ಪಕ್ಷ ಮತ್ತು ಅಧಿಕಾರಕ್ಕಿಂತ ಸಮಾಜ ದೊಡ್ಡದು : ದಗರ್ೆ

ಲೋಕದರ್ಶನ ವರದಿ

ಬೆಳಗಾವಿ, 13: ಪಕ್ಷ ಮತ್ತು ಅಧಿಕಾರಕ್ಕಿಂತ ಸಮಾಜ ದೊಡ್ಡದು. ನಾಡಿನ ಘನತೆಗಾಗಿ. ಸಮಾಜದ ಸಂಘಟನೆಗಾಗಿ. ಧರ್ಮದ ಮಾನ್ಯತೆಗಾಗಿ ಬಿಜೆಪಿ ಲಿಂಗಾಯತರು ಬಸವ ಲಿಂಗಾಯತರಾಗಬೇಕು. ಧರ್ಮದ ಹೋರಾಟಕ್ಕೆ ಬೆಂಬಲಿಸಬೇಕು ಎಂದು ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದಗರ್ೆ ಹೇಳಿದ್ದಾರೆ.

ಜನೆವರಿ 15 ರಂದು 10 ಕ್ಕೆ ನಗರದ ಶ್ರೀ ಬಸವೇಶ್ವರ ವೃತ್ತದಲ್ಲಿರುವ ಶ್ರೀ ಬಸವೇಶ್ವರ ಉದ್ಯಾನದಲ್ಲಿ ಹಮ್ಮಿಕೊಂಡಿರುವ ಬಸವ ಧರ್ಮ ಸಂಸ್ಥಾಪನಾ ದಿನ ಹಾಗೂ ಷಟಸ್ಥಲ ಧ್ವಜ ಜಾಗೃತಿ ಅಭಿಯಾನ ಆಂದೋಲನದ ಸಾಹಿತ್ಯವನ್ನು ಭಾನುವಾರದಂದು ನಗರದ ಡಾ. ಬಾಬಾಸಾಹೇಬ ಅಂಬೇಡ್ಕರರ ಉದ್ಯಾನದಲ್ಲಿ ಬಿಡುಗಡೆ ಮಾಡಿ, ಅವರು ಮಾತನಾಡಿದರು.

ಸ್ವತಂತ್ರ ಧರ್ಮದ ಮಾನ್ಯತೆಯು ಇಡಿ ಬಸವ ಸಮಾಜದ ಗೌರವ, ಘನತೆ, ಅಭಿಮಾನದ ಹಾಗೂ ಅಸ್ತಿತ್ವದ ಪ್ರಶ್ನೆಯಾಗಿದೆ. ಸಮಾಜದ ಗೌರವಕ್ಕಿಂತ ಪಕ್ಷ ಮತ್ತು ಅಧಿಕಾರ ಮುಖ್ಯ ಅಲ್ಲ. ಸಮಾಜದ ನಾಯಕರು ಅಧಿಕಾರದ ಲಾಲಸೆ ಬಿಟ್ಟು ಸಮಾಜದ ಪರ ನಿಲ್ಲಬೇಕು ಎಂದು ಮನವಿ ಮಾಡಿದರು.

ಲಿಂಗಾಯತ ಧರ್ಮದ ಹೋರಾಟ ವಿರೋಧಿಸಿದವರಿಗೆ ಮುಂದಿನ ದಿನಗಳಲ್ಲಿ ಭವಿಷ್ಯ ಇಲ್ಲ. 2018 ರಲ್ಲಿ ನಡೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಧರ್ಮದ ಹೋರಾಟಕ್ಕೆ ಬೆಂಬಲಿಸಿದ್ದೆ ಆ ಪಕ್ಷದ  ಸೋಲಿಗೆ ಕಾರಣವೆಂದು ಬಿಂಬಿಸುತ್ತಿರುವದು ಧರ್ಮ ವಿರೋಧಿಗಳ ಕುತಂತ್ರವಾಗಿದೆ. ಧರ್ಮವನ್ನು ಬೆಂಬಲಿಸಿದ್ದವರು ಇಂದು ಅಧಿಕಾರದಲ್ಲಿದ್ದಾರೆ. ಧರ್ಮ ವಿರೋಧಿಸಿದ್ದವರು ಇಂದಿಗೂ ಬಹುಮತಕ್ಕಾಗಿ ತಟ್ಟೆ ಹಿಡಿದುಕೊಂಡು ಭಿಕ್ಷೆ ಬೇಡುತ್ತಿದ್ದಾರೆ ಎಂಬ ಸತ್ಯವನ್ನು ಒಪ್ಪಿಕೊಳ್ಳಬೇಕಾಗಿದೆ ಎಂದು ವಿಶ್ಲೇಷಿಸಿದರು.

ಧರ್ಮದ ಮಾನ್ಯತೆಯನ್ನು ವಿರೋಧಿಸಿಯೂ ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ಯಾರಾದರೂ ಭಾವಿಸಿದ್ದರೆ ಅದು ಅವರ ಭ್ರಮೆ ಮಾತ್ರ. ಇದು ಗುಡಿ ಗುಂಡಾರ ಕಟ್ಟಿಸುವ ಸಂಪ್ರದಾಯದ ನೆಲ ಅಲ್ಲ. ಅನುಭವ ಮಂಟಪ ಕಟ್ಟುವ ವಿನೂತನ ಸಂಸ್ಕೃತಿಯನ್ನು ಹುಟ್ಟು ಹಾಕಿದ ಬಸವಾದಿ ಶರಣರ ಕರ್ಮಭೂಮಿ. ಈ ನೆಲದಲ್ಲಿ ಬಸವ ವಿರೋಧಿಗಳಿಗೆ ಉಳಿಗಾಲ ಇಲ್ಲ. ಮನುವಾದಿಗಳ ವಿರೋಧವನ್ನು ಮೆಟ್ಟಿ ನಿಂತು ಬಸವ ಧರ್ಮ ಕಂಗೋಳಿಸುತ್ತದೆ ಎಂಬುದರಲ್ಲಿ ಯಾವ ಸಂದೇಹವೂ ಬೇಡ ಎಂದರು.

ಹಿರಿಯ ಸಾಹಿತಿ ಹಿಮ್ಮಡಗಿ, ಶಂಕರ ಬಾಗೇವಾಡಿ, ನ್ಯಾಯವಾದಿ ಚನ್ನಬಸಪ್ಪ ಬಾಗೇವಾಡಿ, ರಾಷ್ಟ್ರೀಯ ಬಸವ ಸೇನೆಯ ನಾಗೇಶ ಪಾಟೀಲ, ಯಲ್ಲಪ್ಪ ಹುದಲಿ ಮುಂತಾದವರು ಉಪಸ್ಥಿತರಿದ್ದರು.