ಬೆಳಗಾವಿ, 16: ಇಂದಿನ ಜಾಗತೀಕರಣದ ಯುಗದಲ್ಲಿ ಜನ ತಮ್ಮ ಆಥರ್ಿಕ ಸಂಕಷ್ಟಗಳನ್ನು ನಿವಾರಿಸಕೊಳ್ಳಲು ಸಹಕಾರ ಸಂಘಗಳ ಮೇಲೆ ಅವಲಂಬಿತವಾಗಿರುವುದು ಸಹಕಾರ ರಂಗದ ಪ್ರಸ್ತುತತೆಯನ್ನು ತಿಳಿಸುತ್ತದೆ ಎಂದು ಸಂಗೊಳ್ಳಿ ರಾಯಣ್ಣ ಘಟಕ ಮಹಾವಿದ್ಯಾಲಯದ ಉಪಪ್ರಾಚಾರ್ಯರಾದ ಪ್ರೊ. ಬಿ.ಎಸ್. ನಾವಿಯವರು ಆಶಯ ವ್ಯಕ್ತಪಡಿಸಿದರು.
ನಗರದ ಬನಶಂಕರಿ ಸಭಾಂಗಣದಲ್ಲಿ ಸೋಮವಾರ 16 ರಂದು ಗುರು ವಿವೇಕಾನಂದ ವಿವಿಧ ಉದ್ಧೇಶಗಳ ಸಹಕಾರಿ ಸಂಘ ನಿಯಮಿತದಿಂದ ಆಯೋಜಿಸಲಾಗಿದ್ದ, 7ನೇ ಸರ್ವಸಾಧಾರಣ ಸಭೆ ಹಾಗೂ ವಿದ್ಯಾಥರ್ಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,
ಸಹಕಾರ ಸಂಘಗಳಲ್ಲಿ ಜನರು ಹೂಡಿಕೆ ಮಾಡಿರುವ ಹಣವನ್ನು ಬೇರೆಡೆ ವಿನಿಯೋಗಿಸುವಾಗ ಸಾಮಾಜಿಕ ಜವಾಬ್ದಾರಿ ಹಾಗೂ ಸಹಕಾರ ರಂಗದ ನೈತಿಕತೆ, ಸಾರ್ಥಕತೆಯ ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕು.
ಈ ದೃಷ್ಟಿಯಲ್ಲಿ ಬೆಳಗಾವಿ ನಗರದಲ್ಲಿರುವ ಗುರು ವಿವೇಕಾನಂದ ವಿವಿಧ ಉದ್ಧೇಶಗಳ ಸಹಕಾರ ಸಂಘ ನಿಯಮಿತವು ಈ ಭಾಗದ ಆಥರ್ಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಿದ ಶ್ಲಾಘನೀಯವಾದುದು, ಇದು ಎಲ್ಲ ಸಹಕಾರ ಸಂಘಗಳಿಗೆ ಮಾದರಿಯಾಗಲಿದೆ ಎಂದರು.
ಸಂಘವು ಸಮಾಜದ ವಿವಿಧ ಆಯಾಮಗಳಲ್ಲಿ ನಿರ್ವಹಿಸುತ್ತಿರುವ ಕಾರ್ಯವೈಖರಿಯ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಇಂದಿನ ದಿನಮಾನಗಳಲ್ಲಿ ಎಲ್ಲ ಹಣಕಾಸು ಸಂಸ್ಥೆಗಳು ಕೇವಲ ಲಾಭದ ದೃಷ್ಟಿಯಲ್ಲಿ ವ್ಯವಹರಿಸುತ್ತಿದ್ದು, ಸಾರ್ವಜನಿಕರಿಂದ ಸಂಗ್ರಹಿಸಿದ ಹಣವನ್ನು ಎಲ್ಲೆಲ್ಲೋ ಹೂಡಿಕೆ ಮಾಡಿ ಕೊನೆಗೆ ಮರಳಿ ಪಡೆಯದೆ ಗ್ರಾಹಕರಿಗೆ ಪಂಗನಾಮ ಹಾಕುವುದನ್ನು ಕಾಣತ್ತೇವೆ. ಗುರು ವಿವೇಕಾನಂದ ಸಹಕಾರಿ ಸಂಘವು ಕಳೆದ ಹಲವು ವರ್ಷಗಳಿಂದ ತನ್ನ ಕ್ಷೇತ್ರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದು, 'ಅ' ವರ್ಗವನ್ನು ಪಡೆದಿದೆ. ತಾನು ಗಳಿಸುರುವ ಲಾಭದಲ್ಲಿ ನೆರೆಹಾವಳಿ ಅಂಗವಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ 1 ಲಕ್ಷರೂ.ಗಳನ್ನು ಧಾನವಾಗಿ ನೀಡಿದ್ದು, ಅಲ್ಲದೇ ವಿದ್ಯಾಥರ್ಿಗಳ ಶೈಕ್ಷಣಿಕ ಸಮಸ್ಯೆಗಳಿಗೆ ಪರಿಹಾರಾರ್ಥವಾಗಿ ಪ್ರತಿವರ್ಷ ಪ್ರತಿಭಾ ಪುರಸ್ಕಾರ ಹೆಸರಿನಲ್ಲಿ ಸಾಕಷ್ಟು ವಿದ್ಯಾಥರ್ಿಗಳಿಗೆ ಹಣಕಾಸಿನ ನೇರವು ನೀಡುತ್ತಿರುವುದು ಸಮಾಜದ ಬಗ್ಗೆ ಸಂಘಕ್ಕಿರುವ ಕಾಳಜಿ ತೋರಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.
