ಸರೆ ಸಂಸ್ಥೆಗೆ ಸೋಸಿಯಲ್ ಇಂಪ್ಯಾಕ್ಟ್ ಅವಾರ್ಡ ಪ್ರಶಸ್ತಿ

ಲೋಕದರ್ಶನ ವರದಿ

ಶಿರಹಟ್ಟಿ 15: ಉತ್ತರ ಕರ್ನಾಟಕದ ಎಲ್ಲ ಜಿಲ್ಲಾವಾರು ವಲಯದಲ್ಲಿ ಈ ಮೊದಲು ಸಮಾಜ ಏಳ್ಗೆಗಾಗಿ ಕಳೆದ 5ರಿಂದ 50 ವರ್ಷಗಳ ಕಾಲ ಪ್ರಾಮಾಣಿಕವಾಗಿ ಉತ್ತಮ ಕೆಲಸ ಮಾಡುತ್ತಾ ಬಂದಿರುವ ಸ್ವಯಂ ಸೇವಾ ಸಂಸ್ಥೆಗಳನ್ನು ಗುರುತಿಸಿ ಅಂಥಹ ಸಂಸ್ಥೆಗಳು ಇನ್ನು ಮುಂದೆ ಹೆಚ್ಚಿನ ಸಮಾಜ ಸೇವೆಯನ್ನು ಮಾಡುವುದಕ್ಕೋಸ್ಕರ ಅವುಗಳನ್ನು ಇನ್ನೂ ಅನೇಕ ಸಮಾಜದಲ್ಲಿ ಬದಲಾವಣೆ ತರುವ ಕೆಲಸ ಮಾಡುವ ಉದ್ದೇಶದಿಂದ ಅವುಗಳ ಮುಖ್ಯಸ್ಥರನ್ನು ಹಾಗೂ ಆ ಸಂಸ್ಥೆಗಳಿಗೆ ಬಲವರ್ದನೆ ಶಕ್ತಿ ತುಂಬಲು ಬೆಂಗಳೂರು ಮೂಲದ ರೀಚ್ ಫಾರ್ ಕಾಜ್ ಸಂಸ್ಥೆಯು ಒಟ್ಟು 220 ಸಂಸ್ಥೆಗಳನ್ನು ಪತ್ತೇ ಮಾಡಿ ಅವುಗಳ ಪೈಕಿ ಕೇವಲ 25 ಪ್ರಮಾಣಿಕ ಸೇವಾ ಸಂಸ್ಥೆಗಳನ್ನು ಆಯ್ಕೆ ಮಾಡಿ ಪ್ರಶಸ್ತಿ ಪ್ರಧಾನ ಮಾಡಿತು.

ಹುಬ್ಬಳ್ಳಿಯ ಚೇಂಬರ್ ಆಫ್ ಕಾಮರ್ಸ ಭವನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಈ ವರೆಗೆ ಸಮಾಜದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಾ ಬಂದ ಒಟ್ಟು 25 ಸಂಸ್ಥೆಗಳಲ್ಲಿ ಶಿರಹಟ್ಟಿಯ ಆಸರೆ ಅಂಗವಿಕಲರ ಕ್ಷೇಮಾಭಿವೃದ್ಧಿ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯು 8ನೇ ಸ್ಥಾನದಲ್ಲಿ ಆಯ್ಕೆಗೊಂಡು "ಸೋಸಿಯಲ್ ಇಂಪ್ಯಾಕ್ಟ್ ಅವಾರ್ಡ 2019 ಫಾರ್ ಬೆಸ್ಟ್ ಸೋಸಿಯಲ್ ವರ್ಕ ಪ್ರಶಸ್ತಿಯನ್ನು ಸಂಸ್ಥೆಯ ಅಧ್ಯಕ್ಷ ಫಕ್ಕೀರೇಶ ಮ್ಯಾಟಣ್ಣವರ ಹಾಗೂ ಮುಖ್ಯ ಕಾರ್ಯನಿವರ್ಾಹಕ ಅಧಿಕಾರಿ ಶಶಿಧರ ಶಿರಸಂಗಿ ಇವರು ಪ್ರಶಸ್ತಿಯನ್ನು ಪಡೆಯುವದರ ಮೂಲಕ ಸಂಸ್ಥೆಯ ಮಡಿಲಿಗೆ ಹಾಕಿಕೊಂಡಿದ್ದಾರೆ.

ಈ ಪ್ರಶಸ್ತಿ ಸಂದ ಕಾರಣಕ್ಕಾಗಿ ಆಸರೆ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಹಾಗೂ ಸಾಹಿತಿ ಎಂ. ಮಂಜುನಾಥ ಬಮ್ಮನಕಟ್ಟಿ, ಸಂಸ್ಥೆಯ ಪದಾಧಿಕಾರಿಗಳು ಹಾಗೂ ಸಂಸ್ಥೆಯ ಹಿತೈಸಿಗಳು ಸಂಸ್ಥೆಯು ಮುಂದೆ ಇನ್ನೂ ಹೆಚ್ಚಿನ ಸಮಾಜಮುಖಿ ಸೇವೆಯನ್ನು ಮಾಡಲಿ ಎಂದು ಆಶೀರ್ವಾದ ಮಾಡಿ ಹಾರೈಸಿದ್ದಾರೆ.