಳಿಕೆಯಲ್ಲಾಗುತ್ತಿರುವ ಇತ್ತೀಚಿನ ಬದಲಾವಣೆಗಳನ್ನು ಗುರುತಿಸಿ, ಅವರ ಅವಶ್ಯಕತೆಗಳನ್ನು ಉತ್ಕೃಷ್ಟ ಗುಣಮಟ್ಟದ ವಸ್ತು ಮತ್ತು ಸೇವೆಯನ್ನು ಮಾರಾಟ ಮಾಡಲು ಪ್ರಯೋಜನಕಾರಿ ಎಂದು ವಿಜಯಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ಪ್ರಾಧ್ಯಾಪಕ ಪ್ರೊ. ಎಂ.ಎಸ್.ಖೊದ್ನಾಪೂರ ಹೇಳಿದರು.
ಅವರು ತಮಿಳನಾಡಿನ ಥೇಣಿಯಲ್ಲಿರುವ ನಡರ್ ಸರಸ್ವತಿ ಕಲಾ, ವಾಣಿಜ್ಯ ್ಘ ವಿಜ್ಞಾನ ಕಾಲೇಜು, (ಸ್ವಾಯತ್ತ) ಆಯೋಜಿಸಿದ್ದ ದಿ. 09 ರಂದು ಜರುಗಿದ “ವಾಣಿಜ್ಯಶಾಸ್ತ್ರ ಮತ್ತು ತಂತ್ರಜ್ಞಾನದಲ್ಲಿ ಸಮನ್ವಯತೆ: ಡಿಜಿಟಲ್ ಯುಗದಲ್ಲಿನ ನಾವಿನ್ಯತೆ” ವಿಷಯ ಕುರಿತು ಆಯೋಜಿಸಿದ್ದ ಆನಲೈನ್ ಅಂತರಾಷ್ಟ್ರೀಯ ವಿಚಾರ ಸಂಕೀರಣದಲ್ಲಿ ಸಂಶೋಧನಾ ಪ್ರಬಂಧ ಮಂಡಿಸಿ, ಮಾತನಾಡ ಕಂಪನಿಗಳ ಮಧ್ಯೆ ಎರು್ಡವ ಸ್ಪರ್ಧಾತ್ಮಕತೆಯನ್ನು ವಿಶ್ಲೇಷಿಸಿ, ವಸ್ತುವಿನಿಂದ ಮಾರಾಟದ ನಂತರ ಗ್ರಾಹಕರ ಅಭಿಪ್ರಾಯಗಳನ್ನು ಪಡೆದು, ಅವರ ಆಶೋತ್ತರಗಳಿಗೆ ವಸ್ತುವಿನ ಬಣ್ಣ, ರಚನೆ, ಮಾದರಿ, ಗಾತ್ರ, ಬೆಲೆ, ಗುಣಮಟ್ಟ, ಫ್ಯಾಶನ್ ಮತ್ತು ವಸ್ತು ವೈವಿಧ್ಯತೆಯೊಂದಿಗೆ ಮಾರಾಟ ಮಾಡಲು ಈ ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್ ತಂತ್ರಗಾರಿಕೆಯಿಂದ ಸಾಧ್ಯವಾಗುತ್ತದೆ ಎಂದು ಎಂ.ಎಸ್.ಖೊದ್ನಾಪೂರ ಅವರು ಅಭಿಪ್ರಾಯಪಟ್ಟರು.
ಅವರು ತಮ್ಮ ಸಂಶೋಧನಾ ಪ್ರಬಂಧ ಮಂಡಿಸುತ್ತ, ಆರಂಭದಲ್ಲಿ ಆಮೆಗತಿಯಲ್ಲಿ ಪ್ರಾರಂಭಗೊಂಡ ಈ ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್, ಪ್ರಸ್ತುತ 2023 ರ ಡಿಸೆಂಬರ ಕೊನೆಯ ವೇಳೆಗೆ ಜಗತ್ತಿನ ಜನಸಂಖ್ಯೆಯ ಶೇ 59 ರಷ್ಟು ಅಂದರೆ ಸುಮಾರು 4.76 ಶತಕೋಟಿ ಸಾಮಾಜಿಕ ಬಳಕೆದಾರರಿದ್ದರು. ಇಂದಿನ ಕೃತಕ ಬುದ್ಧಿಮತ್ತೆಯ ಸಹಾಯದಿಂದ ಸಾಮಾಜಿಕ ಮಾಧ್ಯಮ ಮಾರ್ಕೆಟಿಂಗ್, ಮಾರುಕಟ್ಟೆ ಕ್ಷೇತ್ರದಲ್ಲಿ ಅಮೂಲಾಗ್ರ ಸುಧಾರಣೆಗಳನ್ನು ತಂದು 2025 ರ ವೇಳೆಗೆ ಅದು ಜಗತ್ತಿನ ಒಟ್ಟು ವ್ಯವಹಾರದ ಪ್ರಮಾಣದಲ್ಲಿ 230 ಬಿಲಿಯನ್ ಡಾಲರನಷ್ಟು ವ್ಯವಹಾರವು ಹೊಂದಬಹುದೆಂದು ಅಂದಾಜಿಸಲಾಗಿದೆ. ಇಂದಿನ ಬದಲಾಗುತ್ತಿರುವ ಗ್ರಾಹಕ ಮಾರುಕಟ್ಟೆಯಲ್ಲಿ ಸಾಮಾಜಿಕ ಮಾಧ್ಯಮಗಳು ತಮ್ಮದೇ ಅಮೂಲ್ಯವಾದ ಕೊಡುಗೆಯನ್ನು ನೀಡುತ್ತಿವೆ. ಆದರೆ ಇಂದು ಸಾಮಾಜಿಕ ಮಾಧ್ಯಮದ ಮಾರ್ಕೆಟಿಂಗ್ ವ್ಯವಹಾರಗಳಲ್ಲಿ ಸೈಬರ್ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅದಕ್ಕಾಗಿ ಗ್ರಾಹಕರಿಗೆ ಸೂಕ್ತ ಭದ್ರತೆ, ಸುರಕ್ಷತೆ ಮತ್ತು ಹಣ ಕಳೆದುಕೊಳ್ಳದಂತೆ ನೋಡಿಕೊಳ್ಳಬೇಕಾಗಿರುವದು ಅತಿ ಅವಶ್ಯಕವಾಗಿದೆ ಎಂದು ಹೇಳಿದರು.
ಎರಡನೇಯ ಗೋಷ್ಠಿಯ ಅಧ್ಯಕ್ಷತೆಯನ್ನು ಬೆಂಗಳೂರಿನ ಅಂಬೇಡ್ಕರ ಇನಸ್ಟಿಟ್ಯೂಟ್ ಆಫ್ ಟೆಕ್ನಾಲಾಜಿ ಪ್ರೊ. ಡಾ. ಎಸ್. ಭಾಸ್ಕರನ್, ಸೇಲಂನ ಸರ್ಕಾರಿ ಕಲಾ ಕಾಲೇಜಿನ ಪ್ರೊ. ಎಸ್. ಸುರೇಶ ಬಾಬು ಅವರು ವಹಿಸಿದ್ದರು. ಈ ಆನಲೈನ್ ವಿಚಾರಸಂಕೀರಣದಲ್ಲಿ ದೇಶದ ಸುಮಾರು 350 ಕ್ಕೂ ಹೆಚ್ಚು ಪ್ರಾಧ್ಯಾಪಕರು ಹಾಗೂ ಸಂಶೋಧನಾರ್ಥಿಗಳು ಭಾಗವಹಿಸಿದ್ದರು.