ಸಮಾರಂಭದಲ್ಲಿ ಸಂಘದ ಸದಸ್ಯರ 45 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಿ ವಿದ್ಯಾಥರ್ಿಗಳನ್ನು ಗೌರವಿಸಲಾಯಿತು.
ಈ ಸಮಯದಲ್ಲಿ ಸಂಘದ ಬಗ್ಗೆ ಸದಸ್ಯರು, ಪಿಗ್ಮಿ ಸಂಗ್ರಹಕಾರರು, ನಿದರ್ೇಶಕರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.
ಸಂಘದ ಅಧ್ಯಕ್ಷ ಡಾ. ನಾರಾಯಣ ನಾಯ್ಕ ಮಾತನಾಡಿ, ಗುರು ವಿವೇಕಾನಂದ ಸಹಕಾರ ಬ್ಯಾಂಕ್ ಸಾಮಾಜಿಕ ಸೇವೆಗಾಗಿ ಕಾರ್ಯನಿರ್ವಸುತ್ತಿದು, ಗ್ರಾಹಕರ ವಿಶ್ವಾಸ, ಪ್ರೀತಿ ಬೆಳೆಸುವಲ್ಲಿ ಯಶ್ವಸಿಯಾಗಿದೆ. ಆರಂಭದಿಂದ ಪ್ರತಿಭಾವಂತ ವಿದ್ಯಾಥರ್ಿಗಳಿಗೆ ವಿಶೇಷ ಕಾರ್ಯಕ್ರಮ ಆಯೋಜಿಸುತ್ತಿದೆ.
ವಿದ್ಯಾಥರ್ಿಗಳು ಇದರ ಸದುಪಯೋಗ ಪಡೆದುಕೊಂಡು ಜೀವನದ ಗುರಿ ತಲುಪಬೇಕೆಂದರು.
ಈ ಸಂದರ್ಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಮಹಾವೀರ ಜೈನ್, ನಿದರ್ೇಶಕ ವಾಯ್. ಬಿ. ಘಸಾರಿ, ಅಂಜನಕುಮಾರ ಗಂಡಗುದರಿ, ಭಾರತಿ ಶೆಟ್ಟಿಗಾರ, ರಾಜೇಶ ಗೌಡ, ಆನಂದ ರಾವ್, ಸತೀಶ ಮನ್ನಿಕೇರಿ, ನ್ಯವ್ಯಶ್ರೀ ಶೆಟ್ಟಿ ಪ್ರಾಥರ್ಿಸಿದರು. ಕಾರ್ಯದಶರ್ಿ ವಿಶಾಲ ಪಾಟೀಲ ಸ್ವಾಗತಿಸಿದರು ಸಿಬ್ಬಂದಿ ವರ್ಗ, ಪಿಗ್ಮಿ ಸಂಗ್ರಹಕಾರರು, ಸದಸ್ಯರು ಹಾಗೂ ಉಪಸ್ಥಿತರಿದ್ದರು. ಡಾ. ಮಲ್ಲೇಶ ದೊಡ್ಡಲಕ್ಕಣ್ಣವರ ನಿರೂಪಿಸಿದರು ನಿದರ್ೇಶಕ ಜಗದೀಶ ಹೆಗ್ಡೆ ವಂದಿಸಿದರು.