ಮಹಾಲಿಂಗಪುರ 09: ಭಾರತೀಯ ಜನತಾ ಪಾರ್ಟಿಯ ತೇರದಾಳ ಮತಕ್ಷೇತ್ರದ ಬಿಜೆಪಿ ಮಹಿಳಾ ಮೋರ್ಚ ನೂತನ ಅಧ್ಯಕ್ಷರಾಗಿ ಸ್ನೇಹಲ್ ಶಿವಾನಂದ ಅಂಗಡಿ ಅವರನ್ನು ನೇಮಕ ಮಾಡಲಾಗಿದೆ.
ತಾವು ಪಕ್ಷದ ಕಾರ್ಯಚಟುವಟಿಕೆಯಲ್ಲಿ ನಿರಂತರವಾಗಿ ಭಾಗವಹಿಸಿ, ತಮಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಕವಾಗಿ ನಿಭಾಯಿಸಿ, ಪಕ್ಷಕ್ಕಾಗಿ ಅವಿರತವಾದ ಸೇವೆಯನ್ನು ಸಲ್ಲಿಸಬೇಕು ಎಂದು ಭಾರತೀಯ ಜನತಾ ಪಾರ್ಟಿ, ಗ್ರಾಮೀಣ ಮಂಡಳ ತೇರದಾಳ ಮತ ಕ್ಷೇತ್ರದ ಅಧ್ಯಕ್ಷರಾದ ಸುರೇಶ ಅಕ್ಕಿವಾಟ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.