ಗೌಡರಿಂದ ಸಮಾಜ ಒಡೆಯುವ ಕೆಲಸ


ಅಖಂಡ ಕನರ್ಾಟಕ ನಿಮರ್ಾಣವಾದ ಮೇಲೆ ಇದುವರೆಗೂ ಯಾವತ್ತೂ ಪ್ರತ್ಯೇಕತೆ ಕೂಗು ಕೇಳಿ ಬಂದಿರಲಿಲ್ಲ,. ಆದರೆ ಕುಮಾರ ಸ್ವಾಮಿ ಮುಖ್ಯಮಂತ್ರಿ ಆದ ಮೇಲೆ ಇದು ಚಾಲ್ತಿಗೆ ಬಂದಿದೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಆಗ್ರಹಿಸಿದ್ದಾರೆ. 

ಬೆಂಗಳೂರಿನಲ್ಲಿ ಮಾತನಾಡಿದ ಯಡಿಯೂರಪ್ಪ, ಮಾಧ್ಯಮಗಳ ವಿರುದ್ಧ ಸಿಎಂ ಹುಚ್ಚಾಪಟ್ಟೆ ಮಾತನಾಡುತ್ತಿದ್ದಾರೆ, ದೇವೇಗೌಡರ ಹುಕುಂ ಇಲ್ಲದೇ ಮಗ ಕುಮಾರಸ್ವಾಮಿ ಅವರು ಯಾವ ಹೇಳಿಕೆ ನೀಡುವುದಿಲ್ಲ ಎಂದು ಆರೋಪಿಸಿದ್ದಾರೆ. ಇದಕ್ಕೆ ದೇವೇಗೌಡರ ಕುಮ್ಮಕ್ಕಿದೆ ಎಂದು ದೂರಿದ್ದಾರೆ. 

ಕುಮಾರ ಸ್ವಾಮಿಯವರು ಜಾತಿ ವಿಷ ಬೀಜ ಬಿತ್ತಿ ಸಮಾಜ ಒಡೆಯುವ ಕೆಲಸ ಮಾಡುತ್ತಿರುವಾದ ದೇವೇಗೌಡರು ಏಕೆ ಮೌನ ವಹಿಸಿದ್ದಾರೆ ಎಂದು ಪ್ರಶ್ನಿಸಿದ್ದಾರೆ,  

ಇದುವರೆಗೂ ಯಾವ ಮುಖ್ಯಮಂತ್ರಿಯೂ ಈ ರೀತಿ ಮಾಡಿರಲಿಲ್ಲ,  ಕುಮಾರಸ್ವಾಮಿ ಸೊಕ್ಕಿನ, ಧಿಮಾಕಿನ ಮಾತಿನ ಮೂಲಕ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಯಡಿಯೂರಪ್ಪ ಆಪಾದಿಸಿದ್ದಾರೆ.