ವಿಜಯಪುರ 22: ಉದಾರವಾದಿ ಜಗತ್ತಿನಲ್ಲಿ ದುರ್ಬಲರಿಗೆ ಸಾಮಾಜಿಕ ಭದ್ರತೆ ಕಡಿಮೆಯಾಗಿದ್ದು ಅವರ ಏಳಿಗೆಗಾಗಿ ಪಿಂಚಣಿ. ಆರೋಗ್ಯ ರಕ್ಷಣೆ. ಆರ್ಥಿಕ ಸಬಲತೆಗಾಗಿ.ಮೂಲಭೂತ ಅವಶ್ಯಕತೆ ಒದಗಿಸಿ. ಸಾಮಾಜಿಕ ಅಸಮಾನತೆ ನೀಗಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಂಡಿದ್ದು. ಅವುಗಳ ಮೌಲ್ಯಮಾಪನಕ್ಕೆ ಸಾಮಾಜಿಕ ನ್ಯಾಯ ದಿನಾಚರಣೆ ಅತ್ಯವಶ್ಯಕ ಎಂದು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಅಧಿಕಾರಿ ರಾಹುಲ್ ಡೊಂಗ್ರೆ ನುಡಿದರು.
ದಿ. 20 ರಂದು ಮದ್ಯಾಹ್ನ 03 ಘಂಟೆಗೆ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ.ಸಮಾಜಕಾರ್ಯ ವಿಭಾಗ. ನೆಹರು ಯುವ ಕೇಂದ್ರ ಹಾಗೂ ಯುಥ್ ಯುನಿವರ್ಸಲ್ ವ್ಹಾಲೆಂಟರಿ ಅಸೋಸಿಯೇಶನ್ (ಯುವ) ವಿಜಯಪುರ ಇವರುಗಳ ಸಂಯುಕ್ತಾಶ್ರಯದಲ್ಲಿ ಸಮಾಜ ಕಾರ್ಯ ವಿಭಾಗದ ಸಭಾಂಗಣದಲ್ಲಿ ಏರಿ್ಡಸಿದ್ದ ಕಾರ್ಯಕ್ರಮದಲ್ಲಿ "ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ" ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿದ ಅವರು.
ಭಾರತ ವಿಶ್ವದಲ್ಲಿ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಒಂದಾಗಿದ್ದು. ವೈವಿಧ್ಯತೆಗೆ ಹೆಸರುವಾಸಿಯಾಗಿದೆ. ವಿವಿಧ ಜಾತಿ.ಧರ್ಮ.ವರ್ಗ.ವರ್ಣ.ಸಂಸ್ಕೃತಿ.ಲಿಂಗ.ಪ್ರದೇಶ.ಬಣ್ಣ.ಚರ್ಮದ ರಚನೆ. ಉಡುಗೆ ತೊಡುಗೆ ಆಹಾರ ಕ್ರಮಗಳಲ್ಲಿ ಭಿನ್ನತೆ ಇದ್ದು. ಕೆಲವೊಮ್ಮೆ ನ್ಯಾಯವನ್ನೇ ಏಕೈಕ ಗುರಿಯಾಗಿ ಹೊಂದಿರುವ ದೇಶಕ್ಕೆ ಅಡೆತಡೆಗಳು ಎದ್ದು ಕಾಣುತ್ತವೆ. ಈ ಸಮಸ್ಯೆಗಳನ್ನು ನಿವಾರಿಸಿ. ತನ್ನ ನಾಗರಿಕರಿಗೆ ಸಾಮಾಜಿಕ ನ್ಯಾಯ ಮತ್ತು ಮಾನವ ಹಕ್ಕುಗಳನ್ನು ಉತ್ತೇಜಿಸಲು ಭಾರತ ಸರ್ಕಾರ ವಿವಿಧ ಕ್ರಮಗಳನ್ನು ಕೈಗೊಂಡಿದ್ದು ಸಮುದಾಯದ ಭಾಗವಹಿಸುವಿಕೆ. ಮತ್ತು ವೈಯಕ್ತಿಕ ಬದ್ಧತೆಯನ್ನು ಒಟ್ಟುಗೂಡಿಸುವ ಸಮಗ್ರ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಉಪನ್ಯಾಸಕರಾಗಿದ್ದ, ನಿಕಟಪೂರ್ವ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಹಾಗೂ ನ್ಯಾಯವಾದಿ ದಾನೇಶ ಅವಟಿ ಮಾತನಾಡಿ, ದೇಶಕ್ಕೆ ಸ್ವಾತಂತ್ರ್ಯ ಬಂದು 75ವರ್ಷಗಳು ಗತಿಸಿದರು ಶಿಕ್ಷಣ ವಿಜ್ಞಾನ, ತಂತ್ರಜ್ಞಾನದಲ್ಲಿ ಮುಂದುವರೆದಿದ್ದರು, ನಾವಿನ್ನು ಸಾಮಾಜಿಕ ಅಸಮಾನತೆ ಕುರಿತು ಮಾತನಾಡುತ್ತಿರುವುದು ವಿಷಾಧನೀಯ. ಪ್ರಪಂಚದ ಎಲ್ಲ ದೇಶಗಳಲ್ಲಿ ವಿವಿಧ ಮುಖಗಳಿಂದ ಸಾಮಾಜಿಕ ಅಸಮಾನತೆ ತಾಂಡವಾಡುತ್ತಿದೆ. ವರ್ಗ, ವರ್ಣ, ಲಿಂಗ-ಬೇಧ, ಬಡವ-ಶ್ರೀಮಂತ ಗಲಭೆ, ಯುದ್ಧಗಳು ಜನರ ನಿದ್ದೆ ಗೆಡಿಸಿವೆ. ಇವುಗಳ ಪರಿಹಾರಕ್ಕೆ ಶಾಂತಿ ಸೌಹಾರ್ದತೆ ಭ್ರಾತೃತ್ವ ನೆಲೆಗೊಳಲು ದಾರ್ಶನಿಕರ ಉಪದೇಶ ಸಂವಿಧಾನದ ಸದಾಶಯಗಳ ಅಳವಡಿಕೆಯೆ ಮೂಲಮಂತ್ರವಾಗಿ ಶಾಂತಿ ನೆಮ್ಮದಿ ಕಾಣಲು ಸಾಧ್ಯವೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಮಾಜಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ.ಜಿ.ಬಿ. ಸೋನಾರ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ, ಸಾಮಾಜಿಕ ಅಸಮಾನತೆಯನ್ನು ಪಡೆದು ಹಾಕುವ ಪ್ರಯತ್ನಗಳಿಗೆ ಉತ್ತೇಜನ ನೀಡಬೇಕಾಗಿದ್ದು, ಸಾಮಾಜಿಕ ನ್ಯಾಯದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕಾಗಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ 2007 ಫೆಬ್ರುವರಿ 20ರಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಆಚರಿಸಲು ನಿರ್ಣಯ ಕೈಗೊಳ್ಳಲಾಯಿತು ಹಾಗೂ 2009 ರಲ್ಲಿ ಈ ದಿನವನ್ನು ಆಚರಿಸಲು ಅನುಮೋಧಿಸಲಾಯಿತು. ವಿವಿಧ ದೇಶಗಳ ಪ್ರತಿ ಸಮಾಜದಲ್ಲಿ ಐಕ್ಯತೆ ಸಾಮರಸ್ಯತೆ ಸೌಹಾರ್ದತೆ, ಮೂಲ ಭೂತ ಹಕ್ಕುಗಳ ನ್ಯಾಯವಿದ್ದರೆ ಸಮಾಜದ ಮತ್ತು ರಾಷ್ಟ್ರದ ಅಭಿವೃದ್ಧಿಯಾಗುತ್ತದೆ. ದೇಶಗಳು ಅಭಿವೃದ್ಧಿಯಾದರೆ ವಿಶ್ವವೇ ಅಭಿವೃದ್ಧಿಯಾಗುತ್ತದೆ ಎಂಬುದು. ವಿಶ್ವ ಸಂಸ್ಥೆಯ ಸದಾಭಿಪ್ರಾಯವಾಗಿದ್ದು ಇದನ್ನು ನಾವೆಲ್ಲರು ಗೌರವಿಸಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರೆ.
ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದ ಸಹಾಯಕ ಪ್ರಾಧ್ಯಪಕಿ ಡಾ. ಕಲಾವತಿ ಎಚ್. ಕಾಂಬಳೆ ಮಾತನಾಡಿ, ಜಗತ್ತಿನಾದ್ಯಂತ ಲಿಂಗ, ವಯಸ್ಸು, ಜನಾಂಗೀಯ ಉದ್ದೇಶ ಧರ್ಮ, ಸಂಸ್ಕೃತಿ ಕುರಿತು. ಕಚ್ಚಾಟ ಬಡತನ ನಿರುದ್ಯೋಗ ಅನಕ್ಷರತೆ, ವಲಸೆ, ಆರ್ಥಿಕ, ಮುಂತಾದ ಸಾಮಾಜಿಕ ಸಮಸ್ಯೆಗಳು ಗಂಭೀರವಾಗಿದ್ದು, ಇವುಗಳನ್ನು ತೊಡೆದು ಹಾಕಲು ಮತ್ತು ಅಂತಹ ಪ್ರಯತ್ನಗಳಿಗೆ ಪ್ರೋತ್ಸಾಹಿಸಲು ಸಾಮಾಜಿಕ ಅಸಮಾನತೆಯನ್ನು ನೀಗಿಸಲು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಪೆಭ್ರುವರಿ 20 ರಂದು ವಿಶ್ವ ಸಾಮಾಜಿಕ ನ್ಯಾಯ ದಿನವನ್ನು ಆಚರಿಸಲಾಗುತ್ತದೆ. ಜನತೆಯ ಶಾಂತಿಯುತ ಮತ್ತು ಸಮೃದ್ಧ ಸಹ ಬಾಳ್ವೆಗೆ ಹಾಗೂ ರಾಷ್ಟ್ರಗಳ ಅಭಿವೃದ್ಧಿಗೆ ಸಾಮಾಜಿಕ ನ್ಯಾಯವು ಅತ್ಯವಶ್ಯವಾಗಿದ್ದು, ಸಾಮಾಜಿಕ ನ್ಯಾಯವು ರಾಷ್ಟ್ರಗಳಲ್ಲಿ ಶಾಂತಿಯುತ ಮತ್ತು ಸಮೃದ್ಧ ಸಹಭಾಳ್ವೆಗೆ ದಾರೀದೀಪವಾಗಿದೆ.
ವೇದಿಕೆಯಲ್ಲಿ ಸಾಮಾಜ ಕಾರ್ಯ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ. ರಮೇಶ ರಂ. ಸೋನಕಾಂಬಳೆ, ಶಿವಲಿಂಗ ಮೇತ್ರಿ, ಶರಣು ಕೊಡಬಾಗಿ, ಶ್ರೀನಾಥ ಪಾಟೀಲ ಉಪಸ್ಥಿತರಿದ್ದು, ಸಾಂದರ್ಭೀಕವಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಭಕ್ತಿಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಶೃತಿ ಭಜಂತ್ರಿ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಭೂಮಿಕ ಕೊಣ್ಣೂರ ನಿರೂಪಿಸಿದರು. ಲಕ್ಷ್ಮೀ ಸಂದಿಮನಿ ಸ್ವಾಗತಿಸಿದರು. ಪ್ರತಿಭಾ ಆಲಮೇಲ ವಂದಿಸಿದರು.