ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆ


ಲೋಕದರ್ಶನವರದಿ

ಬ್ಯಾಡಗಿ26: ಸರಕಾರಿ ಹಾಗೂ ಖಾಸಗಿ ವಲಯಗಳಲ್ಲಿ ಕೆಲಸ ಮಾಡುತ್ತಿರುವ ಜನತೆಯ ಹೆಸರುಗಳು ಎನ್ಆರ್ಇಜಿ ಯೋಜನೆಯಡಿ ಕೂಲಿಕಾಮರ್ಿಕರ ಜಾಬ್ಕಾರ್ಡನಲ್ಲಿ ಹೆಸರು ನೊಂದಾವಣೆಯಾಗಿದ್ದರೇ ಅಂಥಹ ಹೆಸರುಗಳ ಬಗ್ಗೆ ಫಲಾನುಭವಿಗಳು ಗ್ರಾ.ಪಂಗೆ ಮಾಹಿತಿ ನೀಡುವ ಮೂಲಕ ಅನುದಾನದ ದುರ್ಬಳಕೆಯನ್ನು ತಡೆಗಟ್ಟಲು ಸಹಕರಿಸಬೇಕೆಂದು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಪ್ರದೀಪ ಗಣೇಶ್ಕರ ಹೇಳಿದರು.

   ಅವರು ತಾಲೂಕಿನ ಕೆರೂಡಿ ಗ್ರಾಮದಲ್ಲಿ ಜರುಗಿದ ಪ್ರಸಕ್ತ ಸಾಲಿನ ಎನ್ಆರ್ಇಜಿ ಯೋಜನೆಯ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮ ಸಭೆಯಲ್ಲಿ ಮಾತನಾಡಿದರು. ಈ ಯೋಜನೆಯಡಿ ಆಕಸ್ಮಿಕವಾಗಿ ಉದ್ಯೋಗದಲ್ಲಿ ನಿರತರಾದವರ ಹೆಸರಿಗೆ ಕೂಲಿ ಹಣವನ್ನು ಜಮಾ ಮಾಡಿದರೇ ಅದಕ್ಕೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಯೇ ನೇರ ಹೊಣೆಗಾರರಾಗುತ್ತಾರೆ. ಕಾರಣ ವಿವಿಧ ವೈಯುಕ್ತಿಕ ಹಾಗೂ ಸಮುದಾಯ ಕಾಮಗಾರಿಗಳಲ್ಲಿ ಜಾಬ್ಕಾರ್ಡ ಹೊಂದಿರುವ ಕೂಲಿಕಾಮರ್ಿಕರು ತಮ್ಮ ಕುಟುಂಬಗಳಲ್ಲಿ ಉದ್ಯೋಗದಲ್ಲಿ ನಿರತರಾದ ಸದಸ್ಯರಿದ್ದಲ್ಲಿ ಅವರ ಬಗ್ಗೆ ಮಾಹಿತಿ ನೀಡುವ ಮೂಲಕ ಅರ್ಹ ಫಲಾನುಭವಿಗಳು ಮಾತ್ರ ಈ ಯೋಜನೆಯ ಸದುಪಯೋಗವನ್ನು ಪಡೆದುಕೊಳ್ಳಲು ಸಹಕಾರ ನೀಡಬೇಕೆಂದು ಕೋರಿದರು.

    ತಾಲೂಕಾ ಸಾಮಾಜಿಕ ಲೆಕ್ಕ ಪರಿಶೋಧನೆಯ ಸಂಯೋಜಕ ಬಸವರಾಜ ಅಮಾತಿ ಮಾತನಾಡಿ ಕಳೆದ 6 ತಿಂಗಳಲ್ಲಿ ಕೆರೂಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಒಟ್ಟು 84 ಕಾಮಗಾರಿಗಳನ್ನು ನಡೆಸಲಾಗಿದ್ದು, 11.90 ಲಕ್ಷ ರೂ.ಗಳನ್ನು ಖಚರ್ು ಮಾಡಲಾಗಿದೆ. ವಿವಿಧ ಇಲಾಖೆಯಡಿ ಕೈಗೊಂಡ ಕಾಮಗಾರಿಗಳಲ್ಲಿ ಲೋಪದೋಷಗಳು ಕಂಡು ಬಂದಿದ್ದು, ಅದಕ್ಕಾಗಿ 2.67 ಲಕ್ಷ ರೂ.ಗಳನ್ನು ಆಕ್ಷೇಪಣೆಯಲ್ಲಿ ಇಡಲಾಗಿದೆ. 43 ಸಾವಿರ ರೂ.ಗಳನ್ನು ವಸೂಲಾತಿಗೆ ಗಾಮ ಸಭೆಯ ಮೂಲಕ ಸೂಚಿಸಲಾಗಿದೆ ಎಂದರು.

