ಶ್ರೀನಗರ, ಜ 28 : ಜಮ್ಮು-ಕಾಶ್ಮೀರದ ಬೇಸಿಗೆ ರಾಜಧಾನಿ ಶ್ರೀನಗರ, ವಿಶ್ವಪ್ರಸಿದ್ಧ ಸ್ಕೀ, ಗುಲ್ಮಾರ್ಗ್ ಮತ್ತು ಕಾಶ್ಮೀರ ಕಣಿವೆಯ ಇತರ ಭಾಗಗಳಲ್ಲಿ ಹೊಸದಾಗಿ ಹಿಮಪಾತವುಂಟಾದ ಪರಿಣಾಮ ತೀವ್ರ ಚಳಿಯ ಹವಾಮಾನ ಪರಿಸ್ಥಿತಿ ಎದುರಾಗಿದೆ.
ಆದರೂ, ಕಣಿವೆಯ ಹೆಚ್ಚಿನ ಪ್ರದೇಶಗಳಲ್ಲಿ ರಾತ್ರಿಯ ಉಷ್ಣತೆ ಸುಧಾರಿಸಿದೆ ಮತ್ತು ಸಾಮಾನ್ಯಕ್ಕಿಂತ ಹೆಚ್ಚಾಗಿದೆ. ಮುಂದಿನ 24 ಗಂಟೆಗಳಲ್ಲಿ ಕಣಿವೆಯ ಹೆಚ್ಚಿನ ಸ್ಥಳಗಳಲ್ಲಿ ಭಾರೀ ಹಿಮಪಾತವಾಗಲಿದೆ ಎಂದು ಹವಾಮಾನ ಇಲಾಖೆ ವಕ್ತಾರರು ಯುಎನ್‌ಐಗೆ ತಿಳಿಸಿದ್ದಾರೆ.
ಹವಾಮಾನ ಸುಧಾರಣೆಯ ಹೊರತಾಗಿಯೂ, ಡ್ರಾಸ್ ಪ್ರದೇಶದಲ್ಲಿ ತಾಪಮಾನ ಮೈನಸ್ 21.2 ಡಿಗ್ರಿಗೆ ಇಳಿದು ಕಣಿವೆಯ ಅತಿ ಶೀತದ ಪ್ರದೇಶವಾಗಿದೆ. ಲೇಹ್ ನಲ್ಲಿ ತಾಪಮಾನ ಮೈನಸ್ 13.5 ಡಿಗ್ರಿಗೆ ಇಳಿದಿದೆ. ಉತ್ತರ ಕಾಶ್ಮೀರದ ಇಲ್ಲಿಂದ ಸುಮಾರು 55 ಕಿ.ಮೀ ದೂರದ ಗುಲ್ಮಾರ್ಗ್ ಇಂದು ಮುಂಜಾನೆಯಿಂದ ಹೊಸದಾಗಿ ಹಿಮ ಸುರಿಯುತ್ತಿದೆ. ಇದರ ಪರಿಣಾಮವಾಗಿ ದಿನದ ತಾಪಮಾನ ಮತ್ತಷ್ಟು ಕುಸಿದಿದೆ. ಗುಲ್ಮಾರ್ಗ್‌ನ ಕೇಬಲ್ ಕಾರ್ ಯೋಜನೆಯಿರುವ ಕೊಂಗ್‌ಡೋರಿ ಯಲ್ಲೂ ಭಾರೀ ಹಿಮಪಾತ ಉಂಟಾಗಿದೆ. ಸ್ಕೀ ರೆಸಾರ್ಟ್‌ನಲ್ಲಿ ರಾತ್ರಿಯ ತಾಪಮಾನ ಸುಮಾರು 2 ಡಿಗ್ರಿಗಳಷ್ಟು ಸುಧಾರಿಸಿ, ಮೈನಸ್ 8.2 ಡಿಗ್ರಿಗೆ ಇಳಿದಿದೆ.
‘ಇಂದು ಬೆಳಿಗ್ಗೆಯಿಂದ ಹಿಮದ ಹೊರತಾಗಿಯೂ, ಪ್ರವಾಸಿಗರು ಸ್ಕೀ ಇಳಿಜಾರುಗಳಲ್ಲಿ ಸಾಗುತ್ತಿದ್ದಾರೆ. ಅಡಿಗಳಷ್ಟು ಹಿಮದಿಂದ ಆವರಿಸಿರುವ ಈ ಪ್ರದೇಶದಲ್ಲಿ ಪ್ರವಾಸಿಗರು ವಿವಿಧ ಚಟುವಟಿಕೆಗಳಿಂದ ಆನಂದಿಸಿಸುತ್ತಿದ್ದಾರೆ ಎಂದು ಅಧಿಕಾರಿಯೊಬ್ಬರು ಯುಎನ್‍ಐಗೆ ತಿಳಿಸಿದ್ದಾರೆ.