ನೀರಿಗಾಗಿ ಗಲಾಟೆ: ಸಭೆಯ ಮಧ್ಯ ಗ್ರಾಮದ ಹೊಂಡದ ಕಾಮಗಾರಿ ಕುರಿತಂತೆ ವಿಷಯ ಚಚರ್ೆಯಾಗುತ್ತಿದ್ದಂತೆ, ಕುಡಿಯುವ ನೀರಿನ ಸಮಸ್ಯೆ ಗ್ರಾಮದಲ್ಲಿ ತೀವ್ರವಾಗಿದ್ದು ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಗ್ರಾ.ಪಂ.ಆಡಳಿತ ಮಂಡಳಿ ವಿಫಲವಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದರು. ಈಗಾಗಲೇ ಗ್ರಾಮದ ಜನರು 9 ದಿನಕ್ಕೊಮ್ಮೆ ಕುಡಿಯುವ ನೀರನ್ನು ಪಡೆಯುವಂತಾಗಿದೆ. ಇನ್ನೂ ಕೆಲವೊಂದು ವಾಡರ್ುಗಳಲ್ಲಿ ನೀರಿಗಾಗಿ ಹರಸಾಹಸ ಪಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ತಾಲೂಕಾ ಆಡಳಿತ ಸೂಕ್ತ ಕ್ರಮ ಕೈಕೊಳ್ಳುವ ಮೂಲಕ ಗ್ರಾಮದಲ್ಲಿ ಉಂಟಾಗಿರುವ ನೀರಿನ ಸಮಸ್ಯೆಯನ್ನು ಬಗೆ ಹರಿಸಬೇಕೆಂದು ಒತ್ತಾಯಿಸಿದರು.

       ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಪ್ರದೀಪ ಗಣೇಶ್ಕರ ಈಗಾಗಲೇ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಸಲು ಕೊಳವೆ ಭಾವಿಗಳನ್ನು ಕೊರೆಸಿದ್ದರೂ ಸಹ ನೀರು ಬಾರದಂತಾಗಿದೆ. ಈ ಬಗ್ಗೆ ಸ್ಥಳೀಯ ಶಾಸಕರಿಗೂ ಹಾಗೂ ಮೇಲಾಧಿಕಾರಿಗಳಿಗೂ ಮನವಿಯನ್ನು ಸಲ್ಲಿಸಿದ್ದು, 15 ದಿನಗಳಲ್ಲಿ ಈ ಕುರಿತು ಕ್ರಮ ವಹಿಸಿ ಸಮಸ್ಯೆ ಪರಿಹಾರಕ್ಕೆ ಮುಂದಾಗುವ ಭರವಸೆ ದೊರಕಿದೆ ಎಂದು ತಿಳಿಸಿದರು.

   ಸಭೆಯ ಅಧ್ಯಕ್ಷತೆಯನ್ನು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ.ವಿಜಯಕುಮಾರ ವಹಿಸಿದ್ದರು. ಗ್ರಾ.ಪಂ.ಅಧ್ಯಕ್ಷೆ ಲಲಿತಾ ಪಾಟೀಲ, ಉಪಾಧ್ಯಕ್ಷ ಮಂಜಪ್ಪ ಅಂಗರಗಟ್ಟಿ, ಎನ್ಆರ್ಇಜಿ ಯೋಜನೆಯ ಸಹಾಯಕ ನಿದರ್ೇಶಕ ಪರಶುರಾಮ ಪೂಜಾರ, ಕೃಷಿ ಸಹಾಯಕ ಅಧಿಕಾರಿ ಜಿ.ಎಂ.ಹಿಮಾಚಲ, ತೋಟಗಾರಿಖೆ ಇಲಾಖೆಯ ಕೃಷಿ ಅಧಿಕಾರಿ ಅಶೋಕ ಕೊಪ್ಪದ, ಇಂಜನೀಯರ ಕೃಷ್ಣಾ ನಾಯಕ, ನಾಗರಾಜ ತೆವರಿ ಹಾಗೂ ಗ್ರಾಮ ಪಂಚಾಯತಿಯ ಸರ್ವ ಸದಸ್ಯರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.